ರಾಯಚೂರು: ಸರ್ಕಾರಿ ಜಿಲ್ಲಾಸ್ಪ್ರತ್ರೆಗಳಲ್ಲಿ ಬಾಣಂತಿಯರ ಸಾವಿನ ಪ್ರಕರಣ ಮುಂದುವರಿದಿದ್ದು, ಇದೀಗ ಮತ್ತೊರ್ವ ಬಾಣಂತಿ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಶ್ರೀ ಶರಣಬಸವೇಶ್ವರ ನರ್ಸಿಂಗ್ ಹೋಮ್‌ನಲ್ಲಿ ನಡೆದಿದೆ. ಸಿದ್ದಮ್ಮ (20) ಮೃತ ದುರ್ಧೈವಿಯಾಗಿದ್ದು,
ಸಿದ್ದಮ್ಮ ಅವರಿಗೆ ಶ್ರೀ ಶರಣಬಸವೇಶ್ವರ ನರ್ಸಿಂಗ್ ಹೋಮ್‌ನಲ್ಲಿ ಪ್ರಸವ ನಡೆದಿತ್ತು. ಆದರೆ, ಡೆಲಿವರಿ ಬಳಿಕ ಸರಿಯಾಗಿ ಹೊಲಿಗೆ ಹಾಕದಿರುವುದರಿಂದ ಸಮಸ್ಯೆ ಉಂಟಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ನೀವು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿನ್ನುತ್ತೀರಾ!? ಹಾಗಿದ್ರೆ ಈ ಸುದ್ದಿ ನೋಡಿ!
ಹೊಲಿಗೆ ಬಿಚ್ಚಿಹೋಗಿದ್ದರಿಂದ ಸಿದ್ದಮ್ಮಗೆ ತೀವ್ರ ಜ್ವರ ಕಾಣಿಸಿಕೊಂಡಿತು, ಇದು ಆಕೆಯ ಸಾವಿಗೆ ಕಾರಣವಾಯಿತು ಎಂದು ಆರೋಪಿಸಲಾಗಿದೆ. ಈ ಘಟನೆಯನ್ನು ಆಸ್ಪತ್ರೆಯ ವೈದ್ಯರಾದ ಡಾ. ಸೌಮ್ಯ ಗುಂಡೂರು ಅವರ ನಿರ್ಲಕ್ಷ್ಯಕ್ಕೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.