ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ಮತ್ತೆ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ಬರಲು ಸಜ್ಜಾಗಿದ್ದಾರೆ. ತಾಯಿ ಆಗಿ ಬಡ್ತಿ ಪಡೆದ ಮೇಲೆ ಅವರು ಇಂಡಸ್ಟ್ರೀಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ.
ಶಾರುಖ್ ಖಾನ್ ನಟಿಸಲಿರೋ ಬಹು ನಿರೀಕ್ಷಿತ ಕಿಂಗ್ ಸಿನಿಮಾದ ಶೂಟಿಂಗ್ ಇಷ್ಟರಲ್ಲೇ ಆರಂಭವಾಗಲಿದೆ. ಈ ಸಿನಿಮಾದ ಅನೌನ್ಸ್ ಬೆನ್ನಲ್ಲೇ ಸಿನಿಮಾದ ನಾಯಕಿ ಯಾರು ಅನ್ನೋ ಚರ್ಚೆ ಶುರುವಾಗಿತ್ತು. ಇದಕ್ಕೀಗ ಉತ್ತರ ಸಿಕ್ಕಿದ್ದು ದೀಪಿಕಾ ಪಡುಕೋಣೆ, ಶಾರುಖ್ಗೆ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಇದೇ ತಿಂಗಳ 18 ರಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.
ಡಾರ್ಲಿಂಗ್ ಪ್ರಭಾಸ್ ನಟಿಸುತ್ತಿರುವ ಸ್ಪಿರಿಟ್ ಸಿನಿಮಾಗೂ ದೀಪಿಕಾನೇ ನಾಯಕಿಯಂತೆ. ಅಕ್ಟೋಬರ್ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಹಿಂದೆ ಕಲ್ಕಿ ಸಿನಿಮಾದಲ್ಲಿ ಪ್ರಭಾಸ್ ಹಾಗೂ ದೀಪಿಕಾ ಒಟ್ಟಿಗೆ ನಟಿಸಿದ್ದರು. ಆದಾದ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದೆ. ಅನಿಮಲ್, ಅರ್ಜುನ್ ರೆಡ್ಡಿಸಿನಿಮಾಗಳ ಸಾರಥಿ ಸಂದೀಪ್ ರೆಡ್ಡಿ ವಂಗಾ ಸ್ಪಿರಿಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.