Close Menu
Ain Live News
    Facebook X (Twitter) Instagram YouTube
    Saturday, May 31
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿತ್ಯ ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿಂತಿದ್ದೀರಾ!? ಹಾಗಿದ್ರೆ ಇಷ್ಟೆಲ್ಲಾ ಬೆನಿಫಿಟ್ ಗ್ಯಾರಂಟಿ!

    By AIN AuthorMay 30, 2025
    Share
    Facebook Twitter LinkedIn Pinterest Email
    Demo

    ಖರ್ಜೂರ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಖರ್ಜೂರದಲ್ಲಿ ದೇಹಕ್ಕೆ ಉತ್ತಮವಾದ ಅನೇಕ ಪೋಷಕಾಂಶಗಳಿವೆ. ಇದು ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಬಿ 6 ಮತ್ತು ಕಬ್ಬಿಣದಲ್ಲಿ ಸಮೃದ್ಧವಾಗಿದೆ.

    ನಿಮ್ಮ ಮೂತ್ರದಲ್ಲಿ ಹೆಚ್ಚು ವಾಸನೆ ಬರ್ತಿದ್ಯಾ!? ಹಾಗಿದ್ರೆ ಇದು ಈ ಕಾಯಿಲೆಯ ಮುನ್ಸೂಚನೆ!

    ಪ್ರತಿದಿನ ಬೆಳಗ್ಗೆ ಈ ಸಿಹಿ ಹಣ್ಣನ್ನು ತಿನ್ನುವುದು ದೇಹದ ಮೇಲೆ ಪಾಸಿಟಿವ್ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದ್ಯಾ? ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ಖರ್ಜೂರವನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ.

    ಖಾಲಿ ಹೊಟ್ಟೆಯಲ್ಲಿ ಯಾರೂ ಖರ್ಜೂರ ಸೇವಿಸುತ್ತಾರೆ ಅವರಿಗೆ ಸುಸ್ತು, ಆಯಾಸ ಮತ್ತು ದುರ್ಬಲತೆ ಎನ್ನುವುದು ಇರುವುದಿಲ್ಲ. ಏಕೆಂದರೆ ಖರ್ಜೂರಗಳಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹೇರಳ ವಾಗಿ ಸಿಗುತ್ತದೆ. ಗ್ಲುಕೋಸ್, ಫ್ರಕ್ಟೂಸ್, ಸುಕ್ರೋಸ್ ಹೀಗೆ ಬೇರೆ ಬೇರೆ ರೂಪಗಳಲ್ಲಿ ಇರುವುದರಿಂದ ಎಲ್ಲವೂ ಸಹ ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ಕೊಡುವಲ್ಲಿ ನೆರವಾಗುತ್ತವೆ. ತುಂಬಾ ವೇಗವಾಗಿ ಖರ್ಜೂರಗಳಿಂದ ಈ ಲಾಭಗಳನ್ನು ಪಡೆಯ ಬಹುದು.

    ಖರ್ಜೂರಗಳಲ್ಲಿ ನಾರಿನ ಅಂಶ ಹೆಚ್ಚಾಗಿದ್ದು ಇದು ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಕರುಳಿನ ಚಟುವಟಿಕೆ ಗಳನ್ನು ನಿರ್ವಹಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
    ಖಾಲಿ ಹೊಟ್ಟೆಯಲ್ಲಿ ಖರ್ಜೂರ ಸೇವನೆ ಮಾಡುವುದ ರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ ಮತ್ತು ಬೇರೆ ಬಗೆಯ ಅನಾರೋಗ್ಯಕರ ಆಹಾರಗಳನ್ನು ಸೇವಿಸುವ ಸಾಧ್ಯತೆ ಇಲ್ಲವಾಗುತ್ತದೆ. ಇದರಿಂದ ಆರೋಗ್ಯಕರವಾದ ಜೀರ್ಣಶಕ್ತಿ ನಿಮ್ಮದಾಗುತ್ತದೆ ಮತ್ತು ತೂಕ ನಿರ್ವಹಣೆ ಕೂಡ ಸಾಧ್ಯ ವಾಗುತ್ತದೆ.​

    ಖರ್ಜೂರಗಳಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು, ಅಂದರೆ ಪೊಟ್ಯಾಶಿಯಂ, ಮೆಗ್ನೀಷಿಯಂ, ಕಬ್ಬಿಣ, ವಿಟಮಿನ್ ಬಿ6 ಮತ್ತು ಇನ್ನಿತರ ಸತ್ವಗಳು ಯಥೇಚ್ಛವಾಗಿ ಸಿಗುತ್ತವೆ. ಇವುಗಳು ದೇಹದ ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ತಮ್ಮದೇ ಆದ ಪಾತ್ರವನ್ನು ಹೊಂದಿರುತ್ತವೆ. ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಉಪಯೋಗ ಜಾಸ್ತಿ.

