ಬೇಸಿಗೆ ಕಾಲ ಬಂತೆಂದರೆ ಸಾಕು ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಭರಾಟೆ ಜೋರಾಗುತ್ತದೆ, ಸಿಹಿಯಾದ ರಸಭರಿತ ಮಾವಿನ ಹಣ್ಣನ್ನು ಎಲ್ಲರೂ ಇಷ್ಟಪಡುತ್ತಾರೆ. ಹೀಗಾಗಿ ಬೇಸಿಗೆಗಾಗಿ ಜನ ಕಾತರದಿಂದ ಕಾಯುತ್ತಿದ್ದಾರೆ. ಮಾವಿನ ಹಣ್ಣನ್ನು ತಿಂದಾಗ ಅದರ ಸಿಪ್ಪೆ ಸುಲಿದು ಕಸಕ್ಕೆ ಎಸೆಯುತ್ತಾರೆ. ಆದರೆ ಮಾವಿನ ಹಣ್ಣಿನ ಹೊರತಾಗಿ ಅದರ ಸಿಪ್ಪೆಯನ್ನೂ ತಿನ್ನಬಹುದು ಎಂಬುದು ನಿಮಗೆ ತಿಳಿದಿದೆಯೇ. ಮಾವಿನ ಹಣ್ಣಿನ ಸಿಪ್ಪೆಯನ್ನು ತಿನ್ನುವುದು ರುಚಿ ದೃಷ್ಟಿಯಿಂದ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು.
ಕುಡಿಯುವ ನೀರಿಗೆ ಹಾಹಾಕಾರ: ಹುಬ್ಬಳ್ಳಿಯಲ್ಲಿ ಖಾಲಿ ಕೊಡ ಹಿಡಿದು ನಾರಿಯರ ಪ್ರತಿಭಟನೆ
ನಾವು ಸಾಮಾನ್ಯವಾಗಿ ಮಾವಿನಹಣ್ಣನ್ನು ತಿನ್ನುವುದು ಅದರ ಹಣ್ಣಿನ ಭಾಗವನ್ನಷ್ಟೇ, ಆದರೆ ಸಿಪ್ಪೆಯನ್ನು ಎಸೆಯುವುದು ರೂಢಿಯಾಗಿದೆ. ಆದರೆ ಈಗಾಗಲೇ ಹಲವರು ಮಾವಿನ ಸಿಪ್ಪೆಯನ್ನು ತಿನ್ನಬಹುದೇ? ಎಂದು ಆಶ್ಚರ್ಯಕರವಾಗಿ ಕೇಳುತ್ತಾರೆ. ಇದಕ್ಕೆ ಉತ್ತರ, ಹೌದು ಎನ್ನುತ್ತಾರೆ ತಜ್ಞರು. ಮಾವಿನ ಸಿಪ್ಪೆಯು ನಿಜಕ್ಕೂ ಉತ್ತಮವಾಗಿದ್ದು, ಪೋಷಕಾಂಶಗಳಿಂದ ಕೂಡಿದೆ.
ಆದರೆ ಇದು ಎಲ್ಲರಿಗೂ ಅಲ್ಲ, ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದು ಇದನ್ನು ಸೇವಿಸಲಾಗದು. ಮಾವಿನ ಸಿಪ್ಪೆಯು ಬಹುಪೋಷಕಾಂಶಗಳ ಆಗರವಾಗಿದೆ. ಇದರಲ್ಲಿ ಆಮ್ಲಜನಕದಿಂದ ರಕ್ಷಿಸುವ ಆಂಟಿಆಕ್ಸಿಡೆಂಟ್‌ಗಳು, ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಮ್ಯಾಂಗಿಫೆರಿನ್, ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ A, C, E ಸೇರಿದಂತೆ ಹಲವಾರು ಸಸ್ಯ ಸಂಯುಕ್ತಗಳು ಅಡಗಿವೆ.
ಇದಲ್ಲದೆ, ಸಿಪ್ಪೆಯು ಉತ್ತಮ ಪ್ರಮಾಣದ ಆಹಾರ ನಾರುಗಳನ್ನು ಹೊಂದಿರುವುದರಿಂದ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಕೆಲ ಅಧ್ಯಯನಗಳು ಸಿಪ್ಪೆಯಲ್ಲಿ ಲಭ್ಯವಿರುವ ರೆಸ್ವೆರಾಟ್ರೋಲ್ ಮತ್ತು ಕ್ವೆರ್ಸೆಟಿನ್ ಎಂಬ ಘಟಕಗಳು ದೇಹದ ಕೋಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ ಎಂಬುದನ್ನು ತೋರಿಸಿವೆ.
ಮಾವಿನ ಸಿಪ್ಪೆಯು ಉತ್ತಮವಾದರೂ, ಕೆಲವು ಅಪಾಯಗಳು ಇವೆ. ಪ್ರಮುಖವಾಗಿ, ಇದು ಉರುಶಿಯೋಲ್ ಎಂಬ ಸಂಯುಕ್ತವನ್ನು ಹೊಂದಿರಬಹುದು. ಇದು ವಿಷಕಾರಿ ಈವಿ ಗಿಡದಲ್ಲೂ ಕಂಡುಬರುವ ಅಂಶ. ಕೆಲವವರಿಗೆ ಇದರಿಂದ ತುರಿಕೆ, ತ್ವಚೆಯ ಅಲರ್ಜಿ, ಅಥವಾ ಚರ್ಮ ಉರಿಯುವ ಲಕ್ಷಣಗಳು ಕಾಣಿಸಬಹುದು.
