ಇಂದಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿದೆ. ಮೊಬೈಲ್ ಮತ್ತು ಲ್ಯಾಪ್‌ಟಾಪ್, ಕಂಪ್ಯೂಟರ್ ಬಳಕೆ ಹೆಚ್ಚಿದೆ. ಮಕ್ಕಳು, ವಯಸ್ಕರರು, ವೃದ್ಧರು ಹೀಗೆ ಎಲ್ಲಾ ವಯೋಮಾನದವರು ಮೊಬೈಲ್ ಗೆ ಅಂಟಿಕೊಂಡಿದ್ದಾರೆ. ಇವು ಜೀವನದ ಅವಿಭಾಜ್ಯ ಅಂಗಗಳಾಗಿವೆ. 100 ಪ್ರತಿಶತ ಜನರು ಈ ಗ್ಯಾಜೆಟ್‌ಗಳ ಮೇಲೆ ಅವಲಂಬಿತರಾಗಿದ್ದಾರೆ.
ಪ್ರತಿಯೊಂದು ವರ್ಗದವರು ಮೊಬೈಲ್, ಲ್ಯಾಪ್‌ಟಾಪ್ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಆದರೆ ಹೀಗೆ ದೀರ್ಘಕಾಲ ಪರದೆಯ ಮುಂದೆ ಕುಳಿತುಕೊಳ್ಳುವುದು ಹೆಚ್ಚು ಕಾಯಿಲೆಗಳ ಉತ್ಪತ್ತಿಗೂ ಕಾರಣವಾಗುತ್ತಿದೆ. ನಿದ್ರಾಹೀನತೆ, ಫ್ಯಾಟ್, ಹೊಟ್ಟೆಯ ಸುತ್ತಳತೆ ಹೆಚ್ಚಳ, ಚಟುವಟಿಕೆ ಇಲ್ಲದ ದೇಹ, ಜೀರ್ಣಕ್ರಿಯೆ ಸಮಸ್ಯೆ ಹೀಗೆ ಹಲವು ಕಾಯಿಲೆಗಳು ಸುತ್ತುವರೆಯುತ್ತಿವೆ.
ಕನ್ನಡ, ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಎಂದ ಸೋನು ನಿಗಮ್..ಕೆಚ್ಚೆದೆಯ ಕನ್ನಡಿಗರನ್ನು ಕೆಣಕಿದ ಗಾಯಕ
ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಕೆಯಿಂದಾಗಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಬರುವುದು. ಅದರಲ್ಲೂ ಕೆಲವರಲ್ಲಿ ಬೆನ್ನು ನೋವು, ಸೊಂಟ ನೋವು ಹಾಗೂ ಕುತ್ತಿಗೆ ನೋವಿನ ಸಮಸ್ಯೆಗಳು ಬರಬಹುದು. ಇದಕ್ಕೆ ಮುಖ್ಯ ಕಾರಣ ನಾವು ಬಳಕೆ ಮಾಡುತ್ತಿರುವ ಮೊಬೈಲ್ ಹಾಗೂ ಲ್ಯಾಪ್ ಟಾಪ್. ಇಂತಹ ನೋವುಗಳನ್ನು ಕಡೆಗಣಿಸಿದರೆ, ಆಗ ಇದು ತೀವ್ರವಾಗಿ ಮುಂದೆ ದೊಡ್ಡ ಸಮಸ್ಯೆಗೂ ಕಾರಣವಾಗಬಹುದು. ಹೀಗಾಗಿ ಸರಿಯಾದ ಸಮಯದಲ್ಲಿ ಇದನ್ನು ಪತ್ತೆ ಮಾಡಿಕೊಂಡು ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಇಲ್ಲವಾದಲ್ಲಿ ಇಂತಹ ನೋವು ಜೀವನವನ್ನೇ ಹಾಳು ಮಾಡಿಬಿಡಬಹುದು. ಅತಿಯಾಗಿ ಸ್ಕ್ರೀನ್ ಟೈಂನಲ್ಲಿದ್ದರೆ ಆಗ ಕಾಡುವ ಐದು ಮೂಳೆಯ ಸಮಸ್ಯೆಗಳ ಬಗ್ಗೆ ತಿಳಿದು, ಎಚ್ಚರ ವಹಿಸಿಕೊಳ್ಳಿ
ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಬಳಸುವವರಲ್ಲಿ ಇದು ಅತಿಯಾಗಿ ಕಾಡುವಂತಹ ಸಮಸ್ಯೆ. ಯಾಕೆಂದರೆ ಇದರಿಂದ ಮೊಣಕೈ ಮಧ್ಯದಲ್ಲಿ ಇರುವ ನರಗಳ ಮೇಲೆ ಒತ್ತಡ ಬೀಳುವುದು. ಕೀಬೋರ್ಡ್, ಮೊಬೈಲ್ ನಲ್ಲಿ ಅತಿಯಾಗಿ ಬೆರಳುಗಳನ್ನು ಬಳಕೆ ಮಾಡಿದರೆ ಆಗ ಇದರಿಂದ ನರಗಳು ಮರಗಟ್ಟುವುದು ಅಥವಾ ಝಮ್ಮೆನಿಸುವಿಕೆ ಉಟಾಗಬಹುದು. ಇಷ್ಟು ಮಾತ್ರವಲ್ಲದೆ, ಸ್ನಾಯುಗಳು ದುರ್ಬಲಗೊಂಡು ಯಾವುದೇ ವಸ್ತುಗಳನ್ನು ಹಿಡಿಯುವುದು ಅಥವಾ ಎತ್ತುವುದಕ್ಕೆ ಸಾಧ್ಯವಾಗದು. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಇದ್ದರೆ ಆಗ ಇದರಿಂದ ಶಾಶ್ವತ ವೈಕಲ್ಯ ಉಂಟಾಗುವ ಸಾಧ್ಯತೆಯು ಇರುವುದು.
