ಕುಂಬಳಕಾಯಿಯನ್ನು ಕೆಲವು ಮಂದಿ ಮಾತ್ರ ತಿನ್ನುತ್ತಾರೆ. ಇನ್ನೂ ಕೆಲವರು ಕುಂಬಳಕಾಯಿಯನ್ನು ಕಂಡರೆ ಮುಖ ಮುರಿಯುತ್ತಾರೆ. ಆದರೆ ಕುಂಬಳಕಾಯಿ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಯಾವುದು ಎಂದು ತಿಳಿದರೆ ಪ್ರತಿದಿನ ಕುಂಬಳಕಾಯಿಯನ್ನು ತಿನ್ನಲು ಆರಂಭಿಸುತ್ತೀರಿ. ಅಷ್ಟೇ ಅಲ್ಲದೇ ಇದು ಎಲ್ಲಾ ರೀತಿಯ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. WebMD ಪ್ರಕಾರ ಕುಂಬಳಕಾಯಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಜು.6 ರಂದು ನೇರಳೆ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ!
ಕುಂಬಳಕಾಯಿ ಹ್ಯಾಲೋವೀನ್ ಮತ್ತು ಥ್ಯಾಂಕ್ಸ್ಗಿವಿಂಗ್ನಿಂದ ಕೂಡಿದ ತರಕಾರಿ. ಇದು ಹೆಚ್ಚಿನ ಪೌಷ್ಟಿಕಾಂಶ ಹೊಂದಿದ್ದು ಆರೋಗ್ಯಕ್ಕೆ ಅನೇಕ ಉಪಯುಕ್ತತೆಯನ್ನು ನೀಡುತ್ತದೆ. ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳುವುದಕ್ಕೆ ಕೆಲವು ಕಾರಣಗಳಿವೆ. ಹೀಗಾಗಿಯೇ ಪ್ರತಿ ಮನೆಯಲ್ಲೂ ಈ ಕುಂಬಳಕಾಯಿ ಸ್ಥಾನ ಪಡೆದಿದೆ.
ಕುಂಬಳಕಾಯಿ ತಿನ್ನೋದರಿಂದ ಆರೋಗ್ಯ ಲಾಭವೇನು?
ಕುಂಬಳಕಾಯಿಯಲ್ಲಿ ಅಧಿಕ ಮಟ್ಟದಲ್ಲಿ ವಿಟಮಿನ್ ಎ, ಇ, ಸಿ ಮತ್ತು ಕಬ್ಬಿಣದ ಅಂಶಗಳಿವೆ.
ಹೀಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ದೇಹದಲ್ಲಿ ಸೋಂಕುಗಳು ಹರಡುವುದನ್ನು ತಡೆಯುತ್ತದೆ.
ತರಕಾರಿಯ ಒಂದು ವಿಧವಾದ ಕುಂಬಳಕಾಯಿಯಲ್ಲಿ ಫೈಬರ್ ಇರುತ್ತದೆ. ಇದರಿಂದ ನಾವು ತಿಂದ ಆಹಾರ ಬೇಗ ಜೀರ್ಣಗೊಳ್ಳುವಂತೆ ಮಾಡುತ್ತದೆ. ಹೀಗಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಸಹಾಯವಾಗುತ್ತದೆ.
ವಿಟಮಿನ್- ಎ ಅಂಶ ಹೊಂದಿದ್ದರಿಂದ ಕಣ್ಣಿಗೆ ಹೆಚ್ಚು ಉಪಕಾರಿಯಾಗಿದೆ. ಇದನ್ನು ಆಹಾರದಲ್ಲಿ ಸೇವಿಸುವುದರಿಂದ ಕಣ್ಣಿನಪೊರೆ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಅನ್ನು ತಡೆದು ದೃಷ್ಟಿ ಬರುವಂತೆ ಮಾಡುತ್ತದೆ.
ತೂಕವನ್ನು ಕಳೆದುಕೊಳ್ಳಲು ಕುಂಬಳಕಾಯಿ ಸಹಾಯ ಮಾಡುತ್ತದೆ. ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದೇ ದೇಹವನ್ನು ದಪ್ಪ ಆಗದಂತೆ ತಡೆಯುತ್ತದೆ.
ಕೊಲೆಸ್ಟ್ರಾಲ್ನಿಂದ ಕೆಲವೊಮ್ಮೆ ಹೃದಯಾಘಾತ ಆಗುವ ಸಂಭವವಿರುತ್ತದೆ. ನಾವು ಆಹಾರದಲ್ಲಿ ಕುಂಬಳಕಾಯಿಯನ್ನು ತಿನ್ನುವುದರಿಂದ ಫೈಬರ್ ಅಂಶವು ಕೊಲೆಸ್ಟ್ರಾಲ್ ಹೋಗಲಾಡಿಸಿ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ.
ಮಧುಮೇಹಿಗಳಿಗೆ ಉತ್ತಮ ಆಹಾರವಾಗಿರುವ ಕುಂಬಳಕಾಯಿ, ಮೇದೊಜೀರಕ ಗ್ರಂಥಿಯ ಕೋಶಗಳ ಪುನರುತ್ಪಾದನೆ ಹೆಚ್ಚಿಸುತ್ತವೆ. ಇದು ಮಧುಮೇಹಿಗಳಲ್ಲಿ ಮಾತ್ರವಲ್ಲದೆ ಸಕ್ಕರೆ ಕಾಯಿಲೆ ಬರುತ್ತಿದ್ರೆ, ಅಥವಾ ಕಾಯಿಲೆ ಹೆಚ್ಚಾಗಿದ್ದರೆ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುವ ಸಾಮರ್ಥ್ಯ ಕುಂಬಳಕಾಯಿ ಹೊಂದಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಕುಂಬಳಕಾಯಿ ಜೊತೆಗೆ ಇದರ ಬೀಜಗಳು ಕೂಡ ಆರೋಗ್ಯಕ್ಕೆ ಒಳ್ಳೆಯದು. ಈ ಬೀಜಗಳು ಅಧಿಕ ರಕ್ತದೊತ್ತಡ, ಕ್ಯಾನ್ಸರ್ ರೋಗಗಳನ್ನು ನಿಯಂತ್ರಣ ಮಾಡುತ್ತವೆ. ದೈಹಿಕ ಸಮಸ್ಯೆ ಇರುವವರು ಬೀಜಗಳ ಸೇವನೆ ತಪ್ಪಿಸಬೇಕು. ಆದ್ರೆ ಬೀಜಗಳನ್ನು ಹೇಗೆ ಸೇವಿಸಬೇಕು ಅಂತಾ ವೈದ್ಯರ ಸಲಹೆ ಪಡೆಯಲೇಬೇಕು.
ಚರ್ಮ ಮತ್ತು ಕೂದಲಿಗೆ ವಿಟಮಿನ್- ಇ ಸೇವನೆ ಅತ್ಯಂತ ಅಗತ್ಯವಾಗಿದೆ. ಫೈಬರ್ ಅಂಶ ಹೊಟ್ಟೆಯ ಜೀರ್ಣಕ್ರಿಯೆ ವ್ಯವಸ್ಥೆ ಆರೋಗ್ಯಕರವಾಗಿ ಉಳಿಸುತ್ತದೆ. ಈ ಕಾರಣದಿಂದ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ.
ಕುಂಬಳಕಾಯಿಯಲ್ಲಿ ಕಾರ್ಬೋಹೈಡ್ರೇಟ್ಸ್, ಕ್ಯಾಲ್ಸಿಯಂ, ಪೊಟ್ಯಾಷಿಯಮ್, ಮೆಗ್ನೀಷಿಯಮ್, ನಿಯಾಸಿನ್, ರಿಬೋಫ್ಲಾವಿನ್, ಸತು, ಫೋಲೇಟ್ ಇತ್ಯಾದಿ ಅಂಶಗಳು ಹೇರಳವಾಗಿವೆ.
ಸೌತೆಕಾಯಿಯಲ್ಲಿರುವಂತೆ ಕುಂಬಳಕಾಯಿಯಲ್ಲೂ ನೀರಿನಾಂಶ ಸಮೃದ್ಧವಾಗಿದೆ. ಶೇಕಡಾ 90 ರಷ್ಟು ನೀರು ಈ ತರಕಾರಿಯಲ್ಲಿ ಇರುತ್ತದೆ.
ಹೀಗಾಗಿ ಇದನ್ನು ಸೇವನೆ ಮಾಡುವುದರಿಂದ ನೀವು ರಿಫ್ರೆಶ್ ಕೂಡ ಆಗಬಹುದು.
ಕುಂಬಳಕಾಯಿಯಿಂದ ಭಾರತದಲ್ಲಿ ಹಲವಾರು ರುಚಿಕರವಾದ ಉಪಹಾರಗಳನ್ನು ತಯಾರಿಸಲಾಗುತ್ತದೆ. ವಾರದಲ್ಲಿ ಒಮ್ಮೆಯಾದರೂ ಈ ಪದಾರ್ಥವನ್ನು ಮನೆಯಲ್ಲಿ ಉಪಯೋಗಿಸುತ್ತಾರೆ. ದೇಶದಲ್ಲಿ ಗುದ್ದಲಿ ಪೂಜೆ, ದೃಷ್ಟಿ ತೆಗೆಯಲು, ಗೃಹ ಪ್ರವೇಶದಂತಹ ಸಮಾರಂಭಗಳಲ್ಲಿ ಕುಂಬಳಕಾಯಿಯನ್ನು ಒಡೆದು ಶುಭ ಆಗಲೆಂದು ಕೇಳಿಕೊಳ್ಳುವುದು ರೂಢಿಯಲ್ಲಿದೆ.