ಇನ್ನೊಂದು ಮಹತ್ವದ ಅಂಶವೆಂದರೆ ಮಾವಿನ ಮರಕ್ಕೆ ಸಿಂಪಡಿಸುವ ಕೀಟನಾಶಕ. ಸಾವಯವವಲ್ಲದ ಮಾವುಗಳಲ್ಲಿ ಇವುಗಳು ಸಿಪ್ಪೆಯ ಮೇಲ್ಭಾಗದಲ್ಲಿ ಹೆಚ್ಚಿರಬಹುದು. ಹೀಗಾಗಿ ಸಿಪ್ಪೆ ಸೇವನೆಗೂ ಮುನ್ನ ಸರಿಯಾಗಿ ತೊಳೆದು ಸೇವಿಸುವುದು ಬಹುಮುಖ್ಯ.
ಮಾವಿನ ಹೊರಚರ್ಮವನ್ನು ತೆಗೆದು ಹಾಕಿ: ಕೆಲವೊಮ್ಮೆ ಸಿಪ್ಪೆಯ ಮೇಲ್ಭಾಗದಲ್ಲಿ ಹೆಚ್ಚು ಕಹಿಯಾಗಿರಬಹುದು, ಅದನ್ನು ತೆಗೆಯುವುದು ಉತ್ತಮ.
ಬ್ಲಾಂಚ್ ಅಥವಾ ಹುರಿದು ಸೇವಿಸಿ: ಹುರಿಯುವುದು ಅಥವಾ ಬಿಸಿನೀರಿನಲ್ಲಿ ಬೇಯಿಸುವ ಮೂಲಕ ಸೇವಿಸುವುದು ಸೂಕ್ತ.
ಮಾವಿನ ಸಿಪ್ಪೆಯನ್ನು ಕೇವಲ ತಿನ್ನುವುದು ಮಾತ್ರವಲ್ಲ, ಅದನ್ನು ಹಲವು ರೆಸಿಪಿಗಳಲ್ಲಿ ಬಳಕೆ ಮಾಡುವ ಮೂಲಕ ವಿಶೇಷ ಸುವಾಸನೆ ನೀಡಬಹುದು:
ಮಾವು ಸಿಪ್ಪೆ ಚಟ್ನಿ: ತೆಂಗಿನಕಾಯಿ, ಹಸಿಮೆಣಸು ಮತ್ತು ಹುಣಸೆಹಣ್ಣಿನೊಂದಿಗೆ ಸೇರಿಸಿ ರುಚಿಕರವಾದ ಚಟ್ನಿ ತಯಾರಿಸಿ.
ಸ್ಮೂಥಿಯಲ್ಲಿ ಸೇರಿಸಿ: ಸಿಪ್ಪೆಯ ಸಣ್ಣ ತುಂಡುಗಳನ್ನು ಹಣ್ಣಿನ ಸ್ಮೂಥಿಗೆ ಸೇರಿಸಿ ಹೆಚ್ಚು ನಾರು ಆಹಾರ ಪಡೆಯಿರಿ.
ಚಿಪ್ಸ್ ಮಾಡಿ: ಸಿಪ್ಪೆ ತುಂಡುಗಳನ್ನು ಉಪ್ಪು, ಮೆಣಸು ಸವರಿ ಬೇಕಿಂಗ್ ಮಾಡಿ ಅಥವಾ ಹುರಿದು ತಯಾರಿಸಿ.
ಡಿಟಾಕ್ಸ್ ಇನ್ಫ್ಯೂಷನ್: ಮಾವಿನ ಸಿಪ್ಪೆ, ದಾಲ್ಚಿನ್ನಿ ಮತ್ತು ಪುದೀನವನ್ನು ಕುದಿಸಿ, ಕುಡಿಯಿರಿ.
ಮಾವಿನ ಸಿಪ್ಪೆಯು ಹಲವು ಪೋಷಕಾಂಶಗಳ ಆಗರ. ಆದರೆ ಇದರ ಸೇವನೆಗೆ ಮುನ್ನ ಎಚ್ಚರಿಕೆಯಿಂದಿರುವುದು ಅತ್ಯಗತ್ಯ. ಮೊದಲ ಬಾರಿಗೆ ಬಳಸುವವರು ಸಣ್ಣ ಪ್ರಮಾಣದಿಂದ ಪ್ರಾರಂಭಿಸಿ ದೇಹದ ಪ್ರತಿಕ್ರಿಯೆ ಗಮನಿಸಿ, ನಂತರ ಬಳಸಿ. ಇಂತಹ ಆಹಾರಗಳ ಬಗ್ಗೆ ಮುನ್ನೆಚ್ಚರಿಕೆಯಿಂದ ನಡೆದುಕೊಳ್ಳುವುದು ಉತ್ತಮ. ಆಹಾರದ ವ್ಯರ್ಥವನ್ನೂ ಕಡಿಮೆ ಮಾಡಬಹುದು. ಮುಂದಿನ ಬಾರಿ ನೀವು ಮಾವಿನ ರಸವನ್ನು ಮಾತ್ರ ಕುಡಿದು, ಸಿಪ್ಪೆಯನ್ನು ಎಸೆಯುವ ಬದಲು ವಿವಿಧ ರೀತಿಯ ರೆಸಿಪಿ ತಯಾರಿಸಿ, ಸೇವಿಸಿ, ಜೀರೋ ವೆಸ್ಟ್ ಪುಡ್ ಪಾಲಿಸಿ ಅನ್ನು ಜಾರಿ ತನ್ನಿ.