Close Menu
Ain Live News
    Facebook X (Twitter) Instagram YouTube
    Wednesday, June 11
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮಾವಿನಹಣ್ಣನ್ನು ರಾತ್ರಿ ವೇಳೆ ತಿಂತೀರಾ!? ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ!

    By AIN AuthorApril 26, 2025
    Share
    Facebook Twitter LinkedIn Pinterest Email
    Demo

    ಪ್ರಕೃತಿ ಕಾಲಕಾಲಕ್ಕೆ ತಕ್ಕ ಹಾಗೆ ನಿಸರ್ಗದತ್ತವಾದ ಹಣ್ಣು ಮತ್ತು ತರಕಾರಿಗಳನ್ನು ಮನುಷ್ಯನಿಗೆ ನೀಡುತ್ತಾ ಬರುತ್ತಿದೆ. ಹೀಗಾಗಿ ಖುತುವಿಗೆ ಅನುಗುಣವಾಗಿ ಸಿಗುವ ಈ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಸೇವಿಸುತ್ತಾ ಬರುವುದರಿಂದ ನಮ್ಮ ಆರೋಗ್ಯವನ್ನು ಸದೃಢತೆಯನ್ನು ಕಾಯ್ದು ಕೊಳ್ಳಲು ನೆರವಾಗುವುದು, ಇದರಲ್ಲಿ ಮಾವಿನಹಣ್ಣು ಕೂಡ ಒಂದು. ಸಾಮಾನ್ಯವಾಗಿ ಏಪ್ರಿಲ್‌-ಮೇ ತಿಂಗಳು ಬಂತೆಂದರೆ ಮಾವಿನ ಹಣ್ಣಿನ ಸೀಜನ್‌ ಶುರುವಾಗಿ ಬಿಡುತ್ತದೆ. ಹಣ್ಣುಗಳ ರಾಜ ಎಂದೇ ಕರೆಯಲಾಗುವ ಈ ಹಣ್ಣು ಮಾರುಕಟ್ಟೆಗೆ ಕಾಲಿಟ್ಟ ಎಂದರೆ ಉಳಿದ ಹಣ್ಣುಗಳ ಬೇಡಿಕೆ ಕೊಂಚ ಕುಸಿಯುತ್ತದೆ.

    ಚಿಕ್ಕಬಳ್ಳಾಪುರ : ಈಜು ಕಲಿಸಲು ಹೋಗಿ ತಂದೆ, ಮಗಳು ಇಬ್ಬರು ಸಾವು

    ತಜ್ಞರು ಹೇಳುವ ಪ್ರಕಾರ, ಹಗಲಿನಲ್ಲಿ ಮಾವಿನಹಣ್ಣು ಸೇವಿಸುವುದರಿಂದ ಪ್ರಯೋಜನಕಾರಿಯಾಗಲಿದೆ, ಆದರೆ ರಾತ್ರಿಯಲ್ಲಿ ಈ ಹಣ್ಣನ್ನು ತಿನ್ನುವುದರಿಂದ ಹಲವಾರು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಂತೆ.

    ಊಟದ ಬಳಿಕ ಕೆಲವೊಂದು ಹಣ್ಣುಗಳನ್ನು ಸೇವನೆ ಮಾಡ ಬಾರದು ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿ ಮಾವಿನ ಹಣ್ಣುಗಳು ಕೂಡ ಒಂದು. ಯಾಕಂದ್ರೆ ರಾತ್ರಿ ಸಮಯದಲ್ಲಿ ದೇಹದ ಜೀರ್ಣಕ್ರಿಯೆ ಪ್ರಕ್ರಿಯೆಯು ನಿಧಾನವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಾವಿನ ಹಣ್ಣನ್ನು ಸೇವನೆ ಮಾಡುವುದರಿಂದ, ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆಯಂತೆ. ಇದಕ್ಕೆ ಪ್ರಮುಖ ಕಾರಣ ಏನಂದ್ರೆ ಈ ಹಣ್ಣಿನಲ್ಲಿ ಕಂಡು ಬರುವ ಅಧಿಕ ಪ್ರಮಾಣದ ನಾರಿನಾಂಶದ ಜೊತೆಗೆ ನೈಸರ್ಗಿಕ ಸಿಹಿಯಾಂಶ, ಕ್ಯಾಲೋರಿ ಗಳು ಜೀರ್ಣಕ್ರಿಯೆ ಪ್ರಕ್ರಿಯೆಗಳ ಮೇಲೆ ಅಡ್ಡಪರಿಣಾಮಗಳನ್ನು ಬೀರುತ್ತದೆ.

