ಮೋಡುತನ, ಹಠಮಾರಿತನದ ಪಾಕ್ ಏಟಿನ ಮೇಲೆ ಏಟು ತಿನ್ನುತ್ತಿದ್ದರೂ ಬುದ್ದಿ ಕಲಿಯುವ ಹಾಗೆ ಕಾಣಿಸುತ್ತಿಲ್ಲ. ಕದನದೊಳ್ ಕಲಿ ಪಾರ್ಥನಂ ಕೆಣಕಿ ಉಳಿದವರಿಲ್ಲ ಎಂಬ ರೀತಿ ಭಾರತ ಕೆಣಕಿ ತಪ್ಪು ಮಾಡಿರುವ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತ ಉತ್ತರವನ್ನು ಭಾರತ ಕೊಡುತ್ತಲೇ ಇದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಪಾಕ್ ಅಲುಗಾಡುವಂತೆ ಮಾಡಿದೆ. ಇಷ್ಟಾದ್ರೂ ಬಗ್ಗದ ಪಾಪಿಗಳು ಮತ್ತೆ ಭಾರತದ ಮೇಲೆ ದಾಳಿ ಮಾಡುವ ಭಂಡತನ ಪ್ರದರ್ಶಿಸಿ ಸೋತಿದೆ. ಪಾಕ್ ಮೇಲೆ ಭಾರತ ನಿರಂತರವಾಗಿ ದಾಳಿ ನಡೆಸುತ್ತಿದ್ದು, ಈ ದಾಳಿಯನ್ನು ಪಾಕ್ ರಕ್ಷಣಾ ಸಚಿವ ಸಮರ್ಥಿಸಿಕೊಂಡ ರೀತಿ ನೋಡಿ ಪಾಕ್ ಜನ ಇಷ್ಟೊಂದು ಬುದ್ದಿವಂತರಾ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
ಸಂಸತ್‌ನಲ್ಲಿ ಮಾತನಾಡಿರುವ ಪಾಕ್ ರಕ್ಷಣಾ ಸಚಿವ ಖವಾಜಾ ಅಸಿಫ್, ನಾವಿರುವ ಸ್ಥಳಗಳು ಬಹಿರಂಗಗೊಳ್ಳುತ್ತದೆ ಎನ್ನುವುದಕ್ಕೆ ನಾವು ಭಾರತದ ಡ್ರೋನ್ ಗಳನ್ನು ತಡೆಯುತ್ತಿಲ್ಲ ಎಂದಿದ್ದಾರೆ. ಖವಾಜಾ ಆಫಿಸ್ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜೋಕ್ ಆಫ್ ದಿ ಡೇ ಎಂದು ನೆಟ್ಟಿಗರು ಕಾಲೆಳೆಯಲು ಶುರು ಮಾಡಿದ್ದಾರೆ. ಈ ಪಾಕ್ ಜನರು ನಿಜಕ್ಕೂ ಬುದ್ಧಿವಂತರು’, ‘ಪಾಕ್ ರಕ್ಷಣಾ ಸಚಿವರು ಯಾಕಿಷ್ಟು ಮೂರ್ಖರು’ ಎಂದು ನಾನಾ ರೀತಿಯ ಕಮೆಂಟ್ ಮಾಡಿದ್ದಾರೆ.
ನಿನ್ನೆ ರಾತ್ರಿ ಪಾಕಿಸ್ತಾನ ಜಮ್ಮುವನ್ನು ಗುರಿಯಾಗಿಸಿ ಮತ್ತೆ ದಾಳಿ ನಡೆಸಿದೆ. ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಜಮ್ಮುವಿನ ಮೇಲೆ ಹಾಕಿಸಿದ್ದು, ನಗರದಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದಿವೆ. ದಾಳಿಗೆ ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ. ಭಾರತೀಯ ಸಶಸ್ತ್ರ ಪಡೆಗಳ ವಾಯು ರಕ್ಷಣಾ ವ್ಯವಸ್ಥೆಯಿಂದ ಪಾಕ್‌ನ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಹೊಡೆದುರುಳಿಸಿವೆ.