ಆರೋಗ್ಯಕರ ಆಹಾರ ತಿನ್ನುವುದೇನೋ ಸರಿ, ಆದರೆ ತಿಳಿಯದೆ ಜನರು ಸೇವಿಸುವ ಅನಾರೋಗ್ಯಕರ ಆಹಾರಗಳಿಂದಾಗಿ, ಜನರು ಈ ಆಹಾರಗಳ ಸಂಪೂರ್ಣ ಪ್ರಯೋಜನ ಪಡೆಯೋದಿಲ್ಲ. ಈಗಂತೂ ಪ್ರತಿಯೊಬ್ಬರ ಮನೆಯಲ್ಲೂ ಒಂದೊಂದು ಜೇನು ತುಪ್ಪದ ಬಾಟಲ್ ಇದ್ದರೆ ಒಳ್ಳೆಯದು. ಕೇವಲ ನಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ನಮ್ಮ ತ್ವಚೆಗೆ ಮತ್ತು ತಲೆ ಕೂದಲಿನ ಆರೋಗ್ಯಕ್ಕೆ ಜೇನುತುಪ್ಪದ ಸಹಾಯವನ್ನು ಮರೆಯುವ ಹಾಗಿಲ್ಲ.
ನೀವು ಕೂಡ ಜಾಸ್ತಿ ಉಪ್ಪಿನಕಾಯಿ ತಿಂತೀರಾ!? ಹಾಗಿದ್ರೆ ಈ ಸಮಸ್ಯೆಗಳು ಗ್ಯಾರಂಟಿ!
ಆದ್ರೆ ಸಂಶೋಧನೆಗಳು ಅಧ್ಯಯನ ನಡೆಸಿದ ನಂತರ ತಮ್ಮ ಅಭಿಪ್ರಾಯವನ್ನು ಈ ರೀತಿ ಹಂಚಿಕೊಂಡಿವೆ. ಜೇನು ತುಪ್ಪವನ್ನು ಬಿಸಿ ಮಾಡಿ ಸೇವನೆ ಮಾಡಬಾರದು ಎಂದು ಕೇಳಿದ್ದೇವೆ. ಹಾಗಾಗಿಯೇ ನಾವು ತಯಾರು ಮಾಡುವ ಅನೇಕ ಬಗೆಯ ಗಿಡಮೂಲಿಕೆ ಚಹಾಗಳನ್ನು ಸ್ವಲ್ಪ ಆರಿಸಿ ನಂತರ ಅದಕ್ಕೆ ಒಂದು ಟೇಬಲ್ ಚಮಚ ಜೇನು ತುಪ್ಪ ಬೆರೆಸಿ ಸೇವನೆ ಮಾಡುತ್ತೇವೆ.
ಆದರೆ ಸುಡುವ ಬಿಸಿ ನೀರಿಗೆ ಜೇನು ತುಪ್ಪವನ್ನು ಹಾಕುವುದರಿಂದ ಜೇನು ತುಪ್ಪ ಬಿಸಿಯಾದಂತೆ ಆಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಮಾರಕ. ಬಿಸಿಯಾದ ನೀರಿನಲ್ಲಿ ಜೇನುತುಪ್ಪವನ್ನು ಬೆರೆಸುವುದರಿಂದ ಪ್ರಯೋಜನಕಾರಿ ಪೋಷಕಾಂಶಗಳು ಮತ್ತು ಪೋಷಕಾಂಶಗಳನ್ನು ನಾಶವಾಗಬಹುದು. ಆದ್ದರಿಂದ ನೀರಿನಲ್ಲಿ ಜೇನುತುಪ್ಪವನ್ನು ಬೆರೆಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಜೇನುತುಪ್ಪ ಬೆರೆಸಿದ ನೀರನ್ನು ಕುಡಿಯುವುದರಿಂದ ತೂಕವನ್ನು ಕಳೆದುಕೊಳ್ಳುತ್ತೇವೆ ಎಂಬ ಕಲ್ಪನೆಯು ಸರಿಯಲ್ಲ. ಅದಕ್ಕಾಗಿ ದೈಹಿಕ ಕಸರತ್ತು ಮಾಡಬೇಕು. ಆದರೆ ಈ ಪಾನೀಯದಿಂದ ಚರ್ಮವನ್ನು ಆರೋಗ್ಯವಾಗಿಡುವುದು ಸೇರಿದಂತೆ ಇತರ ಪ್ರಯೋಜನಗಳು ಸಿಗಲಿವೆ.