ಚಾಮರಾಜನಗರ:- ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಓಂಕಾರ ವಲಯದ ಶ್ರೀಕಂಠಪುರ ಗುಡ್ಡದಲ್ಲಿ ಕೊಳೆತ ಸ್ಥಿತಿಯಲ್ಲಿ ಗಂಡು ಹುಲಿ ಮೃತದೇಹ ಪತ್ತೆಯಾಗಿರುವ ಘಟನೆ ಜರುಗಿದೆ.
ಬಾಂಬ್ ಸ್ಫೋಟ: ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಸುಟ್ಟುಭಸ್ಮ, 7 ಮಂದಿ ಸಾವು!
ಸುಮಾರು 8 ರಿಂದ 9 ವರ್ಷದ ಗಂಡು ಹುಲಿ ಇದಾಗಿದೆ ಎನ್ನಲಾಗಿದೆ. ವಾಚರ್, ಬೀಟ್ ಫಾರೆಸ್ಟ್ ಅಧಿಕಾರಿಗಳ ಕಣ್ಣಿಗೆ ಹುಲಿ ಕಳೇಬರ ಬಿದ್ದಿದೆ. ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಎನ್ಟಿಸಿಎ ಗೈಡ್ಲೈನ್ಸ್ ಅನ್ವಯ ಹುಲಿಯ ಅಂತ್ಯಕ್ರಿಯೆಯನ್ನು ಅರಣ್ಯಾಧಿಕಾರಿಗಳು ನಡೆಸಿದ್ದಾರೆ.