Close Menu
Ain Live News
    Facebook X (Twitter) Instagram YouTube
    Wednesday, June 25
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಯಶಸ್ಸಿನ ಅಲೆಯಲ್ಲಿ ದೀಕ್ಷಿತ್ ಶೆಟ್ಟಿ ಮತ್ತೊಂದು ಮೈಲಿಗಲ್ಲು..ವೆಬ್ ಸೀರಿಸ್ ನಲ್ಲೂ ಛಾಪನ್ನೊತ್ತಿದ್ದ ದಿಯಾ ಹೀರೋ

    By Author AINApril 11, 2025
    Share
    Facebook Twitter LinkedIn Pinterest Email
    Demo

    ದೀಕ್ಷಿತ್ ಶೆಟ್ಟಿ ದಿಯಾ ಸಿನಿಮಾದಿಂದ ಕನ್ನಡ ನೆಲದಲ್ಲಿ ಭರವಸೆ ಹುಟ್ಟಿಸಿದ ನಟ.. ತೆಲುಗಿನ ದಸರಾ ಮೂಲಕ ಇಡೀ ಸೌತ್ ಸಿನಿಮಾ ದುನಿಯಾದಲ್ಲಿ ಸೆನ್ಸೇಷನ್ ಸೃಷಿಸಿದ ನಟ. ನಟನೆಯನ್ನೇ ಉಸಿರಾಗಿಸಿಕೊಂಡಿರೋ ಸಿನಿಮಾವನ್ನೇ ಬದುಕನ್ನಾಗಿಸಿಕೊಂಡಿರೋ ದೀಕ್ಷಿತ್ ಶೆಟ್ಟಿಯ ಸಿನಿಮೋತ್ಸಾಹದ ಕನಸು.  ಬಹುಭಾಷೆಯಲ್ಲಿ ಚಾಚಿ ಕೊಂಡಿದೆ.

    ಕತೆಗೆ ಮೊದಲ ಆದ್ಯತೆ ಉತ್ತಮ ತಂಡಗಳೊಂದಿಗೆ ಕೆಲಸ ಮಾಡೋ ಆಶಯದಲ್ಲಿ ದೀಕ್ಷಿತ್ ಆಯ್ಕೆಗಳು ನಿಧಾನವಾದ್ರೂ ತುಂಬಾ ಗಟ್ಟಿಯಾಗಿ ನೆಲೆ ನಿಲ್ಲೂ ಪ್ರೇಕ್ಷಕರ ಮನಗೆಲ್ಲೋವಂತಹ ಪ್ರಯೋಗಗಳೇ ಆಗಿರುತ್ತವೆ. ಅದಕ್ಕೆ ಈಗಾಗ್ಲೇ ಇವ್ರು ಮಾಡಿರೋ ಪ್ರಯತ್ನಗಳೇ ಸಾಕ್ಷಿ. ಇತ್ತಿಚೆಗಿನ ಬ್ಲಿಂಕ್, ಕೆ.ಟಿ.ಎಂ ಕನ್ನಡ ಪ್ರೇಕ್ಷಕರ ಮನ ಗೆದ್ದವು.. ಇನ್ನೂ ತೆಲುಗಿನಲ್ಲಿ ಮುಗ್ಗುರು ಮೊನಗಾಳ್ಳು ಸಿನಿಮಾದ ಪಾತ್ರದಿಂದ ಗಮನ ಸೆಳೆದಿದ್ದ ದೀಕ್ಷಿತ್ ಅಭಿನಯದಲ್ಲಿ, ತೆಲುಗಿನಲ್ಲಿ KJQ ಮತ್ತು ರಷ್ಮಿಕಾ ಮಂದಣ್ಣ ಜೋಡಿಯಲ್ಲಿ ದಿ ಗರ್ಲ್ ಫ್ರೆಂಡ್ ಚಿತ್ರಗಳು ರಿಲೀಸ್ಗೆ ರೆಡಿಯಾಗಿದ್ದು, ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಬರಲು ಸಿದ್ದವಾಗ್ತಿವೆ.

