ಕೆಲವರಿಗೆ ತೆಳ್ಳಗಿದ್ದೇನೆ ದಪ್ಪ ಆಗೋದು ಹೇಗೆ ಅನ್ನೋ ಟೆನ್ಶನ್. ಇನ್ನು ಕೆಲವರು ದಪ್ಪ ಇದ್ದೇನೆ ಸ್ಲಿಮ್ ಆಗೋದು ಹೇಗೆ ಅನ್ನೋ ಯೋಚನೆ. ಆದರೆ ದೇಹದ ತೂಕ ಹೆಚ್ಚಳು ಈಗ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ದೇಹದ ಪ್ರತಿಯೊಂದು ಭಾಗದಲ್ಲೂ ಬೊಜ್ಜು ಕಾಣಿಸಿಕೊಳ್ಳಲಾರಂಭಿಸುತ್ತದೆ. ಇದರಿಂದ ತಮ್ಮ ದೇಹದ ಬಗ್ಗೆ ಕೀಳರಿಮೆ ಮೂಡಬಹುದು. ಕೆಲವರು ತೆಳ್ಳಗಾಗಲು ನಾನಾ ರೀತಿಯ ಸರ್ಕಸ್ ಮಾಡುತ್ತಲೇ ಇರುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಪೌಡರ್ ಸೇರಿದಂತೆ ಔಷಧಿಗಳ ಸೇವನೆಯನ್ನು ಮಾಡುತ್ತಾರೆ. ಆದರೆ ಮನೆಯಲ್ಲೇ ಆಹಾರ ಕ್ರಮದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡರೆ ದಪ್ಪಗಿರುವವರು ತೆಳ್ಳಗಾಗಬಹುದು.
IPL 2025: ಮುಂಬೈ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ಗೆ 12 ರನ್ಗಳ ರೋಚಕ ಜಯ!
ಹೌದು, “ರಾತ್ರಿ 9 ಗಂಟೆಗೆ ನಿದ್ದೆ ಮಾಡುವವರು, ಬೆಳಿಗ್ಗೆ 4 ಗಂಟೆಗೆ ಎಚ್ಚರಗೊಳ್ಳುವವರು, ದಿನಕ್ಕೆ ಎರಡು ಬಾರಿ ಊಟ ಮಾಡುವವರು, ಯಾವುದೇ ರೀತಿಯ ಸಕ್ಕರೆ ಬೇಡ ಎಂದು ಹೇಳುವವರು, ನಿಮಿಷಕ್ಕೆ 40 ಬಡಿತಗಳ ವಿಶ್ರಾಂತಿ ಹೃದಯ ಬಡಿತ ಹೊಂದಿರುವವರು, ವಾರದಲ್ಲಿ ಐದು ದಿನ ರನ್ನಿಂಗ್ ಮಾಡುವವರು, ಎರಡು ದಿನಗಳ ಎನರ್ಜಿ ಟ್ರೈನಿಂಗ್, ನೋ ನೆಟ್ಫ್ಲಿಕ್ಸ್, ನೋ ಅಮೆಜಾನ್ ಪ್ರೈಮ್, ನೋ ಟಿವಿ ಮತ್ತು ಮೆಟ್ಟಿಲುಗಳನ್ನು ಹತ್ತುವವರು” ಇಷ್ಟೆಲ್ಲಾ ಫಾಲೋ ಮಾಡುವವರು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ವರದಿಯೊಂದು ಹೇಳಿದೆ.
