ನೈಸರ್ಗಿಕ ಔಷಧದಲ್ಲಿ ಪ್ರಮುಖ ಪಾತ್ರ ವಹಿಸುವ ಅನೇಕ ಔಷಧೀಯ ಮರಗಳು ಮತ್ತು ಸಸ್ಯಗಳು ನಮ್ಮ ಸುತ್ತಲೂ ಕಂಡು ಬರುತ್ತವೆ. ಈ ಸಸ್ಯಗಳು ನಮ್ಮ ದೇಹದ ವಿವಿಧ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಜೊತೆಗೆ ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ವೀಳ್ಯದೆಲೆ ಕೂಡ ಅಂತಹದರಲ್ಲಿ ಒಂದು.
ನಿಮ್ಮ ಅಪ್ಪ ದೊಡ್ಡ-ದೊಡ್ಡ ನಾಯಕರನ್ನ ಬಲಿ ಕೊಟ್ಟು ನಿನ್ನ ಮಂತ್ರಿ ಮಾಡಿದ್ದಾರೆ: ಪ್ರತಾಪ್ ಸಿಂಹ ವಾಗ್ದಾಳಿ!
ಈ ಪ್ರಮುಖ ಔಷಧೀಯ ಮರಗಳಲ್ಲಿ ಒಂದು ವೀಳ್ಯದೆಲೆ. ವೀಳ್ಯದೆಲೆ ಮತ್ತು ಬೇರನ್ನು ವಿವಿಧ ಆರೋಗ್ಯ ಪ್ರಯೋಜನಗಳಿಗಾಗಿ ಬಳಸಲಾಗುತ್ತದೆ. ಅದರ ಔಷಧೀಯ ಗುಣಗಳಿಂದಾಗಿ ಇದು ಸಾಂಪ್ರದಾಯಿಕ ಔಷಧದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಆಯುರ್ವೇದದಲ್ಲಿ ವೀಳ್ಯದೆಲೆಯ ಪಾತ್ರ ಮಹತ್ವದ್ದು. ಸಣ್ಣ ಗಾಯಗಳಿಗೆ ಬ್ಯಾಂಡೇಜ್ ಬದಲಿಗೆ ಕೈಗೆಟುಕುವ ವೀಳ್ಯದೆಲೆಯು ತುಂಬಾ ಉಪಯುಕ್ತವಾಗಿದೆ. ಇದು ನೋವು ಮತ್ತು ಗಾಯ ಎರಡನ್ನೂ ನಿವಾರಿಸುತ್ತದೆ.
ನಿಸರ್ಗದಿಂದ ಸಿಗುವ ಯಾವುದೇ ವಸ್ತುವಾದರೂ ಅಷ್ಟೇ. ತುಂಬಾ ಆರೋಗ್ಯಕರ. ನಿಸರ್ಗದ ಮಡಿಲಿನಿಂದ ಸಿಗುವ ಪ್ರತಿಯೊಂದು ಆಹಾರ ಕೂಡ ನಮಗೆ ಉತ್ತಮ ಆರೋಗ್ಯವನ್ನು ದಯಪಾಲಿಸುತ್ತದೆ. ಯಾವುದೇ ತರಹದ ಅಡ್ಡ ಪರಿಣಾಮಗಳು ಎದುರಾಗುವುದಿಲ್ಲ. ಒಂದು ವೇಳೆ ಆದರೂ ತುಂಬಾ ಕಡಿಮೆ. ಊಟ ಆದ ತಕ್ಷಣ ಪ್ರತಿಯೊಬ್ಬರೂ ಎಲೆ ಅಡಿಕೆ ಹಾಕಿಕೊಳ್ಳಬೇಕು ಎಂದು ಹೇಳುತ್ತಾರೆ.
ಏಕೆಂದರೆ ಇದು ನಾವು ಸೇವಿಸಿದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡುತ್ತದೆ ಎಂದು. ನಮ್ಮ ಜೀರ್ಣಶಕ್ತಿ ಹೆಚ್ಚಿಸಿ ಅಜೀರ್ಣತೆಯನ್ನು ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಗಳನ್ನು ದೂರ ಮಾಡುವಲ್ಲಿ ವೀಳ್ಯದೆಲೆ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ಯಾರು ಸೇವನೆ ಮಾಡುತ್ತಾರೆ ಅವರಿಗೆ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಈ ಕೆಳಗಿನ ತರಹ ಆರೋಗ್ಯ ಲಾಭಗಳನ್ನು ವೀಳ್ಯದ ಎಲೆಗಳಿಂದ ನಿರೀಕ್ಷೆ ಮಾಡಬಹುದು.
ಬೆಳಗ್ಗೆ ತಿಂಡಿ ತಿನ್ನುವ ಅಥವಾ ಊಟ ಮಾಡುವ ಮುಂಚೆ ಒಂದು ವೀಳ್ಯದೆಲೆ ತಿಂದರೆ ಸಾಕು. ನೀವು ಯಾವುದೇ ಆಹಾರ ಸೇವನೆ ಮಾಡಿದರೂ ಅದನ್ನು ಚೆನ್ನಾಗಿ ಜೀರ್ಣ ಮಾಡುತ್ತದೆ. ಅಜೀರ್ಣತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಹೊಟ್ಟೆಗೆ ಸಂಬಂಧಪಟ್ಟ ಇನ್ನಿತರ ಯಾವುದೇ ತೊಂದರೆಗಳಿದ್ದರೂ ಅದನ್ನು ಸರಿಪಡಿಸುತ್ತದೆ.
ಇನ್ನು ತಜ್ಞರು ಹೇಳುವ ಪ್ರಕಾರ, ಈ ಎಲೆಗಳನ್ನು ಜಗಿದು ಅದರ ರಸವನ್ನು ನಿಧಾನಕ್ಕೆ ಹೀರುತ್ತಾ ಬಂದರೆ ಹೊಟ್ಟೆಯ ಭಾಗದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಜೀರ್ಣರಸಗಳು ಉತ್ಪತ್ತಿಯಾಗುತ್ತವೆ, ಅಷ್ಟೇ ಅಲ್ಲದೆ ಹೊಟ್ಟೆಯ ಉಬ್ಬರವನ್ನು ಮತ್ತು ಉರಿಯೂತವನ್ನು ಕಡಿಮೆ ಮಾಡಿ ಕರುಳಿನ ಭಾಗದಲ್ಲಿ ಕಂಡುಬರುವ ಪರಾವಲಂಬಿ ಜೀವಿಗಳನ್ನು ನಿಯಂತ್ರಣ ಮಾಡಿ ಸುಲಭವಾಗಿ ಹೊಟ್ಟೆಯ ಆಮ್ಲೀಯತೆಗೆ ಮತ್ತು ಮಲಬದ್ಧತೆ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ.
ವೀಳ್ಯದ ಎಲೆಗಳು ಮುಖ್ಯವಾಗಿ ನಮ್ಮ ದೇಹದಿಂದ ವಿಷಕಾರಿ ಅಂಶ ಗಳನ್ನು ಮತ್ತು ಬೇಡದ ತ್ಯಾಜ್ಯಗಳನ್ನು ತೆಗೆದುಹಾಕುವಲ್ಲಿ ಕೆಲಸ ಮಾಡುತ್ತದೆ. ಇದರಿಂದ ನಮ್ಮ ದೇಹ ಆಂತರಿಕವಾಗಿ ತನ್ನಂತಾನೆ ಸ್ವಚ್ಛವಾಗುತ್ತದೆ. ದೇಹಕ್ಕೆ ಒಳ್ಳೆಯ ಶಕ್ತಿ, ಚೈತನ್ಯ ಸಿಗುತ್ತದೆ. ಇದು ಕಾಯಿಲೆಗಳು ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ವೀಳ್ಯದ ಎಲೆಯಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವಿದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ನಮಗೆ ಕಾಡುವ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಇದು ದೂರ ಮಾಡುತ್ತದೆ. ಆರೋಗ್ಯಕರವಾದ ಜೀರ್ಣ ಶಕ್ತಿಯ ಜೊತೆಗೆ ನಮ್ಮ ದೈಹಿಕ ಆರೋಗ್ಯದ ರಕ್ಷಣೆ ಕೂಡ ಮಾಡುತ್ತದೆ.