    ಜೊತೆಗೆ ತಮಿಳು ಹಾಗೂ ಮಲಯಾಳಂನ ಸಿನಿಮಾಗಳೂ ಸೆಟ್ಟೇರಿವೆ. ಈ ನಡುವೆ ಬ್ಲಿಂಕ್ ಡೈರೆಕ್ಟರ್ ಜೊತೆಗೆ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ ದೀಕ್ಷಿತ್ ಶೆಟ್ಟಿ. ಈ ನಡುವೆ ಇವರು ಅಭಿನಯದ ಮೊಟ್ಟ ಮೊದಲ ವೆಬ್ ಸೀರಿಸ್ ರಿಲೀಸ್ ಆಗಿದೆ. Touch me Not ಅನ್ನೋ ತೆಲುಗು ಮೂಲದ ವೆಬ್ ಸೀರಿಸ್ ಇತ್ತೀಚೆಗೆ ಜಿಯೋ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗಿದೆ. ಇದ್ರಲ್ಲಿ ದೀಕ್ಷಿತ್ ಕೂತೂಹಲ ಭರಿತ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ವೃತ್ತಿ ಬದುಕಿನಲ್ಲಿ ಸಿಕ್ಕಾಪಟ್ಟೆ ವಿವಿಧತೆಯನ್ನ ಬಯಸೋ ದೀಕ್ಷಿತ್, ಈ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದು, ಸರಣಿ ನೋಡಿದವ್ರು ಈಗಾಗ್ಲೇ ಕೊಂಡಾಡಲು ಆರಂಭಿಸಿದ್ದಾರೆ.. ಪಾತ್ರದಿಂದ ಪಾತ್ರಕ್ಕೆ ಸಿನಿಮಾ ಬಯಸೋ ಹಾಗೇ ದೈಹಿಕವಾಗಿ ಬದಲಾಗೋ ದೀಕ್ಷಿತ್ ಈ ವೆಬ್ ಸರಣಿಗಾಗಿ ಹರೆಯದ ಹುಡುಗನಂತಾಗಲೂ ಸಣ್ಣ ಆಗಿದ್ದರು… ಇಡೀ ಸರಣಿಯಲ್ಲಿ ದೀಕ್ಷಿತ್ ಎಳೆಯ ಹುಡುಗನಾಗಿ ಕಂಡಿದ್ದಾರೆ.

    ದೀಕ್ಷಿತ್ ಈ  ಹಿಂದಿನ ಸಿನಿಮಾಗಳನ್ನ ನೋಡಿದ್ದಕ್ಕೂ ಈ ಸರಣಿಯಲ್ಲಿ ಇವರ ಚಹರೆ ತೀರಾ ಬದಲಾಗಿದೆ.. ಟಚ್ ಮಿ ನಾಟ್ ವೆಬ್ ಸರಣಿಯಲ್ಲಿ ಇದು ಹೈಲೈಟ್ ಆಗಿ ಕಾಣ್ತಿದೆ. ತೆಲುಗಿನಲ್ಲಿ ಮನೆ ಮಗನಂತೆ ಜನಪ್ರಿಯತೆಯನ್ನ ಗಳಿಸಿರೋ ದೀಕ್ಷಿತ್, ಈ ಸರಣಿಯಿಂದ ಎಲ್ಲಾ ಭಾಷೆಯ ಪ್ರೇಕ್ಷಕರಿಗೂ ಇನ್ನೂ ಹತ್ತಿರವಾಗಿದ್ದಾರೆ. ಸದ್ಯ ದೀಕ್ಷಿತ್ ಶೆಟ್ಟಿಯ ಕೆಲಸದ ನೀತಿ.. ಹೋಗ್ತಿರೋ ರೀತಿ ನೋಡ್ತಿದ್ರೆ…ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸುಧೀರ್ಘವಾಗಿ ಬೆಳಗೋ ನಕ್ಷತ್ರದಂತೆ ಕಾಣ್ತಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಹಂಸಲೇಖ ‘ಓಕೆ’ ಸಿನಿಮಾಗೆ ಕ್ರೇಜಿಸ್ಟಾರ್ ಸಾಥ್: ನಿರ್ದೇಶನಕ್ಕಿಳಿದ ನಾದಬ್ರಹ್ಮ

    June 24, 2025

    Ajith kumar: ಹೊಸ ಲುಕ್’ನಲ್ಲಿ ನಟ ಅಜಿತ್ ಕುಮಾರ್: ಯಾವ ಸಿನಿಮಾ ಗೊತ್ತಾ..?

