ಕೊಪ್ಪಳ : ಕೋರ್ಟ್ ಕಾರನ್ನು ಜಪ್ತಿ ಮಾಡುವ ಆದೇಶ ನೀಡಿದ ನಡುವೆಯೇ ಜಿಲ್ಲಾಧಿಕಾರಿ ತಮ್ಮ ಕಾರನ್ನು ಸರ್ವೀಸ್‌ಗೆ ಬಿಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೊಸಪೇಟೆ ಟೊಯೋಟಾ ಶೋ ರೂಂನಲ್ಲಿ ಕೊಪ್ಪಳ ಡಿಸಿ ಕಾರು ಪತ್ತೆಯಾಗಿದ್ದು, ಕೋರ್ಟ್ ಆದೇಶದ ನೀಡಿದ ಬಳಿಕ ಕಾರು ಸರ್ವಿಸ್ ಮಾಡಿಸುವ ಅಗತ್ಯ ಇದ್ಯಾ ಅಥವಾ ಜಪ್ತಿಯಿಂದ ತಪ್ಪಿಸಿಕೊಳ್ಳುವ ನೆಪವಾ ಎಂಬ ಪ್ರಶ್ನೆ ಮೂಡಿದೆ.
ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ; ಕಾನೂನು ಸಚಿವರು ಹೇಳಿದಿಷ್ಟು..
ಏನಿದು ಪ್ರಕರಣ..?
ಗಂಗಾವತಿ ನಗರಸಭೆ ಮಾಲೀಕರಿಗೆ ಮಾಹಿತಿ ನೀಡದೇ ಖಾಸಗಿ ಭೂಮಿಯಲ್ಲಿ ರಸ್ತೆ ನಿರ್ಮಿಸಿತ್ತು. ಈ ಸಂಬಂಧ ಹಿನ್ನೆಲೆ ಗಂಗಾವತಿ ಕಲ್ಮಠ ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲೇರಿದ್ದು, ಪರಿಹಾರಕ್ಕೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ನೀಡಿತ್ತು. ಆದರೆ ಜಿಲ್ಲಾಧಿಕಾರಿ ನಳಿನ್ ಅತುಲ್ ನ್ಯಾಯಾಲಯ ಸೂಚನೆಯನ್ನು ನಿರ್ಲಕ್ಷ್ಯ ಮಾಡಿದ್ದರು. ಈ ಸಂಬಂಧ ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯವು ಡಿಸಿ ಕಾರ್ ಜಪ್ತಿಗೆ ಆದೇಶ ನೀಡಿತ್ತು.
ಆದರೆ ಈ ಆದೇಸ ಬಂದ ಬಳಿಕ ಜಿಲ್ಲಾಧಿಕಾರಿ ಸರ್ಕಾರಿ ವಾಹನ ಸಂಖ್ಯೆ ಕೆಎ 01 ಜಿ 9869 ಹೊಸಪೇಟೆಯ ಟೊಯೋಟಾ ಶೋ ರೂಂಗೆ ಶಿಫ್ಟ್ ಮಾಡಲಾಗಿದೆ. ಏಪ್ರಿಲ್ 17 ರಂದು ಕಾರು ಜಪ್ತಿಗೆ ಬಂದಿದ್ದಾಗ ಜಿಲ್ಲಾಧಿಕಾರಿಗಳು ಕೀ ಕೊಟ್ಟಿರಲಿಲ್ಲ. ಒಂದೆಡೆ ಜಿಲ್ಲಾಧಿಕಾರಿಗಳಾದ ನಳಿನ್ ಅತುಲ್ ಕಚೇರಿಗೆ ಬಂದಿಲ್ಲ. ಮತ್ತೊಂದೆಡೆ ಅವರು ಬಳಸುವ ಸರ್ಕಾರಿ ಕಾರು ಹೊಸಪೇಟೆ ಶೋ ರೂಂ ಲ್ಲಿ ಸರ್ವಿಸ್ ಗೆ ಶಿಫ್ಟ್ ಮಾಡಲಾಗಿದೆ. ನ್ಯಾಯಾಲಯ ಜಪ್ತಿಗೆ ಆದೇಶ ಮಾಡಿರುವ ಕಾರು ಸರ್ವೀಸ್‌ಗೆ ಬಿಟ್ಟಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.