ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಫ್ಯಾನ್ಸ್ ಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಪುಷ್ಪ ಸರಣಿ ಸಿನಿಮಾಗಳ ಸಕ್ಸಸ್ ಬಳಿಕ ಅಲ್ಲು ಅರ್ಜುನ್-ಅಟ್ಲಿ ಜೊತೆ ಕೈ ಜೋಡಿಸಿದ್ದಾರೆ. ಹಾಲಿವುಡ್ ಲೆವೆಲ್ ನಲ್ಲಿ ಈ ಜೋಡಿ ಬೊಂಬಾಟ್ ಪ್ರಾಜೆಕ್ಟ್ ಮಾಡೋದಿಕ್ಕೆ ಪಣ ತೊಟ್ಟಿದೆ. ಅನೌನ್ಸ್ ಮೆಂಟ್ ವಿಡಿಯೋ ಮೂಲಕ ಅಟ್ಲಿ-ಅಲ್ಲು ಧಮಾಕ ಎಬ್ಬಿಸಿದೆ. ಸದ್ಯ ಈ ಚಿತ್ರದ ಶೂಟಿಂಗ್ ಹಂತದಲ್ಲಿದೆ.
ಇದೀಗ ದಕ್ಷಿಣ ಚಿತ್ರರಂಗದ ಖ್ಯಾತ ನಿರ್ಮಾಪಕ ದಿಲ್ ರಾಜು ಆರ್ಯ 2 ಟೈಟಲ್ ರಿಜಿಸ್ಟ್ರೇಷನ್ ಮಾಡಿಸಿದ್ದಾರೆ. ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದಿಲ್ ರಾಜು ಟೈಟಲ್ ರಿಜಿಸ್ಟ್ರೇಷನ್ ಮಾಡಿಸಿದ್ದಾರೆ. ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್ ʼಆರ್ಯ-3ʼಗಾಗಿ ಮತ್ತೆ ಒಂದಾಗಲಿದೆಯೇ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಅಲ್ಲು-ಅಟ್ಲಿ ಸದ್ಯ ʼAA22ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಳಿಕ ತ್ರಿವಿಕ್ರಮ್ ಹಾಗೂ ಪುಷ್ಪ3 ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಹಾಗಿದ್ರೆ ಆರ್ಯ 3 ಟೇಕಾಫ್ ಆಗುವುದು ಯಾವಾಗ? ಗೊತ್ತಿಲ್ಲ. ದಿಲ್ ರಾಜು ತಮ್ಮ ಸೋದರಳಿಯ ಆಶಿಶ್ ರೆಡ್ಡಿಗೆ ಆರ್ಯ 3 ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.