ಹುಬ್ಬಳ್ಳಿ: ದೇಶ ವಿದೇಶಗಳಲ್ಲಿ ಶ್ರೀ ಬಸವೇಶ್ವರ ಜಯಂತಿಯನ್ನ ಭಾರೀ ಅದ್ದೂರಿಯಾಗಿ ಆಚರಣೆ ಮಾಡಲಾಗುತಿದ್ದು ನಮ್ಮ ರಾಜ್ಯದಲ್ಲಿ ಬಸವ ಜಯಂತಿ ಆಚರಣೆಗೆ ಸಾರ್ವಜನಿಕರು ಹಾಗೂ ಭಕ್ತರು ಬರಲು ಹಿಂದೇಟು ಮಾಡುತಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಳವಳ ವ್ಯಕ್ತಪಡಿಸಿದರು. ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ರೋತ್ಸವದ ಅಂಗವಾಗಿ ನಗರದ ಮೂರುಸಾವಿರ ಮಠದ ಆವರಣದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳ ಸಮಾರಂಭದ ಮುಖ್ಯ ಅತಿಯಾಗಿ ಆಗಮಿಸಿ ಅವರು ಮಾತನಾಡಿದರು.
ಪೊಲೀಸ್ ಅಧಿಕಾರಿಗಳ ಮಾನಸಿಕ ಸ್ಥೈರ್ಯ ಕುಸಿಯುತ್ತದೆ; ಶಾಸಕ ಮಹೇಶ ಟೆಂಗಿನಕಾಯಿ!
ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳ ಮಾತನಾಡಿ, ನಾಡಿನ ಮಠಗಳಲ್ಲಿ ಒಂದಾದ ಮೂರು ಸಾವಿರ ಮಠದಲ್ಲಿ ಬಸವೇಶ್ವರ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ ಬಸವೇಶ್ವರರ ಅನುಯಾಯಿಗಳು ಭಾಗವಹಿಸಬೇಕು ಎಂದರು. ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷೆ ಗಿರಿಜಾ ಎಸ್. ಹೂಗಾರ ಮಾತನಾಡಿ, ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದು ಇಂತಹ ಕಾರ್ಯಕ್ರಮಗಳು ನಾಡಿನ ಜನತೆಗೆ ಶ್ರೀ ಬಸವೇಶ್ವರರ ಕಾಲಾವಧಿ ಶರಣರ ತತ್ವ ವಚನಗಳು ಇನ್ನಷ್ಟು ತಿಳಿಯವಂತಹ ಆಗಬೇಕು ಎಂದರು.
ಮಹಿಳೆಯರಿಂದ ಮತ್ತು ಮಕ್ಕಳಿಂದ ಶ್ರೀ ಬಸವಣ್ಣನವರ ವಚನಗಳ ಗಾಯನ ಸ್ಪರ್ಧೆ, ಕುಮಾರಿ. ದಿಯಾ ಆವಾರಿ ಅವರಿಂದ ಭರತ ನಾಟ್ಯ ಜೊತೆಗೆ ವಿದ್ವಾನ ಸುಜಯ ಶಾನಭಾಗ ಮತ್ತು ಕಲಾ ಸುಜಯ ತಂಡಗಳಿಂದ ವಚನಾಧಾರಿತ ನೃತ್ಯರೂಪಕಗಳು, ಸಂಗೀತ ಸಂಜೆ ಪ್ರಕಾಶ ಜಾಡರ ಅವರ ಹಾಸ್ಯ ಕಾರ್ಯಕ್ರಮಗಳು ಜನಮನ ಸೆಳೆದವು. ಸಾಮಾಜಿಕ ಕಾರ್ಯಕರ್ತ ರಮೇಶ್ ಮಹಾದೇವಪ್ಪನವರ, ಲಿಖಗಾ ಸಮಾಜದ ಮುಖಂಡ ಶರಣಪ್ಪ ಕೊಟಗಿ, ಪಾಲಿಕೆ ಸದಸ್ಯ ಬೀರಪ್ಪ ಖಂಡೇಕಾರ ಮುಂತಾದವರು ಆಗಮಿಸಿ ಸನ್ಮಾನ ಸ್ವೀಕರಿಸಿದರು. ಅಧ್ಯಕ್ಷತೆಯನ್ನು ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ವಹಿಸಿ ಆರ್ಶೀವಚನ ಮಾಡಿದರು ಕುಂದಗೋಳದ ಬಸವಣ್ಣಜ್ಜನವರು ಹಾಗೂ ಶರಣೆ ವಿಜಯಲಕ್ಷ್ಮಿ ಅವರು
ಶ್ರೀ ಬಸವೇಶ್ವರ ಮಹತ್ವ ತಿಳಿಸಿಕೊಟ್ಟರು.ಪ್ರವೀಣ ಕುಬಸದ, ರತ್ನಾ ಗಂಗಣ್ಣವರ, ಅಶೋಕ ಮೀಶೆ, ಚನ್ನಬಸಪ್ಪ ಧಾರವಾಡಶೆಟ್ಟರ, ಈರಪ್ಪ ಎಮ್ಮಿ ಇತರರಿದ್ದರು.