ಅಮ್ಮ, ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ ? ಅಳುವ ಕಂದನ ಮುದ್ದು ಮುದ್ದಾದ ತೊದಲ ನುಡಿಯಿಂದ. ಈ “ಅಮ್ಮ” ಎನ್ನುವ ಎರಡಕ್ಷರವು ಎಲ್ಲಾ ನೋವನ್ನು ಮರೆಸುತ್ತದೆ. ಅಮ್ಮ ಜೊತೆಗಿದ್ದರೆ ಇದ್ದು ಬಿಟ್ಟರೆ ಜಗತ್ತನ್ನೇ ಜಯಿಸುವಷ್ಟು ಆನೆ ಬಲ ಬರುತ್ತದೆ. ಜೀವ ಕೊಟ್ಟ ದೇವತೆಯನ್ನು ಎಷ್ಟು ಹೊಗಳಿದರೂ ಕೂಡ ಕಡಿಮೆಯೇ. ಆದರೆ ವಿಶ್ವ ತಾಯಂದಿರ ದಿನದಂದು ಆಕೆಯ ತ್ಯಾಗ, ಪ್ರೀತಿ, ಕಾಳಜಿಯನ್ನು ನೆನಪಿಸಿ ಆಕೆಗೆ ಗೌರವವನ್ನು ಸೂಚಿಸುವುದು ನಮ್ಮ ಕರ್ತವ್ಯವಾಗಿದೆ.
ವಿಶ್ವ ತಾಯಂದಿರ ದಿನ ಯಾವಾಗ?
1914 ರಲ್ಲಿ, ಅಮೇರಿಕದ 28 ನೇ ಅಧ್ಯಕ್ಷ ವುಡ್ರೋ ವಿಲ್ಸನ್ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವೆಂದು ಗೊತ್ತುಪಡಿಸುವ ಘೋಷಣೆಗೆ ಸಹಿ ಹಾಕಿದರು. ಇದಾದ ಬಳಿಕ ದಿನವು ಅಮೇರಿಕದಲ್ಲಿ ಅಧಿಕೃತ ರಜಾದಿನವಾಯಿತು ಮತ್ತು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಸಿಂಗಾಪುರ ಮತ್ತು ಪ್ರಪಂಚದಾದ್ಯಂತ ವಿವಿಧ ಸಂಪ್ರದಾಯಗಳು ಮತ್ತು ಪದ್ಧತಿಗಳೊಂದಿಗೆ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸಿತು. ಈ ವರ್ಷ ಮೇ 11 ರಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.
ತಾಯಂದಿರ ದಿನ ಇತಿಹಾಸ:
ಪ್ರಾಚೀನ ಕಾಲದಲ್ಲಿ, ಗ್ರೀಕರು ಮತ್ತು ರೋಮನ್ನರು ಮಾತೃ ದೇವತೆಗಳಾದ ರಿಯಾ ಮತ್ತು ಸೈಬೆಲೆಯ ಗೌರವಾರ್ಥವಾಗಿ ಹಬ್ಬಗಳನ್ನು ನಡೆಸುತ್ತಿದ್ದರು. ಆದರೆ 20 ನೇ ಶತಮಾನದ ಆರಂಭದಲ್ಲಿ ತಾಯಂದಿರ ದಿನ 1908ರಲ್ಲಿ ಅಮೆರಿಕದಲ್ಲಿ ಶುರುವಾಗಿತ್ತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅನಾ ಜಾರ್ವಿಸ್ ಮದುವೆ ಆಗಿರಲಿಲ್ಲ. 1905ರಲ್ಲಿ ಅನಾ ತಾಯಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನ ಆಯ್ಕೆ ಮಾಡಿಕೊಂಡಿದ್ದರು. ಬಳಿಕ ಈ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು.
ತಾಯಂದಿರ ದಿನ ಮಹತ್ವ:
ವಿವಿಧ ದೇಶಗಳಲ್ಲಿ ವಿಭಿನ್ನ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳು ಚಾಲ್ತಿಯಲ್ಲಿದ್ದರೂ, ತಾಯಂದಿರ ದಿನದ ಆಚರಣೆಯ ಹಿಂದಿನ ಭಾವನೆ ಒಂದೇ ಆಗಿರುತ್ತದೆ – ನಮ್ಮ ತಾಯಿಯ ಬಗ್ಗೆ ನಮ್ಮ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನ, ಅವರ ಮಕ್ಕಳನ್ನು ಬೆಳೆಸಲು ಅವರ ದಣಿವರಿಯದ ಪ್ರಯತ್ನಗಳು, ನಿರಂತರ ಆರೈಕೆ ಮತ್ತು ಅವರ ಮಕ್ಕಳ ದೊಡ್ಡ ಬೆಂಬಲಿಗರಾಗಿ.
ಭಾರತದಲ್ಲಿ ತಾಯಂದಿರ ದಿನ:
ದೇಶದಲ್ಲಿ ತಾಯಂದಿರನ್ನು ಯಾವಾಗಲೂ ಗೌರವಿಸಲಾಗುತ್ತದೆ ಮತ್ತು ಜನರು ತಮ್ಮ ಅಮ್ಮಂದಿರಿಗೆ ತಮ್ಮ ಪ್ರೀತಿ ಮತ್ತು ಕೃತಜ್ಞತೆಯನ್ನು ತೋರಿಸುವ ಮತ್ತೊಂದು ದಿನವಾಗಿದೆ. ಮತ್ತು ಇದು ತಾಯಂದಿರು ಮಾತ್ರವಲ್ಲ , ಬದಲಾಗಿ ಅಜ್ಜಿ, ಚಿಕ್ಕಮ್ಮ ಮತ್ತು ಅತ್ತೆಯರಿಗೂ ಈ ದಿನ ಮೀಸಲು.