    ಇನ್ನು ಆರೋಗ್ಯ ತಜ್ಞರು ಹೇಳುವ ಪ್ರಕಾರ, ಇದೇ ಕಾರಣಕ್ಕೆ ಕೆಲವೊಮ್ಮೆ ಗ್ಯಾಸ್ಟ್ರಿಕ್, ಅಜೀರ್ಣ, ಹೊಟ್ಟೆ ನೋವು ಮತ್ತು ಹೊಟ್ಟೆಯುಬ್ಬ ರದಂತಹ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.

    ಮಾವಿನಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಧಿಕವಾಗಿದೆ. ಹೀಗಾಗಿ ರಾತ್ರಿ ಮಲಗುವ ಸಮಯದಲ್ಲಿ ಈ ಹಣ್ಣನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಮಟ್ಟ ಹಠಾತ್ ಹೆಚ್ಚಳಕ್ಕೆ ಕಾರಣವಾಗಬಹುದು. ಹೀಗಾಗಿ ಈಗಾಗಲೇ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಈ ಹಣ್ಣಿನಿಂದ ದೂರವಿದ್ದರೆ ಒಳ್ಳೆಯದು.

    ಮಾವಿನಹಣ್ಣಿನಲ್ಲಿ ಕ್ಯಾಲೋರಿ ಮತ್ತು ನೈಸರ್ಗಿಕ ಸಕ್ಕರೆಯಾಂಶ ಎರಡೂ ಕೂಡ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಹೀಗಾಗಿ ರಾತ್ರಿ ಸಮಯದಲ್ಲಿ ಈ ಹಣ್ಣನ್ನು ಸೇವನೆ ಮಾಡುವುದರಿಂದ ದೇಹವು ಕ್ಯಾಲೊರಿಗಳನ್ನು ಸುಡಲು ಸಾಕಷ್ಟು ಸಮಯವನ್ನು ಒದಗಿಸುವುದಿಲ್ಲ, ಯಾಕೆಂದ್ರೆ ರಾತ್ರಿಯ ಸಮಯದಲ್ಲಿ ದೈಹಿಕ ಚಟುವಟಿಕೆಯನ್ನು ಮಾಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅದು ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗ ಬಹುದು ಮತ್ತು ತೂಕವನ್ನು ಹೆಚ್ಚಿಸಬಹುದು.

    ರಾತ್ರಿಯ ಸಮಯದಲ್ಲಿ ಮಾವಿನ ಹಣ್ಣು ತಿನ್ನುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ, ಇದರಿಂದಾಗಿ ದೇಹವು ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೆ ಮಲಗುವ ಮುನ್ನ ಮಾವು ತಿಂದರೆ ಅದು ನಿದ್ರೆಗೆ ಅಡ್ಡಿಯಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ನಿದ್ರೆಯ ಗುಣಮಟ್ಟವೂ ಕೂಡ ದಿನಾ ಹೋದ ಹಾಗೆ ಕಡಿಮೆ ಆಗುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ತೂಕ ಇಳಿಸಿಕೊಳ್ಳಲು ನೀವು ಅನ್ನ ತ್ಯಜಿಸಲೇಬೇಕಾ? ಬೇಕಾಗಿಲ್ಲ.. ಈ ಅಕ್ಕಿ ಬಳಸಿ ಸಾಕು ವೇಟ್ ಲಾಸ್ ಪಕ್ಕಾ

