ಮಧ್ಯಪ್ರದೇಶ:- ಇತ್ತೀಚೆಗೆ ಹುಡುಗರಲ್ಲಿ ಸಿಂಗಲ್ಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಅವುಗಳ ಬಗ್ಗೆ ಹಾಡುಗಳು ಬಂದು ತುಂಬಾ ಫೇಮಸ್ ಕೂಡ ಆಗಿವೆ. ಇತ್ತೀಚೆಗೆ ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಎಂಬ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಸಿಂಗಲ್ಸ್ಗಳ ಹೃದಯದ ರಾಷ್ಟ್ರಗೀತೆಯೆನಿಸಿಕೊಂಡಿತ್ತು.
ನಿಮ್ಮ ಮನೆಯ ಈ ದಿಕ್ಕಿನಿಂದ ಕಪ್ಪು ಇರುವೆ ಬಂದ್ರೆ ಹಣದ ಮಳೆಯೇ ಹರಿದು ಬರುತ್ತಂತೆ!
ಬದುಕಲ್ಲಿ ವಿಶೇಷ ಅನುಭವ ನೀಡುವ ಪ್ರೀತಿ-ಪ್ರೇಮ ಒಂದೊಮ್ಮೆ ಮುರಿದು ಬಿದ್ದರೆ ಅದರ ಆಘಾತವೂ ಅಷ್ಟೇ ಭಯಂಕರವಾದದ್ದು. ಎಷ್ಟೋ ಕಾಲ ಪ್ರೀತಿಸಿ ಯಾವುದೋ ಕಾರಣಕ್ಕೆ ಸಂಬಂಧ ಮುರಿದುಕೊಂಡಾಗ ಆಗುವ ನೋವು ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು. ಅನೇಕ ಸಂದರ್ಭದಲ್ಲಿ ಇಂಥವರು ಮಾನಸಿಕ ಸಮತೋಲನ ಕಳೆದುಕೊಂಡಿರುವ ಉದಾಹರಣೆಗಳೂ ಸಾಕಷ್ಟಿವೆ.
ಆದರೆ ಒಂದು ಬ್ರೇಕಪ್ ಆಯ್ತು ಎಂದಾದರೆ ಜೀವನ ಅಷ್ಟಕ್ಕೇ ಮುಗಿಯೋದಿಲ್ಲ. ಬದುಕು ಮುಂದೆ ಹೋಗಲೇ ಬೇಕು. ಅದಕ್ಕೆ ಮನಸ್ಸನ್ನು ಗಟ್ಟಿ ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಪ್ರೀತಿ ಮುರಿದು ಬಿದ್ದಾಗ ಮನಸ್ಸನ್ನು ಹತೋಟಿಗೆ ತರುವುದು ಅಷ್ಟು ಸುಲಭದ ಮಾತಲ್ಲ. ಆದರೆ ಅದು ಅಸಾಧ್ಯದ ಕೆಲಸವೇನೂ ಅಲ್ಲ.
ಆದ್ರೆ ಇಲ್ಲೊಂದು ಪ್ರಕರಣ ವಿಚಿತ್ರ ನೋಡಿ. ಸಾಲು-ಸಾಲು ಲವ್ ಬ್ರೇಕಪ್ ನಿಂದ ಮನನೊಂದ ಯುವಕನೋರ್ವ ಹುಡುಗಿ ಸಿಗದೇ ಮೇಕೆ ಮದುವೆಯಾಗಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ಜರುಗಿದೆ.
ಮೇಕೆ ಮದುವೆಯಾದ ಯುವಕನನ್ನು ಇಲ್ಲಿನ 27 ವರ್ಷದ ಭಗವಾನ್ ಸಿಂಗ್ ಎಂದು ಗುರುತಿಸಲಾಗಿದೆ. ಹಿಂದೂ ಸಂಪ್ರದಾಯದಂತೆಯೇ ಆ ಮೇಕೆಯನ್ನು ಮದುವೆಯಾಗಿದ್ದು, ಆ ಮೇಕೆಯ ಹೆಸರನ್ನು ಪೂಜಾ ಎಂದು ಗುರುತಿಸಲಾಗಿದೆ. ಕಳೆದ ಹಲವು ತಿಂಗಳಿನಿಂದ ನಾನು ಈ ಮೇಕೆಯನ್ನು ಆರೈಕೆ ಮಾಡುತ್ತಿದ್ದೇನೆ. ಅದು ಅಷ್ಟೇ ನನ್ನನ್ನು ಹಚ್ಚಿಕೊಂಡಿದೆ. ಹೀಗಾಗಿಯೇ ಈ ಮೇಕೆಯನ್ನೇ ಮದುವೆಯಾಗಲು ತೀರ್ಮಾನಿಸಿದ್ದೇನೆ ಎಂದು ಭಗವಾನ್ ಸಿಂಗ್ ಹೇಳಿದ್ದಾನೆ.
ಈ ಹಿಂದೆ ಆದ ನಿರಂತರ ಪ್ರೇಮ ವೈಫಲ್ಯಗಳು, ದಾಟುತ್ತಿರುವ ವಯಸ್ಸು ಮತ್ತು ವಯೋಸಹಜವಾಗಿ ಕಾಡುವ ಮದುವೆ ಎಂಬ ಬಂಧನದ ವ್ಯಾಮೋಹ ಇವೆಲ್ಲವನ್ನು ಅನುಭವಿಸಿ. ಸಾಕಾಗಿ ಕೊನೆಗೆ ಪ್ರಾಣಿಗಳೇ ಗುಣದಲಿ ಮೇಲು ಮಾನವನದಕ್ಕಿಂತ ಕೀಳು ಎನ್ನುವಂತೆ ತಾನು ಸಾಕಿ ಸಲುಹಿದ ಮೇಕೆಯನ್ನೇ ಆತ ಮದುವೆಯಾಗಿದ್ದಾನೆ. ಮೇಕೆಗೆ ಪತ್ನಿಯ ಸ್ಥಾನ ನೀಡಿದ್ದಾನೆ. ಏಕಾಂಗಿ ಯಾನದಲ್ಲಿ ಗುರಿ ಮರೆತಿರುವ ಅಲೆಮಾರಿಗೆ ಸಾಕ್ಷಿಯಾಗಿ ಭಗವಾನ್ ಸಿಂಗ್ ನಿಂತಿದ್ದಾನೆ. ಸದ್ಯ ಈ ಒಂದು ಸುದ್ದಿ ಹಾಗೂ ಸಿಂಗ್ ಮೇಕೆಯನ್ನು ಮದುವೆಯಾಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.