ಹಲ್ಲಿನ ಸಾಮಾನ್ಯ ಸಮಸ್ಯೆಗಳಲ್ಲಿ ಹುಳುಕು ಹಲ್ಲು ಕೂಡ ಒಂದು. ಹಲ್ಲಿನಲ್ಲಿ ಹುಳುಕು ಆಗಿದೆ ಎಂದರೆ ಸೂಕ್ಷ್ಮಾಣುಜೀವಿಗಳು ಹಲ್ಲಿನಲ್ಲಿ ಸೇರಿಕೊಂಡು ತೂತುಮಾಡಿ ಅದನ್ನು ಹಾಳುಮಾಡುತ್ತವೆ. ಹೀಗೆ ಹುಳುಕು ಹಿಡಿದಿರುವ ಹಲ್ಲಿಗೆ ಹುಳುಕು ಹಲ್ಲು ಎಂದು ಹೇಳುತ್ತಾರೆ. ಮಕ್ಕಳು ದೊಡ್ಡವರು ಎನ್ನದೇ ಇದು ಎಲ್ಲರನ್ನು ಒಂದೇ ರೀತಿಯಾಗಿ ಕಾಡುತ್ತದೆ. ಹಾಗೆಯೇ ಇದು ನೆನ್ನೆ ಮೊನ್ನೆಯ ಸಮಸ್ಯೆಯಲ್ಲ. ಅನಾದಿ ಕಾಲದಿಂದಲೂ ಇದೆ.
ಇಂದು ಅನೇಕರು ಹಲ್ಲು ನೋವು ಮತ್ತು ಹುಳುಕು ಹಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತುಂಬಾ ಚಿಕ್ಕ ವಯಸ್ಸಿನಲ್ಲೇ ಹಲ್ಲು ಹುಳುಕು ಆಗುವುದು, ಹಲ್ಲು ನೋವು ಬರುವುದು ಮತ್ತೆ ಕೆಲವು ಬಾರಿ ಹಲ್ಲು ಕೀಳಿಸಬೇಕಾದ ಸಂದರ್ಭ ಬರುತ್ತದೆ. ಈ ರೀತಿಯ ಸಮಸ್ಯೆ ಅನೇಕ ಜನರನ್ನ ಕಾಡುತ್ತದೆ. ನಿಮಗೆ ಏನಾದರೂ ಹಲ್ಲು ನೋವು ಬಂದಿದ್ದರೆ ಅಥವಾ ಹಲ್ಲು ಹುಳುಕು ಆಗಿದ್ರೆ ಈ ಸಿಂಪಲ್ ಮನೆಮದ್ದನ್ನು ಟ್ರೈ ಮಾಡಿ ನೋಡಿ.
ಪರಿಣಾಮಕಾರಿ ಮನೆಮದ್ದಿನಿಂದ ನಿಮಿಷಗಳಲ್ಲಿ ನಿಮ್ಮ ಹಲ್ಲು ನೋವು ಮಾಯ ಆಗುತ್ತೆ, ನಿಮ್ಮ ಹುಳುಕು ಹಲ್ಲಿಗೆ ಇದೇ ಪವರ್ಫುಲ್ ಮನೆ ಮದ್ದಾಗಿದೆ. ಇದನ್ನ ನೀವು ಮನೆಯಲ್ಲಿಯೇ ತಯಾರಿಸಬಹುದು. ಹಾಗಾದ್ರೆ ಬನ್ನಿ ಈ ಮನೆಮದ್ದನ್ನು ಹೇಗೆ ಸಿದ್ಧಪಡಿಸುವುದು ಎಂದು ನೋಡೋಣ…
ಅದ್ಭುತ ಮನೆಮದ್ದಿಗೆ ಬೇಕಾಗಿರುವುದು ಬೆಳ್ಳುಳ್ಳಿ… ಪ್ರತಿಯೊಬ್ಬರ ಅಡುಗೆ ಮನೆಯಲ್ಲಿಯೂ ಬೆಳ್ಳುಳ್ಳಿ ಇದ್ದೇ ಇರುತ್ತದೆ. ಒಂದು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಬೇಕು. ಅದರ ಸಿಪ್ಪೆಗಳನ್ನ ತೆಗೆದು ಎಸಳುಗಳನ್ನ ಒಂದು ಕಡೆ ಇಟ್ಟುಕೊಳ್ಳಿರಿ. ಈ ಬೆಳ್ಳುಳ್ಳಿ ಹಲವಾರು ಅದ್ಭುತ ಆರೋಗ್ಯಕರ ಪ್ರಯೋಜನಗಳನ್ನ ಹೊಂದಿದೆ. ಬೆಳ್ಳುಳ್ಳಿಯಲ್ಲಿ ಆಂಟಿ -ಬ್ಯಾಕ್ಟೀರಿಯಲ್ ಮತ್ತು ಆಂಟಿ -ಇಂಪ್ಲಾಮೇಟರಿ ಗುಣಲಕ್ಷಣಗಳಿದ್ದು, ಇದು ನಮ್ಮ ಹಲ್ಲು ನೋವು ಮತ್ತು ಹುಳುಕು ಹಲ್ಲಿನ ಸಮಸ್ಯೆಯನ್ನ ಬುಡದಿಂದಲೇ ನಿವಾರಿಸುತ್ತದೆ.
ಬೆಳ್ಳುಳ್ಳಿ ನ್ಯಾಚುರಲ್ ಪೇನ್ ಕಿಲ್ಲರ್ ಆಗಿ ಕೆಲಸ ಮಾಡುತ್ತದೆ. ನಮ್ಮ ಬಾಯಿ ಮತ್ತು ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ಇದು ನಿವಾರಣೆ ಮಾಡುತ್ತದೆ. ಸಿಪ್ಪೆ ತೆಗೆದ ಬೆಳ್ಳುಳ್ಳಿ ಎಸಳುಗಳನ್ನ ಚೆನ್ನಾಗಿ ತುರಿದುಕೊಳ್ಳಬೇಕು ಅಥವಾ ಪೇಸ್ಟ್ ಮಾಡಿಕೊಳ್ಳಬೇಕು. ಇದಕ್ಕೆ ಅರಿಶಿಣವನ್ನ ಸೇರಿಸಿಕೊಳ್ಳಬೇಕು. ಅರಿಶಿಣದಲ್ಲಿಯೂ ಆಂಟಿ -ಬ್ಯಾಕ್ಟೀರಿಯಲ್ ಗುಣಗಳಿದ್ದು, ಇದು ಸಹ ಕೀಟಾನುಗಳನ್ನ ನಾಶಪಡಿಸುತ್ತದೆ. ಇದೂ ಸಹ ನ್ಯಾಚುರಲ್ ಪೇನ್ ಕಿಲ್ಲರ್ ಆಗಿ ಕೆಲಸ ಮಾಡುತ್ತದೆ. ಇದರಿಂದಲೂ ಹಲ್ಲು ನೋವು ಮತ್ತು ಹುಳುಕು ಹಲ್ಲಿನ ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗುತ್ತದೆ.
ಈಗ ಈ ಬೆಳ್ಳುಳ್ಳಿ ಮತ್ತು ಅರಿಶಿಣವನ್ನ ಹಲ್ಲು ನೋವಿಗೆ ಹೇಗೆ ಬಳಸುವುದು ಎಂದು ತಿಳಿಯೋಣ. ಚೆನ್ನಾಗಿ ತುರಿದುಕೊಂಡಿರುವ ಅಥವಾ ಬೆಳ್ಳುಳ್ಳಿ ಪೇಸ್ಟ್ಗೆ ಅರಿಶಿಣವನ್ನ ಮಿಕ್ಸ್ ಮಾಡಿ. ಒಂಚೂರು ಹತ್ತಿ ತೆಗೆದುಕೊಂಡು ಅದರಲ್ಲಿ ಇವೆರಡರ ಮಿಶ್ರಣವನ್ನ ಹಾಕಬೇಕು. ನಿಮಗೆ ಎಲ್ಲಿ ಹಲ್ಲು ನೋವು ಅಥವಾ ಹಲ್ಲು ಹುಳುಕು ಇದೆಯೋ ಅಲ್ಲಿ ಇಟ್ಟುಕೊಳ್ಳಬೇಕು. ಕೆಲವು ನಿಮಿಷಗಳ ಕಾಲ ಇದನ್ನ ಇಟ್ಟುಕೊಂಡರೆ ನಿಮ್ಮ ಹಲ್ಲು ನೋವು ಮತ್ತು ಹುಳುಕು ಹಲ್ಲಿನ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.