ದಕ್ಷಿಣ ಭಾರತ ಕಂಡ ಅದ್ಭುತ ನಟಿಮಣಿಯರಲ್ಲಿ ತ್ರಿಷಾ ಕೃಷ್ಣನ್ ಕೂಡ ಒಬ್ಬರು. ವಯಸ್ಸು 40 ಕಳೆದ್ರೂ ಸಿಂಗಲ್ ಆಗಿಯೇ ಉಳಿದಿರುವ ಪವರ್ ಬ್ಯೂಟಿ ಮದುವೆ ಬಗ್ಗೆ ಆಗಾಗಾ ಹೊಸ ವಿಷಯಗಳ ಕೇಳಿ ಬರುತ್ತಲೇ ಇರುತ್ತವೆ. ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿರುವ ತ್ರಿಷಾ ಕೃಷ್ಣನ್ ಸದ್ಯಲ್ಲದೇ ಉಂಗುರ ಬದಲಿಸಿಕೊಂಡ್ರಾ ಎಂಬ ಚರ್ಚೆ ಹುಟ್ಟುಹಾಕಿದೆ.
ತ್ರಿಷಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಒಂದಲ್ಲ ಒಂದು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಾರೆ. ಅಂತೇಯೇ ನಟಿ ಪ್ರೀತಿ ಗೆದ್ದೆ ಗೆಲ್ಲುತ್ತದೆ ಎಂಬ ಕ್ಯಾಪ್ಟನ್ ಕೊಟ್ಟು ಸಾಂಪ್ರದಾಯಿಕ ಹಸಿರು ಸೀರೆಯನ್ನು ಉಟ್ಟು, ಆಕರ್ಷಕ ಉಂಗುರ ಮತ್ತು ಸೊಗಸಾದ ಪೆಂಡೆಂಟ್ ಧರಿಸಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ತ್ರಿಷಾ ಕೃಷ್ಣನ್ ಡೇಟಿಂಗ್ ವಿಚಾರವಾಗಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಕೆಲ ವರ್ಷಗಳ ಹಿಂದೆ ಉದ್ಯಮಿ ಹಾಗೂ ನಿರ್ಮಾಪಕ ವರುಣ್ ಮಣಿಯನ್ ಜೊತೆ ತ್ರಿಷಾ ಉಂಗುರ ಬದಲಿಸಿಕೊಂಡಿದ್ದರು. ಆ ಬಳಿಕ ಈ ನಿಶ್ಚಿತಾರ್ಥ ಮುರಿದು ಬಿತ್ತು ಎನ್ನಲಾಗಿತ್ತು. ಇದಾದ ನಂತರ ತ್ರಿಷಾ ಜೊತೆ ಹಲವು ನಟರ ಹೆಸರು ತಳುಕು ಹಾಕಿಕೊಂಡಿತ್ತು. ದಳಪತಿ ವಿಜಯ್ ತ್ರಿಷಾ ಮದುವೆಯೇ ಆಗಿಬಿಡುತ್ತಾರೆ ಎಂಬ ಪುಕಾರು ಹಬ್ಬಿತ್ತು. ಸದ್ಯ ವಿಜಯ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ.
ಪವರ್ ಸಿನಿಮಾ ಮೂಲಕ ಕನ್ನಡ ಚಿತ್ರರಸಿಕರಿಗೂ ಚಿರಪರಿತರಾಗಿರುವ ತ್ರಿಷಾ ಎಂಗೇಜ್ ಮೆಂಟ್ ವಿಷಯವೀಗ ಟಾಕ್ ದಿ ಟೌನ್ ಆಗಿದೆ. ಸದ್ದಿಲ್ಲದೇ ತ್ರಿಷಾ ಉಂಗುರ ಬದಲಿಸಿಕೊಂಡ್ರಾ? ಅಷ್ಟಕ್ಕೂ ತ್ರಿಷಾ ವರಿಸುವ ಹುಡುಗ ಯಾರು? ಇನ್ನಿತರ ಪ್ರಶ್ನೆಗಳು ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟಿದೆ.