ಧಾರವಾಡ:- ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ಜರುಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.
ಗದಗ್ ಹುಬ್ಬಳ್ಳಿ ನಡುವೆ ಇರುವ ಭದ್ರಾಪುರ ಬಳಿ ಹುಬ್ಬಳ್ಳಿ ಗೆ ಹೊರಟಿದ್ದ ವೇಳೆ ಕಾರ್ ಅಪಘಾತವಾಗಿದೆ. ಪರಿಣಾಮ ಕಾರ್ ನಲ್ಲಿದ್ದ ಮೂವರು ಧಾರುಣ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಕಾರ್ ನಲ್ಲಿದ್ದವರನ್ನು ಪೊಲೀಸರು ಗುರುತು ಪತ್ತೆ ಹಚ್ಚುತ್ತಿದ್ದಾರೆ.