ಒಟ್ಟಿಗೆ ಹೋಗಿಲ್ಲ, ಒಟ್ಟಿಗಿರುವ ಒಂದು ಫೋಟೋ ಕೂಡ ಆಗಿಲ್ಲ. ಹೀಗಿದ್ರೂ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ದೂರದ ಓಮನ್ ನಲ್ಲಿ ರಶ್ಮಿಕಾ 29ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಡಲತೀರದಲ್ಲಿ ಕ್ಯೂಟ್ ಕ್ಯೂಟ್ ಪೋಸ್ ಕೊಟ್ಟು ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ರಶ್ಮಿಕಾ ಫೋಟೋ ಸೆರೆ ಹಿಡಿದಿದ್ದು ವಿಜಯ್ ಅನ್ನೋದು ಸಿನಿಮಾಪ್ರೇಮಿಗಳ ಡೌಟ್. ಹೀಗಿರುವಾಗಲೇ ವಿಜಯ್ ಕೂಡ ಅದೇ ಬೀಚ್ ನಲ್ಲಿರುವ ಫೋಟೋಗಳನ್ನು ಹಾಕಿದ್ದು, ನೆಟ್ಟಿಗರು ಇವರಿಬ್ಬರ ಫೋಟೋ ಹೋಲಿಕೆ ಮಾಡಿದ್ದಾರೆ. ಆಗಲೇ ನೋಡಿ ಈ ಜೋಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ.
ರಶ್ಮಿಕಾ ಶೇರ್ ಮಾಡಿರುವ ಫೋಟೋದಲ್ಲಿ ಬ್ಯಾಕ್ಗ್ರೌಂಡ್ನಲ್ಲಿ ರೆಡ್ ಕಲರ್ ಬಾವುಟವಿದೆ. ವಿಜಯ್ ಶೇರ್ ಮಾಡಿರೋ ಪೋಸ್ಟ್ನಲ್ಲಿ ಇದೇ ರೀತಿಯ ಬಾವುಟ ಕಾಣಿಸಿದೆ. ಇದರಿಂದ ಇಬ್ಬರೂ ಜೊತೆಯಾಗಿ ಒಮನ್ನಲ್ಲಿ ಕಾಲ ಕಳೆಯುತ್ತಿದ್ದಾರೆ ಅನ್ನೋದು ಕನ್ಫರ್ಮ್ ಆಗಿದೆ. ಜಾಲಿಯಾಗಿ ಓಮನ್ ನಲ್ಲಿ ಜೋಡಿ ವೆಕೇಷನ್ ಎಂಜಾಯ್ ಮಾಡ್ತಿದ್ದು, ಈ ನಡುವೆ ಸಮುದ್ರಕಡಲ ತೀರದಲ್ಲಿಯೇ ಇವರಿಬ್ಬರು ಉಂಗುರ ಬದಲಿಸಿಕೊಂಡಿದ್ದಾರೆ ಎಂಬ ಬಿಗ್ ಬ್ರೇಕಿಂಗ್ ಸುದ್ದಿ ಹರಿದಾಡ್ತಿದೆ.
ರಶ್ಮಿಕಾ ವಿಜಯ್ ಸ್ನೇಹಿತರು ಅಂತಾ ಅವ್ರು ಹೇಳಿದ್ರೂ ಸ್ನೇಹಕ್ಕೂ ಮೀರಿದ ಸಂಬಂಧ ಇವರಿಬ್ಬರ ನಡುವೆ ಇದೆ. ಅದುವೇ ಪ್ರೀತಿ. ನಾವಿಬ್ಬರು ಪ್ರೀತಿಸ್ತಿದ್ದೇವೆ ಎಂದು ಪ್ರಪಂಚದ ಎದುರು ಹೇಳಿಕೊಳ್ಳದೇ ಹೋದರೂ ಅವರಿಬ್ಬರ ನಡೆ ನುಡಿಯಂತೂ ಸಂಥಿಂಗ್ ಈಸ್ ದೇರ್ ಅನ್ನೋದನ್ನು ಹೇಳುತ್ತದೆ. ಇದೆಲ್ಲಾ ಬಿಡಿ ಓಮನ್ ನಲ್ಲಿ ಈ ಜೋಡಿ ಪರಸ್ಪರ ಉಂಗುರು ಬದಲಿಸಿಕೊಂಡು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.