    June 24, 2025

    ಕೇಂದ್ರ ಸಚಿವರಿಗೆ ಸಂಕಷ್ಟ: ವಿವಾದದಲ್ಲಿ ಅನುಪಮಾ ಪರಮೇಶ್ವರನ್ ಹೊಸ ಸಿನಿಮಾ..! ಕಾರಣವೇನು ಗೊತ್ತಾ..?

    June 24, 2025

    ಹಿಂದಿಯ ಖ್ಯಾತ ಸೀರಿಯಲ್ ಶೂಟಿಂಗ್ ಸೆಟ್ ನಲ್ಲಿ ಭೀಕರ ಬೆಂಕಿ ಅವಘಡ: ಅರ್ಧಕ್ಕೆ ನಿಲ್ಲುತ್ತಾ ಧಾರವಾಹಿ?

    June 23, 2025

    ʼಡೆವಿಲ್‌ʼ ಕ್ರೇಜಿ ಅಪ್‌ಡೇಟ್..ಯಾವಾಗ ಡಿಬಾಸ್‌ ʼದರ್ಶನʼ?

    June 23, 2025

    ವಿಜಯ್‌ ದೇವರಕೊಂಡ ವಿರುದ್ಧ FIR ದಾಖಲೆ..ಅರೆಸ್ಟ್‌ ಆಗ್ತಾರಾ ರಶ್ಮಿಕಾ ಮಂದಣ್ಣ ಸ್ನೇಹಿತ?

    June 23, 2025

    ಡಿಮ್ಯಾಂಡ್ ಕಳೆದುಕೊಂಡ್ರಾ ನ್ಯಾಷನಲ್ ಕ್ರಷ್!? ದಿಢೀರ್ ಸಂಭಾವನೆ ಕುಸಿತ?

    June 22, 2025

    ಇಂದು ದೇಶಾದ್ಯಂತ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಪರಿಷತ್ ಶಾಸಕ ಟಿ. ಎ.ಶರವಣ ಭಾಗಿ

    June 21, 2025

    ಪವರ್ ಸ್ಟಾರ್ ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಗುಡ್ ನ್ಯೂಸ್..’ಹರಿ ಹರ ವೀರ ಮಲ್ಲು ರಿಲೀಸ್ ಡೇಟ್‌ ಫಿಕ್ಸ್!

    June 21, 2025

    ನಿರ್ದೇಶಕ ನಂದಕಿಶೋರ್ ವಿರುದ್ಧ ಗಂಭೀರ ಆರೋಪ: ಸುದೀಪ್‌ ಹೆಸರು ಹೇಳಿ ಯುವ ನಟನಿಗೆ 22 ಲಕ್ಷ ವಂಚನೆ!

    June 20, 2025

    ಸಂಜು ವೆಡ್ಸ್ ಗೀತಾ 2’ ತಂಡದ ಆರೋಪಕ್ಕೆ ರಚಿತಾ ತಿರುಗೇಟು: ವಿಡಿಯೋ ಮೂಲಕ ಡಿಂಪಲ್ ಕ್ವೀನ್ ಕೊಟ್ಟ ಕ್ಲಾರಿಟಿ ಇಲ್ಲಿದೆ!

    June 20, 2025

    ಯಶ್‌ ತಾಯಿ ನಿರ್ಮಾಣದ ಮೊದಲ ಚಿತ್ರ ಬಿಡುಗಡೆಗೆ ರೆಡಿ..ʼಕೊತ್ತಲವಾಡಿʼ ದರ್ಶನ ಯಾವಾಗ?

    June 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.