ವಿಜಯಪುರ: ಇತ್ತೀಚಿಗೆ ಗಂಡು ಮಕ್ಕಳಿಗೆ ಮದ್ವೆಗೆ ಹೆಣ್ಣು ಹುಡುಕೋದೇ ಕಷ್ಟವಾಗಿದೆ. ಹುಡ್ಗಿಗೆ ಹುಡುಕೋಕೆ ಒಂದಲ್ಲಾ ಒಂದು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ಇಲ್ಲೊಂದು ಯುವಕರ ತಂಡ ಹುಡ್ಗಿನ ಹುಡ್ಕೋಕೆ ಒಂದು ಜಬರ್ದಸ್ತ್ ಪ್ಲಾನ್ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿದ್ದು. ಜಾತ್ರೆಗಾಗಿ ಸಾವಿರಾರು ಜನ ಬಂದಿದ್ದಾರೆ. ಇದೇ ಒಳ್ಳೆ ಚಾನ್ಸ್ ಅಂದುಕೊಂಡ ಯುವಕರು ಜಾತ್ರೆಯ ಫ್ಲೆಕ್ಸ್ನಲ್ಲಿ ವಿಶೇಷ ಬೇಡಿಕೆ ಇಟ್ಟಿದ್ದಾರೆ. ಸದ್ಯ ಈ ಫೋಟೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.
LIC Policy: ಎಲ್ಐಸಿಯ ಬೆಸ್ಟ್ ಸ್ಕೀಮ್! ಜಸ್ಟ್ ದಿನಕ್ಕೆ 50 ರೂ.ಉಳಿಸಿದ್ರೆ, 6 ಲಕ್ಷ ನಿಮ್ಮದಾಗುತ್ತೆ!
20 ಜನ ಯುವಕರು ಬ್ರ್ಯಾಂಡ್ ಬಾಯ್ಸ್ ಹೆಸರಿನಲ್ಲಿ ಬ್ಯಾನರ್ ಹಾಕಿದ್ದಾರೆ. ಬ್ಯಾನರ್ನಲ್ಲಿ ತಮ್ಮೆಲ್ಲರ ಫೋಟೋಗಳನ್ನು ಹಾಕಿ, ಬ್ಯಾನರ್ ನೋಡಿ ಹಾಗೇ ಹೋಗಬೇಡಿ. ಎಲ್ಲರಿಗೂ ಹುಡುಗಿ ನೋಡಿ” ಎಂದು ಬರೆಸಿದ್ದಾರೆ. ಈ ಬ್ಯಾಚುಲರ್ ಬಾಯ್ಸ್ ಹಾಕಿರುವ ಬ್ಯಾನರ್ ಇದೀಗ ಜಾತ್ರೆಗೆ ಬಂದವರ ಗಮನ ಸೆಳೆಯುತ್ತಿದೆ. ಜೊತೆಗೆ ಫೋಟೋಗಳು ಕೂಡ ವೈರಲ್ ಆಗುತ್ತಿವೆ.