ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಡೆವಿಲ್ ಶೂಟಿಂಗ್ ಭರದಿಂದ ಸಾಗುತ್ತಿದೆ. ಮೈಸೂರಿನಲ್ಲಿ ಶೂಟಿಂಗ್ ಮುಗಿಸಿ ರಾಜಸ್ತಾನದಲ್ಲಿ ಇಡೀ ತಂಡ ಬೀಡುಬಿಟ್ಟಿದೆ. ಡೆವಿಲ್ ಮೂರನೇ ಹಂತದ ಚಿತ್ರೀಕರಣ ರಾಜಸ್ತಾನದ ಉದಯಪುರ್‌ದಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆಯುತ್ತಿದ್ದು, ನಟ ದರ್ಶನ್, ನಟಿ ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತಕುಮಾರ್ ಮುಂತಾದ ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ರಾಜಸ್ತಾನದ ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟಿ ರಚನಾ ರೈ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಗಂತ ಶೂಟಿಂಗ್ ಫೋಟೋಗಳಲ್ಲ. ಬದಲಾಗಿ ಚಿತ್ರೀಕರಣ ಮುಗಿಯುತ್ತಿದ್ದಂತೆ ಉದಯಪುರದ ಕರ್ಣಿ ಮಾತಾ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ, ಅಲ್ಲದೇ ಉದಯಪುರ ಸೌಂದರ್ಯಕ್ಕೆ ಫಿದಾ ಆಗಿ, ಉದಯ್ ಪುರ್ ಯು ಸಿಟಿ ಎಂದು ಹಾರ್ಟ್ ಸಿಂಬಲ್ ಆಗಿದ್ದಾರೆ.
ಡೆವಿಲ್ ಸಿನಿಮಾ ಮೂಲಕ ರಚನಾ ರೈ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಬ್ಯಾಡ್ಮಿಂಟನ್ ಪ್ಲೇಯರ್ ಆಗಿರುವ ಈ ತುಳುನಾಡ ಚೆಲುವೆ, ಮಾಡೆಲ್, ಡ್ಯಾನ್ಸರ್ ಹಾಗೇ ಬರಹಗಾರ್ತಿ ಕೂಡ. ಓ ಮೈ ಡಾಗ್ ಎಂಬ ಪುಸ್ತಕ ಬರೆದಿರುವ ರಚನಾ ಸಕಲಕಲಾವಲ್ಲಭೆ.