ದೈಜಿ ಚಿತ್ರ ರಮೇಶ್ ಅರವಿಂದ್ ಅವರ 106ನೇ ಚಿತ್ರವಾಗಿದ್ದು, ಇದನ್ನು ಶಿವಾಜಿ ಸುರತ್ಕಲ್ ಖ್ಯಾತಿಯ ಆಕಾಶ್ ಶ್ರೀವತ್ಸ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದರ ತಾರಾಗಣ ಬಳಗದಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ಇತ್ಯಾದಿ ನಟರು ಕಾಣಿಸಿ ಕೊಳ್ಳಲಿದ್ದಾರೆ. ಹೊಸ ವಿಷಯ ಏನೆಂದರೆ ಗಾಳಿಪಟ ಖ್ಯಾತಿಯ ದಿಗಂತ್ ಅವರು ಸೇರ್ಪಡೆಯಾಗಿದ್ದಾರೆ.
ದಿಗಂತ್ ರಮೇಶ್ ಅರವಿಂದ್ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಭಿನ್ನ ರೀತಿಯ ಪಾತ್ರದಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿ ಕೊಳ್ಳಲಿದ್ದಾರೆ. ರಮೇಶ್ ಅರವಿಂದ್ ಅವರು ಸೂರ್ಯ ಪಾತ್ರದಲ್ಲಿ, ರಾಧಿಕಾ ನಾರಾಯಣ್ ಅವರು ಭೂಮಿ ಪಾತ್ರದಲ್ಲಿ, ದಿಗಂತ್ ಅವರು ಗಗನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ದೈಜಿ ಸಿನಿಮಾದಲ್ಲಿ ಶೂಟಿಂಗ್ ನಡೆಯುತ್ತಿದ್ದು ಶೇಕಡ 50% ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ. ಈ ಚಿತ್ರದ ಛಾಯಾಗ್ರಹಣ ಶ್ರೀಶಾ ಕುದುವಳ್ಳಿ ಅವರು ಮಾಡುತ್ತಿದ್ದು, ನಿರ್ಮಾಣ ರವಿ ಕಶ್ಯಪ್ ಅವರು ಮಾಡಿದ್ದಾರೆ.