ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಖಾಮುಖಿಯಾಗಲಿದೆ. ಈವರೆಗೆ ತವರಿನಿಂದ ಹೊರಗೆ ಆಡಿರುವ ಎಲ್ಲಾ ಐದು ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸಿರುವು ಆರ್ ಸಿಬಿ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ರೈಲ್ವೇ ಇಲಾಖೆಯಿಂದ 5 ಲಕ್ಷಕ್ಕೂ ಅಧಿಕ ಯುವಕರಿಗೆ ಉದ್ಯೋಗ- ಸೋಮಣ್ಣ!
ತವರಿನಿಂದ ಹೊರಗೆ ಬಲಿಷ್ಠ ತಂಡಗಳನ್ನೇ ಮಟ್ಟ ಹಾಕಿರುವ ಆರ್ ಸಿಬಿ ಭಾನುವಾರ ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಏಪ್ರಿಲ್ 27ರಂದು ಭಾನುವಾರ ಸಂಜೆ 7.30ಕ್ಕೆ ಈ ಪಂದ್ಯ ನಡೆಯಲಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬಲಿಷ್ಠ ತಂಡಗಳು ಮುಖಾಮುಖಿಯಾಗಲಿವೆ.
ಈ ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್ ಸಿಬಿ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು, ಕರ್ನಾಟಕದ ಆಟಗಾರ ಕೆಎಲ್ ರಾಹುಲ್ ಅಜೇಯ ಅರ್ಧಶತಕ ಸಿಡಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಗೆಲುವು ತಂದುಕೊಟ್ಟಿದ್ದರು. ಗೆಲುವಿನ ಬಳಿಕ ಕೆಎಲ್ ರಾಹುಲ್ ಸಂಭ್ರಮಾಚರಣೆ ಮಾಡಿದ್ದು ಸಾಕಷ್ಟು ಗಮನ ಸೆಳೆದಿತ್ತು.
ಗೆಲುವಿನ ರನ್ ಗಳಿಸಿದ ಬಳಿಕ ಕೆಎಲ್ ರಾಹುಲ್ ಬ್ಯಾಟ್‌ನಿಂದ ವೃತ್ತ ಬರೆದು ಇದು ನನ್ನ ಅಂಗಳ ಎಂದು ಸನ್ನೆ ಮಾಡಿದ್ದರು. ಇದೀಗ ಆರ್ ಸಿಬಿ ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಇದು ವಿರಾಟ್ ಕೊಹ್ಲಿ ಅವರ ತವರಿನ ಅಂಗಳವಾಗಿದ್ದು ಬೆಂಗಳೂರಿನ ಸೋಲಿನ ಲೆಕ್ಕವನ್ನು ದೆಹಲಿಯಲ್ಲಿ ಗೆದ್ದು ತೀರಿಸುವ ಲೆಕ್ಕಾಚಾರದಲ್ಲಿದೆ
ಆರ್ ಸಿಬಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಲಯ ಕಂಡುಕೊಂಡಿದೆ. ದೇವದತ್ ಪಡಿಕ್ಕಲ್ ಪ್ರತಿ ಪಂದ್ಯದಲ್ಲಿ ರನ್ ಗಳಿಸುತ್ತಿರುವುದು ತಂಡದ ಬ್ಯಾಟಿಂಗ್‌ಗೆ ಹೆಚ್ಚಿನ ಶಕ್ತಿ ತಂದಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲುವ ಪಂದ್ಯವನ್ನು ಆರ್ ಸಿಬಿ ಬೌಲರ್ ಗಳು ಗೆಲ್ಲಿಸಿಕೊಟ್ಟಿದ್ದು ತಂಡದ ಬೌಲಿಂಗ್ ವಿಭಾಗದ ಆತ್ಮವಿಶ್ವಾಸ ಹೆಚ್ಚಿಸಿದೆ.