ಗದಗ:- ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಕ್ಫ್ ಅಧಿಕಾರಿ ಲೋಕಾ ಬಲೆಗೆ ಬಿದ್ದಿರುವ ಘಟನೆ ಗದಗದಲ್ಲಿ ಜರುಗಿದೆ. ರೆಹಮತ್ತುಲ್ಲಾ ಪೆಂಡಾರಿ ಲೋಕಾ ಬಲೆಗೆ ಬಿದ್ದ ಅಧಿಕಾರಿ.
ಮುಳಗುಂದ ಮಸೀದಿಗೆ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಪತ್ರ ರವಾನಿಸಲು ಅಧಿಕಾರಿ ರೆಹಮತ್ತುಲ್ಲಾ ಅವರು ಎಸ್ ಎ ಮಕಾನದಾರ್ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಲೋಕಾಯುಕ್ತಕ್ಕೆ ಎಸ್ ಎ ಮಕಾನದಾರ್ ದೂರು ಕೊಟ್ಟಿದ್ದರು. ದೂರಿನ ಅನ್ವಯ ದಾಳಿ ನಡೆಸಿದ ಲೋಕಾ ಆ್ಯಂಡ್ ಟೀಮ್, ವಕ್ಫ್ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ.