Close Menu
Ain Live News
    Facebook X (Twitter) Instagram YouTube
    Tuesday, July 1
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ತಿನ್ನುವುದರಿಂದ ಸಿಗುವ ಬೆನಿಫಿಟ್ ಎಷ್ಟು ಗೊತ್ತಾ!?

    By AIN AuthorApril 8, 2025
    Share
    Facebook Twitter LinkedIn Pinterest Email
    Demo

    ತುಪ್ಪದಲ್ಲಿ ನಮಗೆ ಪ್ರತಿದಿನ ಅವಶ್ಯಕವಾಗಿ ಬೇಕಾದ ಪೌಷ್ಟಿಕಾಂಶಗಳು, ಆಂಟಿ ಆಕ್ಸಿಡೆಂಟ್ ಅಂಶಗಳು, ಕೊಬ್ಬಿನ ಅಂಶಗಳು, ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ಹೇರಳವಾಗಿ ಸಿಗುತ್ತವೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುವಲ್ಲಿ ಇವುಗಳು ಕೆಲಸ ಮಾಡುತ್ತವೆ ಮತ್ತು ಆಯುರ್ವೇದ ಚಿಕಿತ್ಸೆಗಳಿಗೆ ಹೋಲಿಸಿದರೆ ಸಾಕಷ್ಟು ಉತ್ತಮ ಎನಿಸುತ್ತದೆ.

    ಶಾರುಖ್ ಖಾನ್ ಮಗಳಿಗೆ ಮಮ್ಮಿಯಾಗ್ತಿರುವ ದೀಪಿಕಾ ಪಡುಕೋಣೆ!

    ತುಪ್ಪದಲ್ಲಿ ನಮಗೆ ಪ್ರತಿದಿನ ಅವಶ್ಯಕವಾಗಿ ಬೇಕಾದ ಪೌಷ್ಟಿಕಾಂಶಗಳು, ಆಂಟಿ ಆಕ್ಸಿಡೆಂಟ್ ಅಂಶಗಳು, ಕೊಬ್ಬಿನ ಅಂಶಗಳು, ವಿಟಮಿನ್ ಅಂಶಗಳು ಮತ್ತು ಖನಿ ಜಾಂಶಗಳು ಹೇರಳವಾಗಿ ಸಿಗುತ್ತವೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುವಲ್ಲಿ ಇವುಗಳು ಕೆಲಸ ಮಾಡುತ್ತವೆ ಮತ್ತು ಆಯುರ್ವೇದ ಚಿಕಿತ್ಸೆಗಳಿಗೆ ಹೋಲಿಸಿದರೆ ಸಾಕಷ್ಟು ಉತ್ತಮ ಎನಿಸುತ್ತದೆ.

    ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆಗೆ ತುಪ್ಪ ಸೇವಿಸಲಾಗುತ್ತದೆ ಮತ್ತು ಅನೇಕ ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಲು ಸಹ ತುಪ್ಪ ಬಳಸು ತ್ತಾರೆ. ಸಂಶೋಧಕರು ಹೇಳುವಂತೆ ಬೆಳಗಿನ ಸಮಯದ ಖಾಲಿ ಹೊಟ್ಟೆಯಲ್ಲಿ ಯಾರು ಒಂದು ಟೇಬಲ್ ಚಮಚ ತುಪ್ಪವನ್ನು ಸೇವಿಸುತ್ತಾರೆ ಅವರಿಗೆ ಈ ಕೆಳಗಿನ ಆರೋಗ್ಯ ಲಾಭಗಳು ಸಿಗುತ್ತವೆ.

    ಇದು ನಿಜ, ಏಕೆಂದರೆ ತುಪ್ಪದಲ್ಲಿ ಕ್ಯಾಲ್ಸಿಯಂ, ಆರೋಗ್ಯಕರ ಕೊಬ್ಬಿನ ಅಂಶಗಳು, ಒಮೆಗಾ 3 ಫ್ಯಾಟಿ ಆಮ್ಲಗಳು, ಜೊತೆಗೆ ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಪ್ರಮಾಣ ಇರುತ್ತದೆ.
    ಹಾಗಾಗಿ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆ ಮಾಡಿದರೆ ಇವೆಲ್ಲವೂ ನಮಗೆ ಸಿಗುವುದರ ಜೊತೆಗೆ ನಮ್ಮ ದೇಹಕ್ಕೆ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಚರ್ಮ ಒಣಗುವುದಿಲ್ಲ ಮತ್ತು ಚರ್ಮದ ಮೇಲಿನ ಸುಕ್ಕುಗಳು, ಕಲೆಗಳು ಹಾಗೂ ಮೊಡವೆ ಗುಳ್ಳೆಗಳು ನಿವಾರಣೆ ಯಾಗುತ್ತವೆ.

    ತುಪ್ಪವನ್ನು ಹಲವಾರು ವರ್ಷಗಳಿಂದ ಬಳಸುತ್ತಾ ಬಂದಿರುವು ದರಿಂದ ಇದೊಂದು ಔಷಧಿಯಾಗಿ ಕೆಲಸ ಮಾಡುತ್ತದೆ ಎನ್ನುವು ದರಲ್ಲಿ ಯಾವುದೇ ಅನುಮಾನವಿಲ್ಲ.
    ಎದೆ, ಗಂಟಲು ಹಾಗೂ ಮೂಗಿಗೆ ಸಂಬಂಧಪಟ್ಟ ಸೋಂಕುಗಳು ನಿವಾರಣೆಯಾಗುತ್ತವೆ. ಖಾಲಿ ಹೊಟ್ಟೆ ಯಲ್ಲಿ ತುಪ್ಪ ಸೇವನೆ ಮಾಡುವುದರಿಂದ ಶೀತದ ವಾತಾವರಣ ದಿಂದ ಕಂಡುಬರುವ ಜ್ವರ, ಚಳಿ ಮಾಯವಾಗುತ್ತದೆ.

    ತುಪ್ಪ ಕೇವಲ ನಮ್ಮ ದೇಹಕ್ಕೆ ಮಾತ್ರವಲ್ಲದೆ ಮೆದುಳಿನ ಆರೋಗ್ಯಕ್ಕೂ ಕೂಡ ಪ್ರಯೋಜನ ಸಿಗುವಂತೆ ಮಾಡುತ್ತದೆ. ತುಪ್ಪದಲ್ಲಿ ಸಿಗುವ ಪೌಷ್ಟಿಕಾಂಶಗಳು ನಮ್ಮ ನರಮಂಡಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಾಪಾಡುವುದು ಮಾತ್ರವಲ್ಲದೆ ಮೆದುಳಿನ ಜೀವಕೋಶಗಳು ತಮ್ಮ ಕಾರ್ಯ ಚಟುವಟಿಕೆಯನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
    ನಮ್ಮ ಮೆದುಳಿಗೆ ಅವಶ್ಯಕ ಎನಿಸಿದ ಪೌಷ್ಟಿಕಾಂಶ ತುಪ್ಪದಲ್ಲಿ ಸಿಗುತ್ತದೆ. ಇದರಿಂದ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಮತ್ತು ತುಪ್ಪದಲ್ಲಿರುವ ವಿಟಮಿನ್ ಇ ಖಾಲಿ ಹೊಟ್ಟೆಯಲ್ಲಿ ನಮ್ಮ ಮೆದುಳನ್ನು ಹಲವಾರು ಕಾಯಿಲೆಗಳಿಂದ ರಕ್ಷಿಸುತ್ತದೆ.​

    ಮೂಳೆಗಳಿಗೆ ಸಂಬಂಧಪಟ್ಟಂತೆ ಯಾರು ಈಗಾಗಲೇ ಆರ್ಥ್ರೈಟಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅವರಿಗೆ ತುಪ್ಪ ರಾಮಬಾಣವಾಗಿ ಕೆಲಸ ಮಾಡುತ್ತದೆ.
    ಇದರಲ್ಲಿರುವ ಒಮೆಗಾ 3 ಫ್ಯಾಟಿ ಆಮ್ಲಗಳು ಮೂಳೆಗಳ ಸಮಸ್ಯೆ ಗಳನ್ನು ನಿವಾರಣೆ ಮಾಡುವುದು ಮಾತ್ರವಲ್ಲದೆ, ಮಹಿಳೆಯರಿಗೆ ಕ್ಯಾಲ್ಸಿಯಂ ಕೊರತೆ ಆಗದಂತೆ ನೋಡಿಕೊಳ್ಳುತ್ತದೆ.
    ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವನೆ ಮಾಡುವುದರಿಂದ ಮೂಳೆಗಳಿಗೆ ಬಲ ಸಿಗುವುದು ಮಾತ್ರವಲ್ಲದೆ ತೂಕ ನಿವಾರಣೆಯಲ್ಲಿ ಸಹಾಯವಾಗುತ್ತದೆ.

    ವಿವಿಧ ಬಗೆಯ ಪ್ರಯೋಜನಗಳನ್ನು ಹೊಂದಿರುವ ತುಪ್ಪ ತಲೆಕೂ ದಲಿನ ಆರೋಗ್ಯಕ್ಕೂ ಉತ್ತಮವಾಗಿ ಕೆಲಸ ಮಾಡ ಬಲ್ಲದು.
    ತಲೆ ಕೂದಲಿನ ಕಿರುಚೀಲಗಳನ್ನು ಆರೋಗ್ಯಕರವಾಗಿ ಕಾಪಾಡು ವುದರ ಜೊತೆಗೆ ಬೇರುಗಳಿಗೆ ಬಲವನ್ನು ನೀಡಿ ತಲೆ ಹೊಟ್ಟು ಕಂಡು ಬರದಂತೆ ನೋಡಿಕೊಳ್ಳುತ್ತದೆ.​

    ನಿಯಮಿತವಾಗಿ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆ ಮಾಡುವ ಅಭ್ಯಾಸ ಇದ್ದವರಿಗೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾ ಗುತ್ತದೆ ಮತ್ತು ವಿಷಕಾರಿ ಅಂಶಗಳಿಂದ ದೇಹ ಮುಕ್ತವಾಗುತ್ತದೆ.
    ಏಕೆಂದರೆ ತುಪ್ಪದಲ್ಲಿ ಈ ನಿಟ್ಟಿನಲ್ಲಿ ಸಹಾಯ ಮಾಡುವ ಆಂಟಿ ಆಕ್ಸಿಡೆಂಟ್ ಅಂಶಗಳು ಜಾಸ್ತಿ ಕಂಡು ಬರುತ್ತದೆ. ತುಪ್ಪದಲ್ಲಿ ನಮ್ಮ ಕರುಳಿನ ಆರೋಗ್ಯವನ್ನು ಉತ್ತೇಜಿಸುವ ಗುಣ ಕೂಡ ಹೆಚ್ಚಾಗಿ ಕಾಣಿಸುತ್ತದೆ.​

    ನಮ್ಮ ದೇಹ ಒಂದು ವೇಳೆ ಉಷ್ಣ ಪ್ರಭಾವಕ್ಕೆ ಒಳಗಾದರೆ ನಮ್ಮ ಕಣ್ಣು ಗಳು ಕೆಂಪಾಗುತ್ತವೆ ಮತ್ತು ಒಣಗುತ್ತವೆ. ಆದರೆ ನಿಯಮಿತವಾಗಿ ತುಪ್ಪ ತಿನ್ನುವುದರಿಂದ ಅದರಲ್ಲಿರುವ ಒಮೇಗಾ 3 ಫ್ಯಾಟಿ ಆಮ್ಲಗಳು ಕಣ್ಣುಗಳ ದೃಷ್ಟಿಗೆ ಸಂಬಂಧಪಟ್ಟಂತೆ ಇರುವ ಅನೇಕ ಸಮಸ್ಯೆಗಳನ್ನು ಹೋಗ ಲಾಡಿಸುತ್ತವೆ.

    ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ಟೀ ಚಮಚ ತುಪ್ಪ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ರಕ್ತನಾಳಗಳ ಕಾರ್ಯ ಚಟುವಟಿಕೆ ಹೆಚ್ಚಾಗುತ್ತದೆ ಮತ್ತು ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಆರೋಗ್ಯಕ್ಕೆ ಹಾನಿಕರವಾಗಿರುವ ಅಂಶಗಳಿಂದ ರಕ್ಷಣೆ ಸಿಗುತ್ತದೆ.

    ನಮ್ಮ ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೋಗಲಾಡಿ ಸುವಲ್ಲಿ ತುಪ್ಪ ನಿಯಮಿತವಾಗಿ ಕೆಲಸ ಮಾಡುತ್ತದೆ.
    ಆರೋಗ್ಯಕರವಾದ ಕೊಲೆಸ್ಟ್ರಾಲ್ ಪ್ರಮಾಣವನ್ನು ಉತ್ತೇಜಿಸು ವುದರ ಜೊತೆಗೆ ಹೊಟ್ಟೆ ಆರೋಗ್ಯವನ್ನು ಕಾಪಾಡುತ್ತದೆ.
    ಪ್ರತಿದಿನ ತುಪ್ಪ ಸೇವನೆ ಮಾಡುವ ವರಿಗೆ ಕೆಟ್ಟ ಕೊಲೆಸ್ಟ್ರಾಲ್ ಸಾಕಷ್ಟು ಕಡಿಮೆಯಾಗುತ್ತದೆ ಮತ್ತು ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ.​

    ಉಗುರು ಬೆಚ್ಚಗಿನ ನೀರಿನಲ್ಲಿ ತುಪ್ಪ ಬೆರೆಸಿ ಸೇವನೆ ಮಾಡುವುದರಿಂದ ಮಲಬದ್ಧತೆ, ಹೊಟ್ಟೆ ಉಬ್ಬರ ಮತ್ತು ಹೊಟ್ಟೆ ನೋವು ದೂರವಾಗುತ್ತದೆ. ಇದರಿಂದ ಮೆಟಬಾಲಿಸಂ ಹೆಚ್ಚಾಗಿ ಸಣ್ಣ ಕರುಳಿನ ಭಾಗದಲ್ಲಿ ಪೌಷ್ಟಿ ಕಾಂಶಗಳು ಹೀರಿಕೊಳ್ಳುತ್ತವೆ.

    Demo
    Share. Facebook Twitter LinkedIn Email WhatsApp

    Related Posts

    ಸೊಂಟದವರೆಗೂ ಕೂದಲು ಬೆಳೆಯಬೇಕಾ? ಹಾಗಿದ್ರೆ ಈರುಳ್ಳಿ ರಸದ ಜೊತೆ ಇದನ್ನು ಬೆರಸಿ ಹಚ್ಚಿ!

    July 1, 2025

    ಸ್ಟ್ರಾಬೆರಿ ಹಣ್ಣನ್ನು ಡಯಾಬಿಟಿಸ್ ಇರುವವರು ತಿನ್ನಬಹುದಾ?

    July 1, 2025

    ನಿಮ್ಮದು ಬೋಳು ತಲೆಯೇ? ಹಾಗಿದ್ರೆ ಶುಂಠಿಯನ್ನು ಈ ರೀತಿ ಬಳಸಿ.. ಕೂದಲು ಬೆಳೆಯೋದು ಗ್ಯಾರಂಟಿ!

    July 1, 2025

    National Doctors Day.. ಇಂದು ರಾಷ್ಟ್ರೀಯ ವೈದ್ಯರ ದಿನ: ಈ ದಿನದ ಇತಿಹಾಸ, ಮಹತ್ವದ ಮಾಹಿತಿ ಇಲ್ಲಿದೆ

    July 1, 2025

    Heart Attack Symptoms: ಹೃದಯಾಘಾತಕ್ಕೂ ಮುನ್ನ ಈ ಲಕ್ಷಣಗಳು ಕಂಡು ಬರುತ್ತವೆ..! ನಿರ್ಲಕ್ಷಿಸಬೇಡಿ

    July 1, 2025

    Fish Benefits: ವಾರಕ್ಕೆ 2 ಬಾರಿ ಈ ಮೀನುಗಳನ್ನು ತಿಂದ್ರೆ ಕೂದಲು ಉದುರೋದಿಲ್ವಂತೆ!

    July 1, 2025

    ಅಡುಗೆ ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದ್ಯಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

    July 1, 2025

    ಹೈ ಬಿಪಿ ಕಡಿಮೆ ಆಗ್ಬೇಕಾ? ಹಾಗಿದ್ರೆ ಕೂಡಲೇ ಈ ಆಹಾರ ತಿನ್ನುವುದನ್ನ ತಕ್ಷಣವೇ ನಿಲ್ಲಿಸಿ!

    July 1, 2025

    ಗಂಡ ಹೆಂಡತಿ ನಡುವಿನ ಅಂತರ ಹೆಚ್ಚಿಸುತ್ತಿರುವ ಕಾರಣಗಳು ಇವೇ ನೋಡಿ..! ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ

    July 1, 2025

    Diabetes Control : ಮಧುಮೇಹಿಗಳ ಗಮನಕ್ಕೆ : ಈ 5 ವಿಷಯಗಳನ್ನು ನೀವು ನೆನಪಿನಲ್ಲಿಡಬೇಕು!

    June 30, 2025

    Heart Attack: ಹೃದಯಾಘಾತಕ್ಕೆ ಅಸಲಿ ಕಾರಣ..? ಮೊಬೈಲ್, ಜಂಕ್’ಫುಡ್ ಹೃದಯದ ವಿಲನ್..!

    June 30, 2025

    ಬೊಜ್ಜಿಗೆ ಮತ್ತೊಂದು ಹೊಸ ಮೆಡಿಸನ್.. ಒಂದೇ ಇಂಜೆಕ್ಷನ್’ನಿಂದ 100 ಕೆಜಿ ತೂಕ ಇಳಿಸಬಹುದು..! ಇದರ ಬೆಲೆ ಎಷ್ಟು?

    June 30, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.