ಕಲುಬುರಗಿ: MLC ರವಿಕುಮಾರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು FIR ದಾಖಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಖ್ಯ ಕಾರ್ಯದರ್ಶಿಗಳ ಬಗ್ಗೆ ಮಾತನಾಡಿ ಕೊಳಲು ಮನಸ್ಸು ಪ್ರದರ್ಶನ ಮಾಡಿದ ರವಿಕುಮಾರ್ ಆ ರೀತಿ ಅಶ್ಲೀಲ ಮಾತನಾಡಿಲ್ಲ.
ಅಶ್ಲೀಲ ಹೇಳಿಕೆ ನೀಡಿದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಬೇರೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದು ಅವರಿಗೆ ನಾಚಿಕೆ ಆಗಬೇಕು. ವಿಧಾನಸೌಧದ ಎದುರಿಗೆ ಮಾತನಾಡಿದ ವಿಡಿಯೋವೇ ಸಾಕ್ಷಿಯಾಗಿದೆ. ಹಗ್ಗ ಕೊಡಿ ರವಿಕುಮಾರ್ ನೇಣು ಹಾಕಿಕೊಳ್ಳಲಿ ಎಂದು ಗುಡುಗಿದ್ದಾರೆ.
ಮಹಿಳೆಯರಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣ ಈ ಮಾತ್ರೆ ; ಈ ಬಗ್ಗೆ ಇರಲಿ ಎಚ್ಚರ..
ಸಂವಿಧಾನದ ಮೇಲೆ ನಂಬಿಕೆ ಇಡದ ಆರ್‌ಎಸ್‌ಎಸ್‌ಗೆ ಮನುಸ್ಮೃತಿ ಪಾಲಿಸುತ್ತದೆ. ಮನುಸ್ಮೃತಿ ಮಹಿಳೆಯರನ್ನು ಹೇಗೆ ನಡೆದುಕೊಳ್ಳುತ್ತದೆ ಎಂದು ನಮ್ಮೆಲ್ಲರಿಗೂ ತಿಳಿದಿದೆ. ಇದೆಲ್ಲವೂ ಬಿಜೆಪಿಗೆ ಆರ್‌ಎಸ್‌ಎಸ್ ಕಲಿಸಿದ ಪಾಠದಿಂದ ಬಂದಿದೆ. ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವ, ದೌರ್ಜನ್ಯ ನೀಡುವ, ಪೋಕ್ಸೋ ಅತ್ಯಾಚಾರಿಗಳು ಬಿಜೆಪಿಯಲ್ಲೇ ಇದ್ದಾರೆ. ಸಮರ್ಥನೆ ಮಾಡಿಕೊಳ್ಳುವ ಬಿಜೆಪಿ ನಾಯಕರು ಮೊದಲು ತಮ್ಮ ಮನೆಯಲ್ಲಿ ಮನುಸ್ಮೃತಿ ಜಾರಿಗೆ ತರಲಿ ನೋಡಣ ಎಂದು ಸವಾಲ್ ಹಾಕಿದ್ದಾರೆ.