ಲ್ಯಾಪ್ ಟಾಪ್ ಅಥವಾ ಮೊಬೈಲ್ ನ್ನು ಹಲವಾರು ಗಂಟೆಗಳ ಕಾಲ ನೋಡಿದಾಗ ಈ ಕುತ್ತಿಗೆಯಲ್ಲಿ ಕಾಣಿಸುವಂತಹ ನೋವು ಅಥವಾ ಅಹಿತಕರವನ್ನು ಟೆಕ್ ನೆಕ್ ಎಂದು ಕರೆಯಲಾಗುತ್ತದೆ. ತಲೆಯನ್ನು ಮುಂದಕ್ಕೆ ತಂದಾಗ ಅದರಿಂದ ಕುತ್ತಿಗೆ ಭಾಗದ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದು. ಕುತ್ತಿಗೆಯನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ತಿರುಗಿಸಲು ತುಂಬಾ ಶ್ರಮ ಪಡಬೇಕಾಗುತ್ತದೆ ಹಾಗೂ ನೋವು ಕೂಡ ಕಂಡುಬರಬಹುದು. ಭುಜ ಬಿಗಿತ್ವ, ತಲೆಬುರುಡೆಯ ಮೂಲದಲ್ಲಿ ನೋವು ಕಾಣಿಸಿಕೊಂಡರೆ, ಆಗ ಇದನ್ನು ಕಡೆಗಣಿಸಬಾರದು.
ದೀರ್ಘಕಾಲ ತನಕ ಕೆಟ್ಟ ಭಂಗಿಯಲ್ಲಿ ಕುಳಿತಿಕೊಂಡರೆ ಆಗ ಇದರಿಂದ ಬೆನ್ನಿನ ಮೂಳೆಗಳ ಮೇಲೆ ಪರಿಣಾಮ ಬೀರುವುದು. ಇದರಿಂದ ಮೂಳೆಗಳು ದುರ್ಬಲವಾಗುವುದು ಮಾತ್ರವಲ್ಲದೆ, ಮೂಳೆಗಳಲ್ಲಿ ಬಿರುಕು ಅಥವಾ ಗಾಯವಾಗಬಹುದು. ಯಾವುದೇ ವಿಶ್ರಾಂತಿ ತೆಗೆದುಕೊಳ್ಳದೆ ದಿನವಿಡಿ ಮೊಬೈಲ್ ಅಥವಾ ಲ್ಯಾಪ್ ಟಾಪ್ ಬಳಸುತ್ತಿದ್ದರೆ, ಆಗ ಇದರಿಂದ ಬೆನ್ನಿನಲ್ಲಿ ಇಂತಹ ಸಮಸ್ಯೆಯು ಬರಬಹುದು
ದಿನವಿಡಿ ಕೀಬೋರ್ಡ್ ಅಥವಾ ಮೌಸ್ ನ್ನು ಬಳಸಿದರೆ ಆಗ ಇದರಿಂದ ನೋವು ಮಾತ್ರವಲ್ಲದೆ, ಮೊಣಕೈ ಮತ್ತು ಕೈಯಲ್ಲಿ ಉರಿಯೂತ ಕೂಡ ಉಂಟಾಗಬಹುದು. ಇದರ ಪರಿಣಾಮ ಟೆನಿಸ್ ಎಲ್ಬೊ ಅಥವಾ ಬೆರಳುಗಳು ಅಥವಾ ಮಣಿಕಟ್ಟಿನ ಸೈನೋವಿಟಿಸ್ ಅನ್ನು ಪ್ರಚೋದಿಸುತ್ತದೆ. ಕೆಲವೇ ಸಮಯದಲ್ಲಿ ಸರಿಹೋಗುವಂತಹ ನೋವು ಎಂದು ಇದನ್ನು ಕಡೆಗಣಿಸ ಲಾಗುತ್ತದೆ. ಇದಕ್ಕೆ ಚಿಕಿತ್ಸೆ ವಿಳಂಬ ಮಾಡಿದರೆ ಆಗ ಇದರಿಂದ ಸಮಸ್ಯೆಯು ಇನ್ನಷ್ಟು ಕೆಡಬಹುದು.
ಸ್ನಾಯು, ನರಗಳ ಮೇಲೆ ಅತಿಯಾಗಿ ಒತ್ತಡ ಬಿದ್ದರೆ ಆಗ ಇದರಿಂದ ಸಮಸ್ಯೆಯು ಉಲ್ಬಣಿಸಬಹುದು. ಮೃದು ಅಂಗಾಂಶಗಳ ಮೇಲೆ ಇದು ಗಣನೀಯವಾಗಿ ಪರಿಣಾಮ ಬೀರಬಹುದು ಹಾಗೂ ಇದರಿಂದ ಮೂಳೆಗಳ ಸಮಸ್ಯೆಯು ಬರುವುದು. ದೀರ್ಘಕಾಲ ತನಕ ಇದನ್ನು ಕಡೆಗಣಿಸಿದರೆ, ಆಗ ಇದರಿಂದ ಸ್ಕೋಲಿಯೋಸಿಸ್ ಅಥವಾ ಕೈಫೋಸಿಸ್ ಸಮಸ್ಯೆಯು ಕಾಡಬಹುದು.