    ಖರ್ಜೂರ ನಿಮಗೆಲ್ಲ ಗೊತ್ತಿರುವ ಹಾಗೆ ತಿನ್ನಲು ಸಿಹಿಯಾಗಿ ರುತ್ತದೆ. ಅಂದರೆ ನಿಸರ್ಗದತ್ತವಾಗಿ ಇದರಲ್ಲಿ ಸಕ್ಕರೆ ಅಂಶ ಮೊದಲೇ ಇರುತ್ತದೆ.
    ಸಿಹಿ ಅಂಶವನ್ನು ಬೇಡುವ ವಿವಿಧ ಆಹಾರ ಪದಾರ್ಥ ಗಳಲ್ಲಿ ನೀವು ಖರ್ಜೂರವನ್ನು ಸೇರಿಸಿ ಸೇವಿಸ ಬಹುದು. ಅಷ್ಟೇ ಅಲ್ಲದೆ ಬೇರೆ ಬಗೆಯ ಆಹಾರಗಳಲ್ಲಿ ಹೆಚ್ಚು ವರಿಯಾಗಿ ಸಿಗುವ ಸಕ್ಕರೆ ಪ್ರಮಾಣವನ್ನು ಸೇವಿಸುವ ಸಾಧ್ಯತೆ ಯಿಂದ ತಪ್ಪಿಸಿಕೊಳ್ಳ ಬಹುದು.​

    ಖರ್ಜೂರಗಳಲ್ಲಿ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ಹೆಚ್ಚಾಗಿ ಸಿಗುತ್ತವೆ.ಇದರಲ್ಲಿ ಸಿಗುವ ಫಿನೋಲಿಕ್ ಆಮ್ಲ ದೈಹಿಕ ಆಕ್ಸಿಡೆ ಟೀವ್ ಒತ್ತಡವನ್ನು ನಿರ್ವಹಣೆ ಮಾಡುವಲ್ಲಿ ಕೆಲಸ ಮಾಡುತ್ತದೆ.

    ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಖರ್ಜೂ ರವನ್ನು ಸೇವಿಸುವುದರಿಂದ ನಿಮಗೆ ಈ ಲಾಭ ಗಳು ಪೂರ್ಣ ಪ್ರಮಾಣದಲ್ಲಿ ಸಿಗುತ್ತವೆ. ಇವುಗಳ ಸೇವ ನೆಯಿಂದ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು.​

    Demo
    Share. Facebook Twitter LinkedIn Email WhatsApp

    Related Posts

    Health Tips: ಮಧುಮೇಹಿಗಳು ತಿನ್ನಲೇಬೇಕು ಈ ತರಕಾರಿ: ಏಕಾಏಕಿ ಕಂಟ್ರೋಲ್’ಗೆ ಬರುತ್ತೆ ಶುಗರ್

    May 31, 2025

    ಕ್ಯಾರೆಟ್ ತಿನ್ನಲು ಕ್ರೇಜ್ ಇದ್ದವರಿಗೆ ಸಿಗಲಿದೆ ಇಷ್ಟೆಲ್ಲಾ ಲಾಭ!

    May 30, 2025

    ನಿಮ್ಮ ಮೂತ್ರದಲ್ಲಿ ಹೆಚ್ಚು ವಾಸನೆ ಬರ್ತಿದ್ಯಾ!? ಹಾಗಿದ್ರೆ ಇದು ಈ ಕಾಯಿಲೆಯ ಮುನ್ಸೂಚನೆ!

    May 30, 2025

    ಕಿತ್ತಳೆ ಹಣ್ಣಿನ ಸಿಪ್ಪೆ ಎಸೆಯದಿರಿ: ಕಹಿಯಾದ್ರೂ ಇದರ ರಸದಲ್ಲಿ ಅಡಗಿದೆ ಆರೋಗ್ಯ ಸಿಹಿ!

    May 30, 2025

    ಗಟ್ಟಿಮುಟ್ಟಾದ ಮೂಳೆ ನಿಮ್ಮದಾಗಬೇಕಾ!? ಹಾಗಿದ್ರೆ ಈ ಬೀಜಗಳನ್ನು ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ!

    May 29, 2025

    ನೀವು ನಿತ್ಯ ಮೊಸರು ತಿನ್ನುತ್ತಿದ್ದೀರಾ!? ಹಾಗಿದ್ರೆ ದೇಹದ ಮೇಲಾಗುವ ಪರಿಣಾಮದ ಬಗ್ಗೆ ತಿಳಿಯಿರಿ

    May 28, 2025

    ಸೈಟ್ ರಿಜಿಸ್ಟರ್ ಆಗದೇ ಪರದಾಡುತ್ತಿದ್ದೀರಾ!? ನಿಮಗಿಲ್ಲಿದೆ ಗುಡ್ ನ್ಯೂಸ್!

    May 28, 2025

    ನಿಮಗಿದು ಗೊತ್ತಾ!? ಪ್ರತಿಯೊಬ್ಬರೂ ಮೊಳಕೆ ಬರಿಸಿದ ಹೆಸರುಕಾಳನ್ನು ತಿನ್ನಲೇಬೇಕಂತೆ! ಯಾಕೆ?

    May 28, 2025

    ಕಿಡ್ನಿ ಸ್ಟೋನ್‌ ಸಮಸ್ಯೆಯಿಂದ ಬಳಲುತ್ತಿದ್ದೀರಾ!? ಹಾಗಿದ್ರೆ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಚಮತ್ಕಾರ ಗ್ಯಾರಂಟಿ!

    May 28, 2025

    ನಿತ್ಯವೂ ಚಿಯಾ ಬೀಜಗಳು ಮತ್ತು ನಿಂಬೆ ಜ್ಯೂಸ್ ಕುಡಿದರೆ ಏನಾಗುತ್ತೆ?

    May 27, 2025

    ನಿತ್ಯ ಬೆಳಗ್ಗೆ ಕಾಫಿ, ಚಹಾ ಕುಡಿಯೋ ಮುನ್ನ ಒಂದು ಗ್ಲಾಸ್ ನೀರು ಕುಡಿಯಿರಿ!

    May 27, 2025

    ಇಡ್ಲಿ- ದೋಸೆ ಹಿಟ್ಟು ಹುಳಿ ಆಗುವುದನ್ನು ತಡೆಯಲು ಈ ಟಿಪ್ಸ್ ಫಾಲೋ ಮಾಡಿ!

    May 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.