ರಶ್ಮಿಕಾ ಮಂದಣ್ಣ ಭರ್ಜರಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಗೆ ಅವರು ಕೊಟ್ಟಿರುವ ಕ್ಯಾಪ್ಷನ್ ಫ್ಯಾನ್ಸ್ ಸಂಭ್ರಮ ದುಪ್ಪಟ್ಟು ಮಾಡಿದೆ.
ಹಳದಿ ಬಣ್ಣದ ಸೀತೆಯುಟ್ಟು ರಶ್ಮಿಕಾ ಮಂದಣ್ಣ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇಷ್ಟದವಾದ ಬಣ್ಣ, ಇಷ್ಟವಾದ ಜಾಗ, ಸ್ಪೆಷಲ್ ವ್ಯಕ್ತಿಯಿಂದ ಸಿಕ್ಕ ಸೀರೆ ಹಾಗೂ ಫೋಟೋ ತೆಗೆದವರು ಎಲ್ಲವೂ ಸ್ಪೆಷಲ್ ಅಂತಾ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ.
ರಶ್ಮಿಕಾ ಹಂಚಿಕೊಂಡಿರುವ ಫೋಟೋ ವಿಜಯ್ ದೇವರಕೊಂಡ ಮನೆ ಅನ್ನೋದು ಅಭಿಮಾನಿಗಳ ಗೆಸ್ ಕೂಡ. ಆಕೆ ತೊಟ್ಟಿರುವ ಸೀರೆ ವಿಜಯ್ ತಾಯಿ ಕೊಟ್ಟಿದ್ದು, ಫೋಟೋ ಸೆರೆಹಿಡಿದ್ದಾರೆ ವಿಜಯ್ ದೇವರಕೊಂಡ ಇರಬೇಕು ಎಂಬ ಚರ್ಚೆ ಹುಟ್ಟುಹಾಕಿದೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವೆ ಏನೋ ಇದೆ ಅನ್ನೋದು ಸಿನಿರಸಿಕರಿಗೆ ಇರುವ ಕ್ಯೂರಿಯಾಸಿಟಿ. ಒಟ್ಟಿಗೆ ಡೇಟಿಂಗ್, ಔಟಿಂಗ್ ಅಂತಾ ಈ ಜೋಡಿ ಸುತ್ತಾತ್ತಾರೆ.
ಇದೀಗ ವಿಜಯ್ ಮನೆಯಲ್ಲಿ ರಶ್ಮಿಕಾ ಭರ್ಜರಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಶೀಘ್ರದಲ್ಲೇ ಈ ಜೋಡಿ ತಮ್ಮ ಪ್ರೀತಿಗೆ ಮದುವೆ ಮುದ್ರೆ ಒತ್ತಲಿದ್ದಾರೆ ಎಂಬ ಗುಲ್ಲೆದಿದೆ.
View this post on Instagram