ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು ಡೆವಿಲ್. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲಾಗಲೇ ಡಿಬಾಸ್ ತೆರೆಯಲ್ಲಿ ಹೊಸ ಅವತಾರದಲ್ಲಿ ದರ್ಶನ ಕೊಡಬೇಕಿತ್ತು. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್ನಡಿ ದರ್ಶನ್ ಸೆರೆಮನೆ ವಾಸ ಅನುಭವಿಸಬೇಕಾಯಿತು. ಹೀಗಾಗಿ ಶೂಟಿಂಗ್ ಪೋಸ್ಟ್ ಪೋನ್ ಆಗಿತ್ತು. ಜಮೀನಿನ ಮೇಲೆ ಹೊರಬಂದಿರುವ ದರ್ಶನ್ ಡೆವಿಲ್ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕಳೆದ ತಿಂಗಳೇ ಡೆವಿಲ್ ಸಿನಿಮಾದ ಟಾಕಿ ಭಾಗದ ಚಿತ್ರೀಕರಣಕ್ಕೆ ಫುಲ್ಸ್ಟಾಪ್ ಬಿದ್ದಿತ್ತು. ಇದರ ನಡುವೆ ದಾಸನ ಕನ್ವರ್ಲಾಲ್ ಗೆಟಪ್ ಪೋಸ್ಟರ್ ವೈರಲ್ ಆಗಿತ್ತು.
ಸದ್ಯ ಡೆವಿಲ್ ಚಿತ್ರದ ಬಾಕಿ ಉಳಿದಿರುವ ಎರಡು ಹಾಡಿನ ಚಿತ್ರೀಕರಣಲ್ಲಿ ಒಂದು ಹಾಡನ್ನ ಇದೇ ವಾರ ಚಿತ್ರೀಕರಿಸಿಕೊಳ್ಳಲಿರುವ ತಂಡ ಬಾಕಿ ಉಳಿದಿರುವ ಫೈಟ್ಸೀನ್ ಚಿತ್ರೀಕರಣವನ್ನೂ ಇದೇ ವಾರವೇ ಮುಗಿಸಲಿದೆ. ಹೆಚ್ಚುಕಮ್ಮಿ ಈ ತಿಂಗಳಲ್ಲೇ ಡೆವಿಲ್ ಶೂಟಿಂಗ್ ಮುಕ್ತಾಯವಾಗಲಿದೆ.
ಇಂದಿನಿಂದ ಆಕ್ಷನ್ ಸೀನ್ಸ್ ಚಿತ್ರೀಕರಣ ನಡೆಯಲಿದೆ. ಬಾಕಿ ಉಳಿದಿರುವ ಇನ್ನೊಂದು ಹಾಡನ್ನ ವಿದೇಶದಲ್ಲಿ ಚಿತ್ರೀಕರಿಸಿಕೊಳ್ಳಲು ಪ್ಲ್ಯಾನ್ ರೆಡಿಯಾಗಿದ್ದು, ಮುಂದಿನ ತಿಂಗಳು ಮೊದಲ ವಾರದಲ್ಲೇ ದರ್ಶನ್ ವಿದೇಶ ಪ್ರಯಾಣ ಬೆಳೆಸಲಿದ್ದಾರೆ.
ವಿದೇಶಕ್ಕೆ ತೆರಳಲು ಈಗಾಗ್ಲೇ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿರುವ ದರ್ಶನ್, ಜುಲೈ ಮೊದಲ ವಾರದಲ್ಲಿ ಡೆವಿಲ್ ಹಾಡಿನ ಚಿತ್ರೀಕರಣಕ್ಕಾಗಿ ತಂಡದ ಜೊತೆ ಯುರೋಪ್ ದೇಶಗಳಿಗೆ ತೆರಳಲಿದ್ದಾರೆ. ಬಹುಶಃ ಸ್ವಿಜ್ಡರ್ಲ್ಯಾಂಡ್ನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ದುಬೈಗೂ ತೆರಳುವ ಸಂಭವ ಇದೆ.
ಈ ತಿಂಗಳಲ್ಲಿ ಕಂಪ್ಲೀಟ್ ಚಿತ್ರೀಕರಣ ಮುಗಿಸಲಿರುವ ಚಿತ್ರತಂಡ ಶೀಘ್ರದಲ್ಲೇ ರಿಲೀಸ್ ಡೇಟ್ ಘೋಷಣೆ ಮಾಡಲಿದೆ. ಇದೇ ವರ್ಷವೇ ದಾಸ ಹೊಸ ಅವತಾರದಲ್ಲಿ ದರ್ಶನ ಕೊಡಲಿದ್ದಾರೆ.