ಸೆಲೆಬ್ರಿಟಿಗಳು ಏನೇ ಮಾಡಿದರು ಅದು ದೊಡ್ಡ ಸುದ್ದಿಯಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಯಾವುದಾದರೂ ಒಂದು ಫೋಟೋಗೆ ಲೈಕ್ ಕೊಟ್ರೆ ನಾನಾ ಅರ್ಥಗಳು ಹುಟ್ಟಿಕೊಳ್ಳುತ್ತವೆ. ಸದ್ಯ ವಿರಾಟ್ ಕೊಹ್ಲಿ ಅದೊಂದು ಲೈಕ್ ಇಂಟರ್ ನೆಟ್ ಲೋಕದಲ್ಲಿ ಕಿಡಿ ಹಚ್ಚಿದೆ.
ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 271 ಮಿಲಿಯನ್ ಫೋಲೋಯರ್ಸ್ ಇದ್ದಾರೆ. ಹೀಗಿರುವಾಗ ಕಿಂಗ್ ಕೊಹ್ಲಿ ಎಲ್ಲ ಫೋಟೋ ಲೈಕ್, ಕಮೆಂಟ್ ಮಾಡಲ್ಲ. ಆದ್ರೆ ನಟಿ ಅವನೀತ್ ಕೌರ್ ಅವರ ಪೋಸ್ಟ್ ಗೆ ಲೈಕ್ ಮಾಡಿರುವುದು ದೊಡ್ಡ ಚರ್ಚೆ ಹುಟ್ಟುಹಾಕಿದೆ. ಅವನೀತ್ ಬೋಲ್ಡ್ ಫೋಟೋಗೆ ಕೊಹ್ಲಿ ಲೈಕ್ ಒತ್ತುತ್ತಿದ್ದಂತೆ ಇವರಿಬ್ಬರ ನಡುವೆ ಏನೋ ಇದೆ ಅನ್ನೋ ಸುದ್ದಿ ಹರಿದಾಡಲು ಶುರು ಮಾಡಿದೆ.
ಸೋಷಿಯಲ್ ಮೀಡಿಯಾದ ತುಂಬೆಲ್ಲಾ ಕೊಹ್ಲಿ ನಟಿ ಅವನೀತ್ ಕೌರ್ ಲೈಫ್ ಮ್ಯಾಟರ್ ಭಾರೀ ಚರ್ಚೆಯಾಗುತ್ತಿದ್ದಂತೆ ಅದಕ್ಕೆ ಸ್ವತಃ ವಿರಾಟ್ ಸ್ಪಷ್ಟನೆ ಕೊಟ್ಟಿದ್ದಾರೆ. “ನಾನು ನನ್ನ ಹಳೇ ಫೀಡ್ ಗಳನ್ನು ಕ್ಲೀಯರ್ ಮಾಡಬೇಕಾದರೆ, ತಪ್ಪಾಗಿ ಏಮೋ ಘಟಿಸಿದೆ. ಅದರಲ್ಲಿ ಬೇರಾವ ಉದ್ದೇಶವೂ ಇರಲಿಲ್ಲ. ಹಾಗಾಗಿ ಅನಗತ್ಯ ಊಹೆಗಳನ್ನು ಮಾಡಬಾರದು ಎಂಬುದು ನನ್ನ ಮನವಿ” ಎಂದು ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
https://x.com/JeetN25/status/1918047931023712553
ನಟಿ ಅವನೀತ್ ಕೌರ್ ಜನಪ್ರಿಯ ಟಿವಿತಾರೆ. ಗುಜರಾತ್ ಟೈಟನ್ ಶುಭಮನ್ ಗಿಲ್ ಜೊತೆ ಅವನೀತ್ ಹೆಸರು ತಳುಕು ಹಾಕಿಕೊಂಡಿತ್ತು. ಈಗ ಕೊಹ್ಲಿ ಅವನೀತ್ ಫೋಟೋಗೆ ಲೈಕ್ ಮಾಡ್ತಿದ್ದಂತೆ ಯಾರು ಈ ಅವನೀತ್ ಅಂತಾ ನೆಟ್ಟಿಗರು ಹುಡುಕಾಟ ಶುರು ಮಾಡಿದ್ದಾರೆ.