ಬೆಂಗಳೂರು: ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧನವಾಗಿದ್ದು, ಈ ಪ್ರಕರಣದಲ್ಲಿ ಈಗಾಗಲೇ ಡಿಆರ್‌ಐ, ಸಿಬಿಐ ತನಿಖೆ ನಡೆಸುತ್ತಿವೆ. ಇದರ ಮಧ್ಯ ಮತ್ತೊಂದು ಸ್ಫೋಟಕ ಮಾಹಿತಿ ಹೊರ ಬಂದಿದೆ.
ರನ್ಯಾ ರಾವ್ ಬಂಧನವಾದ ಬಳಿಕ ರನ್ಯಾ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದ್ದ ಡಿಆರ್‌ಐ ಹಲವು ರಹಸ್ಯಗಳನ್ನ ಪತ್ತೆಹಚ್ಚಿತ್ತು. ಇದೇ ವೇಳೆ ತರುಣ್ ಸಂಪರ್ಕದಲ್ಲಿರೋದು ಪತ್ತೆಯಾಗಿತ್ತು. ಕೂಡಲೇ ಲುಕ್‌ಔಟ್ ನೋಟಿಸ್ ಜಾರಿ ಮಾಡಿ ತರುಣ್‌ನನ್ನ ಡಿಆರ್‌ಐ ಹದರಾಬಾದ್‌ನಲ್ಲಿ ಬಂಧಿಸಿತ್ತು.
ಈ ಬಣ್ಣದ ಬೆಕ್ಕು ನಿಮ್ಮ ಮನೆಗೆ ಬಂದರೆ ಅದೃಷ್ಟ ಕೈಹಿಡಿಯುವ ಮುನ್ಸೂಚನೆಯಂತೆ..!
ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಬರೀ ದುಬೈ, ಭಾರತದ ಕಥೆಯಲ್ಲ. ಮೊದಲು ದಕ್ಷಿಣಾ ಅಫ್ರಿಕಾದಿಂದ ದುಬೈಗೆ ಚಿನ್ನ ಸಾಗಾಟ ಮಾಡುತ್ತಿದ್ದರಂತೆ. ನಂತರ ಅದನ್ನ ಜಿನೀವಾಗೆ ಸಾಗಿಸುವ ನೆಪದಲ್ಲಿ ಭಾರತಕ್ಕೆ ರವಾನೆ ಮಾಡುತ್ತಿದ್ದಂತೆ.
ಅಷ್ಟೇ ಅಲ್ಲ ದಕ್ಷಿಣ ಅಫ್ರಿಕಾಗೆ ಹೋಗಲು ಅಲ್ಲಿಯ ಗೃಹ ಮಂತ್ರಾಲಯದಿಂದಲೂ ಆರೋಪಿಗಳು ಅನುಮತಿ ಪಡೆದಿದ್ದರು. ದುಬೈನಲ್ಲಿ ಇವರು ಶುರು ಮಾಡಿದ್ದ ವೈರಾ ಡೈಮಂಡ್ ಕಂಪನಿಗೆ ಮೊದಲು ಚಿನ್ನ ಸಾಗಾಟ ಮಾಡಿದ್ದರಂತೆ. ನಂತರ ಅಲ್ಲಿಂದ ಇದನ್ನ ಭಾರತಕ್ಕೆ ತರುಣ್ ಅಮೇರಿಕ ಪಾಸ್ ಪೋರ್ಟ್ ಹಾಗೂ ರನ್ಯಾಗಿದ್ದ ಪ್ರೊಟೋಕಾಲ್ ಬಳಸಿ ರವಾನೆ ಮಾಡಿದ್ದರಂತೆ. ಎಂದು ಡಿಆರ್‌ಐ ತನ್ನ ವರದಿಯಲ್ಲಿ ತಿಳಿಸಿದೆ.