ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನದ ಸೀತಾ ಪಯಣ ಸಿನಿಮಾದಲ್ಲಿ ಪವರ್ ಫುಲ್ ರೋಲ್ ಪ್ಲೇ ಮಾಡಿದ್ದಾರೆ. ಶ್ರೀರಾಮನವಮಿ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ನ್ನು ಬಿಡುಗಡೆ ಮಾಡಲಾಗಿದೆ. ಸೀತಾ ಪಯಣದಲ್ಲಿ ಧ್ರುವ ಪವನ್ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಗಡ್ ಲುಕ್ ನಲ್ಲಿ ಪೊಗರು ಪೋರ ಕಾಣಿಸಿಕೊಂಡಿದ್ದಾರೆ.
ಅರ್ಜುನ್ ಸರ್ಜಾ ತಮ್ಮದೇ ಹೋಮ್ ಬ್ಯಾನರ್ ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ʼಸೀತಾ ಪಯಣʼವನ್ನು ನಿರ್ಮಾಣ ಮಾಡುತ್ತಿದ್ದಾರೆ. ತಾವೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಸೀತಾ ಪಯಣದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ನಾಯಕನಾಗಿ ನಟಿಸಿದರೆ, ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ನಾಯಕಿಯಾಗಿ ನಟಿಸಿದ್ದಾರೆ. ನಿರಂಜನ್ ಮತ್ತು ಐಶ್ವರ್ಯ ಅರ್ಜುನ್ ಜೊತೆಗೆ ಪ್ರಕಾಶ್ ರೈ, ಸತ್ಯರಾಜ್ ಮುಂತಾದವರು ನಟಿಸಿದ್ದಾರೆ. ಸ್ವತಃ ಅರ್ಜುನ್ ಸರ್ಜಾ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
‘ಸೀತಾ ಪಯಣ’, ಪ್ರೀತಿ ಮತ್ತು ಭಾವನಾತ್ಮಕ ಕಥೆಯ ಅಡಿಯಲ್ಲಿ ಸಾಗುವ ಪ್ರಯಾಣ. ಚಿತ್ರಕ್ಕೆ ಬಾಲಮುರುಗನ್ ಛಾಯಾಗ್ರಹಣ ಮಾಡಿದ್ದಾರೆ. ದೃಶ್ಯಂ ಸಿನಿಮಾ ಖ್ಯಾತಿಯ ಸಂಕಲನಕಾರ ಆಯೂಬ್ ಖಾನ್ ಈ ಚಿತ್ರಕ್ಕೆ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಅನುಪ್ ರುಬೆನ್ಸ್ ಸೀತಾ ಪಯಣ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅದೇ ರೀತಿ ಬರವಣಿಗೆ ಜವಾಬ್ದಾರಿ ಸಾಯಿ ಮಾಧವ್ ಬುರ್ರಾ ಅವರದ್ದು. ಇನ್ನು ಭರತ್ ಜನನಿ ಎಂಬುವವರು ಕನ್ನಡದ ಹಾಡುಗಳಿಗೆ ಅದ್ಭುತವಾದ ಸಾಹಿತ್ಯ ನೀಡಿದ್ದಾರೆ. ನಿರ್ದೇಶನದ ಜತೆಗೆ ಡೈಲಾಗ್ಸ್ ಸಹ ಬರೆದಿದ್ದಾರೆ ಅರ್ಜುನ್ ಸರ್ಜಾ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೀತಾ ಪಯಣ ಮೂಡಿ ಬರುತ್ತಿದೆ.