ಶಾಜನ್ ಸ್ಯಾಮ್ಯುಯೆಲ್ ಎಂಬವರು 94 ಕೆಜಿ ತೂಕ ಹೊಂದಿದ್ದರು. ಆದರೆ ಇಂದು, 68 ಕೆಜಿಯಲ್ಲಿ ಅವರು ಅಲ್ಟ್ರಾ ಮ್ಯಾರಥಾನರ್ ಆಗಿದ್ದಾರೆ. 18 ಸಾಂಪ್ರದಾಯಿಕ ಮ್ಯಾರಥಾನ್ಗಳನ್ನು (42.2 ಕಿಮೀ), ಒಂದು ಬಾರಿ 220 ಕಿಮೀ, ಮೂರು ಬಾರಿ 161 ಕಿಮೀ, ಆರು ಬಾರಿ 100 ಕಿಮೀ ಮತ್ತು ಲೆಕ್ಕವಿಲ್ಲದಷ್ಟು ಬಾರಿ 50 ಕಿಮೀ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಫಿಟ್ ಇಂಡಿಯಾ ಆಂದೋಲನದ ಬ್ರಾಂಡ್ ರಾಯಭಾರಿಯಾಗಿದ್ದಾರೆ.
ತಮ್ಮ ಜೀವನಶೈಲಿ ಮತ್ತು ತೂಕ ಇಳಿಕೆ ಪ್ರಯಾಣದ ಬಗ್ಗೆ ಮಾತನಾಡಿರುವ ಅವರು, “ನಾನು ವ್ಯವಹಾರದ ನಿಮಿತ್ತ ಆಗಾಗ್ಗೆ ಪ್ರಯಾಣಿಸುತ್ತಿದ್ದೆ, ಹೊರಗೆ ತಿನ್ನುತ್ತಿದ್ದ ಎಲ್ಲಾ ಆಹಾರದ ಬಗ್ಗೆಯೂ ನನಗೆ ಗಮನವಿರಲಿಲ್ಲ. ಒಮ್ಮೆ ಕೇರಳದಾದ್ಯಂತ ಪ್ರಯಾಣಿಸುತ್ತಿದ್ದ ನಾನು, ಪ್ರತಿದಿನ ಮಲಬಾರ್ ಪರೋಟಗಳು ಮತ್ತು ಡೀಪ್-ಫ್ರೈಡ್ ಚಿಕನ್ ಅನ್ನು ತಿನ್ನುತ್ತಿದ್ದೆ. ನಿಷ್ಕ್ರಿಯ ಜೀವನಶೈಲಿಯನ್ನು ಹೊಂದಿದ್ದ ಕಾರಣ ತೂಕ ಮಿತಿ ಮೀರಿ ಹೆಚ್ಚಾಯಿತು” ಎಂದು ಸ್ಯಾಮ್ಯುಯೆಲ್ ಹೇಳುತ್ತಾರೆ.
ಅದಾದ ಬಳಿಕ ಮ್ಯಾರಥಾನ್ ನನ್ನ ಮೋಜೋ ಆಯಿತು. ಆಹಾರ, ಪೋಷಣೆ ಮತ್ತು ಶಕ್ತಿಯ ಮೇಲೆ ಸಮಾನ ಗಮನವನ್ನು ಕೇಂದ್ರೀಕರಿಸಿ, ನಾನು 42 ನೇ ವಯಸ್ಸಿನಲ್ಲಿ ಅಲ್ಟ್ರಾಮ್ಯಾರಥಾನ್ ಓಟಗಾರನಾದೆ. ನಾನು 12/24/36 ಗಂಟೆಗಳ ಕ್ರೀಡಾಂಗಣ ಓಟಗಳನ್ನು ಪೂರ್ಣಗೊಳಿಸಿದ್ದೇನೆ. ಸಿಂಗಾಪುರ ಮತ್ತು ಬರ್ಲಿನ್ ಮ್ಯಾರಥಾನ್ಗಳನ್ನು ಮಾಡಿದ್ದೇನೆ” ಎಂದು ಸ್ಯಾಮ್ಯುಯೆಲ್ ತನ್ನ ವೈಟ್ ಲಾಸ್ ಜರ್ನಿಯ ಬಗ್ಗೆ ಹೇಳುತ್ತಾರೆ.
