ಕೆಲವರಿಗೆ ಊಟಕ್ಕೆ ಕೂತಾಗ ಪಕ್ಕದಲ್ಲಿ ನಂಚಿಕೊಳ್ಳಲು, ಕೇವಲ ತರಕಾರಿ ಪಲ್ಯ ಇದ್ದರೆ ಸಾಲದು, ಜೊತೆಗೆ ಸಣ್ಣ ತಟ್ಟೆಯಲ್ಲಿ ಬೇಕರಿ ಐಟಮ್ಸ್‌ಗಳಾದ ಮಿಕ್ಸ್ಚರ್, ಖಾರ ಕಡ್ಡಿ, ಕಾಂಗ್ರೆಸ್ ಕಡ್ಲೆಬೀಜ ಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಅದೇ ಇನ್ನೂ ಕೆಲವರಿಗೆ ಎಣ್ಣೆಯಲ್ಲಿ ಕರಿದ ಹಪ್ಪಳ, ಸಂಡಿಗೆ ಇದ್ದರೆ ಮಾತ್ರ, ಊಟ ಸೇರುವುದು! ಅದು ಏನೇ ಇರಲಿ, ಅವರ ಅವರ ಇಷ್ಟ.
ಕಾಂತಾರ ಶೂಟಿಂಗ್ ಸೆಟ್ ನಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ: ಸ್ಪಷ್ಟನೆ ಕೊಟ್ಟ ಹೊಂಬಾಳೆ ಫಿಲ್ಮ್ಸ್ !
ಆದರೆ ನಿಮಗೆ ಗೊತ್ತಿರಲಿ, ಇಂತಹ ಬೇಕರಿ ಐಟಮ್ಸ್‌ಗಳನ್ನು ತಿಂದು ಆರೋಗ್ಯ ಹಾಳು ಮಾಡಿ ಕೊಳ್ಳುವ ಬದಲು, ಊಟದ ಜೊತೆಗೆ ಸಣ್ಣ ತುಂಡು ನಿಂಬೆ ಉಪ್ಪಿನಕಾಯಿ ತಿನ್ನುವ ಅಭ್ಯಾಸ ಮಾಡಿ ಕೊಂಡರೆ, ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತದೆ…
ಉಪ್ಪಿನಕಾಯಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ… ಮೃಷ್ಟಾನ್ನ ಭೋಜನ ಬಡಿಸಿದರೂ ಪಕ್ಕದಲ್ಲಿ ಉಪ್ಪಿನಕಾಯಿ ಇದ್ದರೆ ಊಟದ ಮಜವೇ ಬೇರೆ ಅನ್ನೋದು ಊಟ ಬಲ್ಲವರ ಮಾತು! ಆದರೆ, ಉಪ್ಪಿನಕಾಯಿ ಇಷ್ಟ ಅಂತ ಸಿಕ್ಕಾಪಟ್ಟೆ ತಿಂದ್ರೆ ಆರೋಗ್ಯವೂ ಅಷ್ಟೇ ಹದಗೆಡುತ್ತದೆ. ಹಾಗಾಗಿ ಉಪ್ಪಿನಕಾಯಿ ತಿನ್ನೋದ್ರಿಂದ ಏನೆಲ್ಲಾ ತೊಂದರೆ ಆಗುತ್ತೆ ಎನ್ನುವ ಅಂಶಗಳನ್ನೊಮ್ಮೆ ತಿಳಿದುಕೊಳ್ಳಿ..
ಉಪ್ಪಿನಕಾಯಿ ತಿನ್ನುವುದರಿಂದ ಆಗುವ ಸಮಸ್ಯೆಗಳು
* ಉಪ್ಪಿನಕಾಯಿಯಲ್ಲಿ ಖಾರ ಹೆಚ್ಚಾಗಿರುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಟ್ಟಿಟ್ಟ ಬುತ್ತಿ.
* ಹಲವು ದಿನಗಳ ಕಾಲ ಉಪ್ಪಿನಕಾಯಿ ಶೇಖರಿಸಿ ಇಟ್ಟು ತಿನ್ನುವುದರಿಂದ ಹೊಟ್ಟೆ ಉರಿ, ಎದೆ ಉರಿಗೆ ಕಾರಣವಾಗುತ್ತದೆ.
ಇದರಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುವದರಿಂದ ಶರೀರದಲ್ಲಿ ಸೋಡಿಯಂನ ಅಂಶ ಹೆಚ್ಚಾಗುತ್ತದೆ.
* ಇದರಿಂದಾಗಿ ರೋಗನಿರೋಧಕ ಶಕ್ತಿಯೂ ಕುಂಠಿತವಾಗುತ್ತದೆ.
* ಉಪ್ಪಿನಕಾಯಿ ಹೆಚ್ಚು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಉಪ್ಪು, ಖಾರದ ಅಂಶಗಳು ಹೆಚ್ಚಾಗಿರುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳಿಗೂ ಕಾರಣವಾಗುತ್ತದೆ.
* ಅತಿಯಾಗಿ ಖಾರ ಸೇವಿಸುವುದರಿಂದ ಕರುಳಿನಲ್ಲಿ ಹುಣ್ಣಾಗಿ ಹೊಟ್ಟೆ ಉರಿ ಕಾಣಿಸಿಕೊಳ್ಳುತ್ತದೆ.
* ಅಜೀರ್ಣ ಸಮಸ್ಯೆ ಉಲ್ಬಣವಾಗಿ ಮಲಬದ್ಧತೆಗೂ ಸಹ ಕಾರಣವಾಗಬಹುದು.