ನೆಲಮಂಗಲ: ನೆಲಮಂಗಲದ ತೈಲೇಶ್ವರ ಗಾಣಿಗರ ಮಠದ ಪೂರ್ಣಾನಂದಪೂರಿ ಶ್ರೀಗಳು ಸಚಿವನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅನುದಾನ ಬಿಡುಗಡೆಗೆ ರಾಜಕೀಯ ಒತ್ತಡ, ಭ್ರಷ್ಟಾಚಾರದ ಆರೋಪಗಳ ನಡುವೆ ಮಠದ ಶ್ರೀಗಳು ಪ್ರಾಣ ತ್ಯಾಗದ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆಯೂ ಹಲವು ಮಠಗಳು ಅನುದಾನ ಬಿಡುಗಡೆಗೆ ವರ್ಷಗಳ ಕಾಯ್ಕೊಂಡಿರುವುದು ಇತ್ತು. ಆದರೆ ಈ ಬಾರಿ, ಧರ್ಮಗುರುವೇ ನ್ಯಾಯಕ್ಕಾಗಿ ಹೋರಾಡಲು ಕಾನೂನು ಹಾದಿ ಹಿಡಿಯುತ್ತಿದ್ದಾರೆ.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ತೈಲೇಶ್ವರ ಗಾಣಿಗರ ಮಹಾ ಮಠ – ಶ್ರದ್ಧೆ, ಸಂಸ್ಕೃತಿ ಮತ್ತು ಸಮಾಜದ ಕೇಂದ್ರ.”ಆದರೆ ಇದೀಗ ಈ ಮಠದ ಶ್ರೀಗಳು – ಪೂರ್ಣಾನಂದಪೂರಿ ಸ್ವಾಮೀಜಿ – ರಾಜಕೀಯ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ. ಒಂದು ವರ್ಷದಿಂದ ಮಠದ ಜಿರ್ಣೋದ್ಧಾರದ ಅನುದಾನ ಬಿಡುಗಡೆ ಮಾಡದೆ ಸಚಿವ ಶಿವರಾಜ್ ತಂಗಡಗಿ ತಡಮಾಡುತ್ತಿದ್ದಾರೆ. ಇಲ್ಲದೆ, ಶ್ರೀಗಳ ಆರೋಪ ಪ್ರಕಾರ, ಪರೋಕ್ಷವಾಗಿ ಸಚಿವರ ಆಪ್ತ ವಲಯದಿಂದ 25% ಕಮಿಷನ್ ಬೇಡಿಕೆಯಾಗಿದೆ.
ಈ ಬಗ್ಗೆ ಶ್ರೀಗಳು ಸರಾಸರಿ ರಾಜಕೀಯ ಆಕ್ಷೇಪವಲ್ಲ – ಅವರು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು,ಸಚಿವನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಪಷ್ಟವಾಗಿ ಮನವಿ ಮಾಡಿದ್ದಾರೆ ಒಂದೇ ಶಬ್ದ – ನ್ಯಾಯ. ಅದಕ್ಕಾಗಿ ನಾನು ಬೇಕಾದರೆ ನ್ಯಾಯಾಲಯದ ಹಾದಿ ಹಿಡಿಯುತ್ತೇನೆ” ಎಂಬುದು ಶ್ರೀಗಳ ಎಚ್ಚರಿಕೆಯಾಗಿದೆ.
ನಾನು ಪ್ರಾಣ ತ್ಯಾಗ ಮಾಡಬೇಕಾದರೂ ಸರಿ, ಇದು ಧರ್ಮದ ಪರ ಹೋರಾಟ” – ಈ ಮಾತಿಗೆ, ‘ಡೋಂಕ್’ ಎನ್ನಲಾಗಿದೆ ಎಂದು ಶ್ರೀಗಳು ಹೇಳಿದ್ದಾರೆ. ಇದು ಸಚಿವನ ವೈಖರಿ ಎಂಬುದನ್ನು ಶ್ರೀಗಳು ಕಠಿಣವಾಗಿ ಟೀಕಿಸಿದ್ದಾರೆ. ನ್ಯಾಯ ಸಿಗದಿದ್ದರೆ ನಾನು ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಕೇಳುತ್ತೇನೆ” – ಇಷ್ಟು ಗಂಭೀರ ನಡೆ ಯಾರಿಗಾದರೂ ಬೆಚ್ಚಿಬೀಳಿಸುವಂತದ್ದು.” ಧರ್ಮಸ್ಥಳಗಳ ಜಿರ್ಣೋದ್ಧಾರಕ್ಕೆ ಸರ್ಕಾರ ಕೊಡುವ ಅನುದಾನದಲ್ಲಿ ಸಹ ಕಮಿಷನ್ ಮಾಫಿಯಾ ಆಡಳಿತ ನಡೆಸುತ್ತಿದೆ ಎನ್ನುವುದು ಶ್ರೀಗಳ ಮಾತು.ಇದೀಗ ಈ ಪ್ರಕರಣ ಯಾವ ಹಂತ ತಲುಪುತ್ತದೆ ಎಂಬುದು ಕುತೂಹಲದ ವಿಷಯವಾಗಿದೆ.