ಬೆಂಗಳೂರು:- ನಗರದಲ್ಲಿ ಡೆಂಘಿ ಭೀತಿ ಹೆಚ್ಚಾಗಿದ್ದು, ಸಿಟಿ ಮಂದಿ ಗಾಬರಿಗೊಂಡಿದ್ದಾರೆ. ಕಳೆದ ಮೂರುವರೇ ತಿಂಗಳಲ್ಲಿ 2,361 ಡೆಂಘಿ ಶಂಕಿತರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ 435 ಮಂದಿಯಲ್ಲಿ ಡೆಂಘಿ ದೃಢಪಟ್ಟಿದೆ. ರಾಜಧಾನಿಯಲ್ಲಿ ಈಗ ಡೆಂಘಿ ಭೀತಿ ಶುರುವಾಗಿದೆ. ಅಕಾಲಿಕ ಬೇಸಿಗೆಯ ಮಳೆಗೂ ಡೆಂಘಿ ಪ್ರಕರಣ ಕಂಡು ಬರುತ್ತಿವೆ. ಕಳೆದ ವಾರದ ಹಿಂದಷ್ಟೆ ನಗರದಲ್ಲಿ ಸುರಿದ ಮಳೆಯಿಂದ ಡೆಂಘಿ ಹರಡುವ ಸಾಧ್ಯತೆ ಹೆಚ್ಚಿದೆ.
ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಡೆಂಘಿ ಕೇಸ್ ಹೆಚ್ಚಳವಾಗಿವೆ. ಪೂರ್ವ ಮುಂಗಾರು ಮಳೆ ಎಫೆಕ್ಟ್ ಬೇಸಿಗೆಯಲ್ಲಿಯೇ ಡೆಂಘಿ ಕೇಸ್ ಹೆಚ್ಚಳ ಕಂಡು ಬರುತ್ತಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಕರಣಗಳು ವರದಿಯಾಗಿದ್ದು, 2,361 ಡೆಂಘಿ ಶಂಕಿತರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ ನಗರದಲ್ಲಿ 435 ಮಂದಿಯಲ್ಲಿ ಡೆಂಘಿ ದೃಢಪಟ್ಟಿದೆ.
ಪ್ರತಿ ವರ್ಷ ಮುಂಗಾರು ಮಳೆ ಕಾಣಿಸಿಕೊಂಡ ಬಳಿಕ ಈ ಜ್ವರ ಹೆಚ್ಚಿನವರನ್ನು ಬಾಧಿಸುತ್ತಿತ್ತು. ಆದರೆ ಈಗ ಬೇಸಿಗೆಯಲ್ಲಿಯೇ ಸೊಳ್ಳೆ ಕಾಟದಿಂದ ಡೆಂಘಿ ಜ್ವರ ಹೆಚ್ಚಳವಾಗಿದೆ. ಕಳೆದ ವರ್ಷ ಡೆಂಘಿ ಕೇಸ್ 32 ಸಾವಿರದ ಗಡಿ ದಾಟಿತ್ತು. ಈ ವರ್ಷ ಏಪ್ರಿಲ್ನಲ್ಲಿ ಸುರಿದ ಮಳೆಯಿಂದಾಗಿ ಮುಂಗಾರು ಪೂರ್ವದಲ್ಲಿಯೇ ಡೆಂಘಿ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆಯಿದ್ದು, ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಬೆಂಗಳೂರು ನಗರ ಸೇರಿದ್ದಂತೆ ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೂ ಡೆಂಘಿ ನಿಯಂತ್ರಣದ ಬಗ್ಗೆ ಮುನ್ನೆಚ್ಚರಿಕೆಗಳ ಬಗ್ಗೆ ಸೂಚನೆ ನೀಡಿದೆ.