    June 11, 2025

    ಮಹಿಳೆಯರಿಗೆ ಬ್ಲ್ಯಾಕ್ ಕಾಫಿ ಒಂದು ವರದಾನ: ಯಾವಾಗ ಕುಡಿಯಬೇಕು? ಇದರಿಂದ ಸಿಗುವ ಪ್ರಯೋಜನಗಳೇನು?

    June 11, 2025

    ಜಸ್ಟ್ ಈ ಎಲೆ ಜಗಿದು ರಸ ಸೇವಿಸಿದ್ರೆ ಸಾಕು ಕೊಲೆಸ್ಟ್ರಾಲ್ ಕರಗಿ ಹೋಗುತ್ತೆ!

    June 11, 2025

    ನಿಮ್ಮ ಕಿವಿಯ ಮೇಲೆ ಕೂದಲು ಇದ್ಯಾ!? ಹಾಗಿದ್ರೆ ಇದು ಶುಭವೋ? ಅಶುಭವೋ ಎಂದು ಇಲ್ಲಿ ತಿಳಿಯಿರಿ!

    June 11, 2025

    ಮನೆಯಲ್ಲಿ ಸೊಳ್ಳೆ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಈ ಸಸ್ಯ ಇಂದೇ ತನ್ನಿ!

    June 10, 2025

    ಎಚ್ಚರ.. ನೀವು ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸುತ್ತೀರಾ..? ಈ ಸಮಸ್ಯೆಗಳು ಉದ್ಭವಿಸಬಹುದು

    June 10, 2025

    ಒಣಗಿದ ಬಾದಾಮಿ ಮಾತ್ರವಲ್ಲ, ಹಸಿ ಬಾದಾಮಿ ಕೂಡ ನಮಗೆ ತುಂಬಾ ಪ್ರಯೋಜನಕಾರಿ.!

    June 10, 2025

    Weight Loss Water: ದುಂಡಗಿನ ಹೊಟ್ಟೆ ಮಂಜಿನಂತೆ ಕರಗಿಸತ್ತೆ ಈ ನೀರು!

    June 10, 2025

    ದಪ್ಪಗಿರೋ ನಿಮ್ಮ ಹೊಟ್ಟೆ ಫ್ಲಾಟ್ ಆಗಲು ಒಂದು ಗ್ಲಾಸ್​ ನೀರಿಗೆ 2 ಸ್ಪೂನ್​ ಇದನ್ನು ಮಿಕ್ಸ್​ ಮಾಡಿ: ಆಮೇಲೆ ನೋಡಿ ಚಮತ್ಕಾರ!

    June 10, 2025

    ಹಲಸಿನ ಹಣ್ಣಿನ ಆರೋಗ್ಯ ಬೆನಿಫಿಟ್ ಬಗ್ಗೆ ತಿಳಿದಿದ್ದೀರಾ!? ಹಾಗಿದ್ರೆ ಇದನ್ನು ಮಿಸ್ ಮಾಡ್ದೆ ನೋಡಿ!

    June 9, 2025

    ಬೋಳು ತಲೆಯಿಂದ ಬೇಸತ್ತಿದ್ದೀರಾ!? ಹಾಗಿದ್ರೆ ಹೀಗೆ ಮಾಡಿ, ದಪ್ಪ ಹಾಗೂ ಉದ್ದವಾಗಿ ಬೆಳೆಯುತ್ತೆ ಕೂದಲು!

    June 9, 2025

    ಮುಟ್ಟಿನ ಸಮಯದಲ್ಲಿ ಈ ಲಕ್ಷಣಗಳನ್ನು ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ! ಯಾಕೆ ಗೊತ್ತಾ!?

    June 9, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.