ಚಾಲೆಂಜಿಂಗ್ ಸ್ಟಾರ್ ಬಹುನಿರೀಕ್ಷಿತ ಸಿನಿಮಾ ಡೆವಿಲ್. ರಾಜಸ್ಥಾನದಲ್ಲಿ ಮೂರನೇ ಹಂತದ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರತಂಡವೀಗ ಸದ್ದಿಲ್ಲದೇ ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿದಿದೆ.ಕಳೆದ ಒಂದು ವಾರಗಳ ಕಾಲ ರಾಜಸ್ಥಾನದ ಜೈಪುರದಲ್ಲಿ ದರ್ಶನ್ ಹಾಗೂ ಇಡೀ ತಂಡ ಡೆವಿಲ್ ಶೂಟಿಂಗ್ ನಲ್ಲಿ ಭಾಗಿಯಾಗಿತ್ತು. ಅಲ್ಲಿಂದ ಶೂಟಿಂಗ್ ಮುಗಿಸಿ ವಾಸಪ್ ಆಗಿದ್ದ ಚಿತ್ರತಂಡ ನಾಲ್ಕನೇ ಹಂತದ ಚಿತ್ರೀಕರಣಕ್ಕೆ ಹೈದ್ರಾಬಾದ್ ಗೆ ಹೋಗಲಿದೆ ಎನ್ನಲಾಗಿತ್ತು. ಆದರೆ ಸದ್ದಿಲ್ಲದೇ ಬೆಂಗಳೂರಿನಲ್ಲಿಯೇ ಡೆವಿಲ್ 4ನೇ ಹಂತದ ಚಿತ್ರೀಕರಣ ನಡೆಸಲಾಗುತ್ತಿದೆ.
ಡೆವಿಲ್ ಲುಕ್ ನಲ್ಲಿ ದಾಸ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಶುಭ್ರ ಬಿಳಿಬಣ್ಣದ ಬಟ್ಟೆಯಲ್ಲಿ ಸಖತ್ ಸ್ಟೈಲೀಶ್ ಆಗಿ ದರ್ಶನ್ ಮಿಂಚಿದ್ದು, ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಕಾಶ್ ವೀರ್ ನಿರ್ದೇಶನದಲ್ಲಿ ಡೆವಿಲ್ ಸಿನಿಮಾ ತಯಾರಾಗುತ್ತಿದೆ. ದರ್ಶನ್ ಗೆ ಜೋಡಿಯಾಗಿ ಯುವ ನಟಿ ರಚನಾ ರೈ ಅಭಿನಯಿಸುತ್ತಿದ್ದಾರೆ. ಈ ವರ್ಷವೇ ಡೆವಿಲ್ ಸಿನಿಮಾ ತೆರೆಗೆ ಬರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.