ಧಾರವಾಡ: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೋವಿಡ್ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತಗಳು ಕೋವಿಡ್ ಚಿಕಿತ್ಸೆಗೆ ಸಿದ್ಧತೆ ಆರಂಭಿಸಿವೆ.
ಧಾರವಾಡದಲ್ಲಿ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮಕೈಗೊಂಡಿದ್ದು, ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಹೆಚ್ಚುವರಿ ಕೊಠಡಿ ಮೀಸಲಿಡಲಾಗಿದೆ.
ಪ್ರತ್ಯೇಕ ವೆಂಟಿಲೇಟರ್ ನ 10ಬೆಡ್ ಮೀಸಲಿಡಲಾಗಿದ್ದು, ಅದರಲ್ಲಿ 5 ಬೆಡ್ ಪುರುಷರಿಗೆ ಹಾಗೂ 5 ಮಹಿಳೆಯರಿಗೆ ಮೀಸಲಾಗಿವೆ.
ಧಾರವಾಡ ಜಿಲ್ಲೆಯಲ್ಲಿ ಸದ್ಯ ಯಾವುದೇ ಕೇಸ್ ಪತ್ತೆಯಾಗದೇ ಇದ್ದರೂ ಜನತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮರ್ಯಾದೆಗೇಡು ದುರಂತ.. ಮಗಳು ಓಡಿಹೋಗಿದ್ದಕ್ಕೆ ಪೋಷಕರು ಮಾಡಿದ್ದೇನು..?