ಬೇರಿಯಾಟ್ರಿಕ್ ಸರ್ಜನ್ ಮತ್ತು ಬೊಜ್ಜು ಶಸ್ತ್ರಚಿಕಿತ್ಸೆ ಸೊಸೈಟಿಯ ಮಾಜಿ ಕಾರ್ಯದರ್ಶಿ ಡಾ. ಜಯಶ್ರೀ ತೋಡ್ಕರ್ ಹೇಳುವಂತೆ, ದೇಹದ ಚಯಾಪಚಯ ವ್ಯವಸ್ಥೆಯು ಒಂದು ನಿರ್ದಿಷ್ಟ ಅತ್ಯುತ್ತಮ ಮಟ್ಟದಲ್ಲಿದ್ದಾಗ, ಅದು ವ್ಯಕ್ತಿಯು ತನ್ನ ಹೆಚ್ಚುವರಿ ತೂಕವನ್ನು ನಿಯಂತ್ರಣಕ್ಕೆ ತರಲು ತೆಗೆದುಕೊಳ್ಳುವ ಸ್ವಯಂಪ್ರೇರಿತ ಪ್ರಯತ್ನಗಳಿಗೆ ಪ್ರತಿಕ್ರಿಯಿಸುತ್ತದೆ ಎಂದು ಹೇಳುತ್ತಾರೆ.
ಬೊಜ್ಜು ಸರಳ ಅಥವಾ ಸಂಕೀರ್ಣವಾಗಿರಬಹುದು. ಭಾರತದಲ್ಲಿ ಶೇಕಡಾ ತೊಂಬತ್ತು ಪ್ರಕರಣಗಳು ದುರದೃಷ್ಟವಶಾತ್ ಸಂಕೀರ್ಣವಾಗಿವೆ ಮತ್ತು ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಕೊಬ್ಬಿನ ಪಿತ್ತಜನಕಾಂಗ, ಹೃದ್ರೋಗ ಇತ್ಯಾದಿಗಳಿಗೆ ಸಂಬಂಧಿಸಿವೆ. ಈ ರೀತಿಯ ಬೊಜ್ಜು ಆಹಾರ ಮತ್ತು ವ್ಯಾಯಾಮದಂತಹ ಬಾಹ್ಯ ಕ್ರಮಗಳಿಗೆ ಮಾತ್ರ ಪ್ರತಿಕ್ರಿಯಿಸಲು ವಿಫಲವಾಗಿದೆ” ಎಂದು ಅವರು ಹೇಳುತ್ತಾರೆ.
ತೂಕ ಇಳಿಕೆ ಎಂಬುದು ಕೇವಲ ಆಹಾರಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ನಿದ್ದೆಗೂ ಸಂಬಂಧಿಸಿದೆ. ಒಬ್ಬ ವ್ಯಕ್ತಿಗೆ ಸರಿಯಾದ ಪ್ರಮಾಣದಲ್ಲಿ ನಿದ್ದೆ ಬರದಿದ್ದರೆ ಅನೇಕ ಸಮಸ್ಯೆಗಳನ್ನು ಆತ ಎದುರಿಸಬೇಕಾಗುತ್ತದೆ. ಇನ್ನು ಸೂಕ್ತ ತೂಕ ನಷ್ಟಕ್ಕೆ, ನಿಮ್ಮ ಚಯಾಪಚಯ ಕ್ರಿಯೆ ಮತ್ತು ಹಾರ್ಮೋನುಗಳನ್ನು ನಿಯಂತ್ರಿಸಲು ಸ್ಥಿರವಾದ ನಿದ್ರೆಯ ವೇಳಾಪಟ್ಟಿ ಇರಬೇಕು. ಒಬ್ಬ ವ್ಯಕ್ತಿ 7-9 ಗಂಟೆಗಳ ಕಾಲ ನಿದ್ರೆ ಮಾಡಬೇಕು. ರಾತ್ರಿ ೧೦ ರಿಂದ ಬೆಳಗ್ಗೆ ೬ರವರೆಗೆ ನಿದ್ದೆ ಮಾಡಬೇಕು. ಹೀಗೆ ಮಾಡಿದರೆ ತೂಕ ಇಳಿಕೆ ಸುಲಭವಾಗುತ್ತದೆ.