ಕ್ರಿಕೆಟ್ಗೂ ಸಿನಿಮಾರಂಗಕ್ಕೂ ಒಂದು ನಂಟಿದೆ. ಆರ್ಸಿಬಿ ಸ್ಟಾರ್ ಫ್ಲೇಯರ್ ವಿರಾಟ್ ಕೊಹ್ಲಿ ಕೈ ಹಿಡಿದಿರುವುದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು. ಹಾಗೇಯೇ ಕನ್ನಡದ ಹುಡ್ಗ ಕೆಎಲ್ ರಾಹುಲ್ ಕೂಡ ವರಿಸಿರುವುದು ನಟ ಸುನಿಲ್ ಶೆಟ್ಟಿ ಪುತ್ರ ಆಥಿಯಾ ಶೆಟ್ಟಿ ಅವರನ್ನು. ಇದೀಗ ಮತ್ತೊಮ್ಮೆ ಆರ್ಸಿಬಿ ಫ್ಲೇಯರ್ ಹೆಸರು ಕನ್ನಡ ಖ್ಯಾತ ನಟಿ ಜೊತೆ ಕೇಳಿಬಂದಿದೆ.
ನಿನ್ನ ಸನಿಹಕೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಲಗಾಲಿಟ್ಟ ಧನ್ಯಾ ರಾಮ್ ಕುಮಾರ್ ಪ್ರೀತಿಯಲ್ಲಿ ಬಿದ್ರಾ? ಅದು ಲೋಕಲ್ ಬಾಯ್ ದೇವದತ್ ಪಡಿಕಲ್ ಅವರಿಗೆ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಧನ್ಯಾ ಅವರಿಗೂ ಕ್ರಿಕೆಟ್ ಅಂದ್ರೆ ಇಷ್ಟ. ಐಪಿಎಲ್ ನೋಡುವ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ಪಂದ್ಯ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದಾರೆ. ಈ ವೇಳೆ ಧನ್ಯ ದೇವದತ್ ಪಡಿಕಲ್ ಜರ್ಸಿ ತೊಟ್ಟು ಗೆಳೆಯರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಧನ್ಯತಾ ಪಡಿಕ್ಕಲ್ ಜೆರ್ಸಿ ತೊಟ್ಟಿರುವುದನ್ನು ನೋಡಿ ಇಲ್ಲಿ ಏನೋ ನಡೆಯುತ್ತಿದೆ ಅಂತಾ ಟ್ರೋಲ್ ಪೇಜ್ಗಳು ಪೋಸ್ಟರ್ ಹಾಕಿದ್ದಾರೆ. ದೇವದತ್ ಪಡಿಕ್ಕಲ್ ಬೆಂಗಳೂರು ಹುಡ್ಗ. ಈ ಬಾರಿ ಐಪಿಎಲ್ನಲ್ಲಿ ಶೈನ್ ಆಗುತ್ತಿದ್ದಾರೆ. ವಿರಾಟ್ ಕೊಹ್ಲಿ ದೇದವತ್ ಜೊತೆಯಾಟ ಕ್ರಿಕೆಟ್ ಪ್ರೇಮಿಗಳನ್ನು ಇಂಪ್ರೆಸ್ ಮಾಡಿದೆ. ಇದೀಗ ದೇವದತ್ ಪಡಿಕ್ಕಲ್ ಹಾಗೂ ಧನ್ಯತಾ ನಡುವೆ ಏನೋ ಇದೆ ಎಂಬ ಸುದ್ದಿ ಜೋರಾಗಿ ಹಬ್ಬಿದೆ.