ಅನೇಕ ಮಂದಿ ತಾವು ಆಗಾಗ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವಾಗಿ ಹೇಳುತ್ತಾರೆ. ಇದರಿಂದ ಹೊಟ್ಟೆ ನೋವು, ತಲೆನೋವು ಮತ್ತು ಅಜೀರ್ಣವನ್ನು ಸಮಸ್ಯೆಗಳು ಉಂಟಾಗುತ್ತದೆ. ಜೀವನಶೈಲಿಯಲ್ಲಿನ ಬದಲಾವಣೆಗಳು ಮತ್ತು ಅನಿಯಮಿತ ಆಹಾರ ಪದ್ಧತಿಗಳಿಂದ ಈ ರೀತಿಯ ಹೊಟ್ಟೆಯ ಸಮಸ್ಯೆಗಳು ಉಂಟಾಗುತ್ತದೆ. ಅದರಲ್ಲೂ ಗ್ಯಾಸ್ಟ್ರಿಕ್ ದೊಡ್ಡ ಸಮಸ್ಯೆಯೇ ಆಗಿದೆ. ಏಕೆಂದರೆ ಇದು ಹೊಟ್ಟೆ ಉಬ್ಬುವಿಕೆಯಂತಹ ಮುಂತಾದ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
IPL 2025: ಟೀಮ್ ಇಂಡಿಯಾಗೆ ದೊಡ್ಡ ಲಾಸ್ ಮಾಡಿದ ವಿರಾಟ್! ಮಾಡಿದ್ದೇನು? ಫ್ಯಾನ್ಸ್ ಬೇಸರ!
ಗ್ಯಾಸ್ಟ್ರಿಕ್ ಅನ್ನೋದು ಭಾರತೀಯರಲ್ಲಿ ಇದು ಸಾಮಾನ್ಯ ಮತ್ತು ದಿನನಿತ್ಯದ ಸಮಸ್ಯೆಯಾಗಿದೆ. ಇಲ್ಲಿನ ಜನರು ರುಚಿ ರುಚಿಯಾದ, ಮಸಾಲೆಯುಕ್ತ ಆಹಾರವನ್ನು ಹೆಚ್ಚು ತಿನ್ನುತ್ತಾರೆ. ಗ್ಯಾಸ್ಟ್ರಿಕ್ ಬಂದಾಗ ಹೊಟ್ಟೆನೋವು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣವಾಗಿದೆ. ಆದರೆ, ಎಲ್ಲ ಹೊಟ್ಟೆನೋವೂ ಗ್ಯಾಸ್ಟ್ರಿಕ್ನ ಲಕ್ಷಣವಲ್ಲ ಎಂಬುದು ಕೂಡ ನಿಮಗೆ ತಿಳಿದಿರಬೇಕು.
ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ನಿವಾರಿಸಲು ನೀವು ಕೆಲವು ಮನೆಮದ್ದುಗಳನ್ನು ಬಳಸಬಹುದು. ಗ್ಯಾಸ್ಟ್ರಿಕ್ ಸಮಸ್ಯೆಗಳು, ಲಕ್ಷಣಗಳು ಮತ್ತು ಪರಿಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತಡೆಯಲು ಈ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮ. ಈ ಕೆಲವು ಸರಳ ಅಭ್ಯಾಸಗಳು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತವೆ.
ಖಾಲಿ ಹೊಟ್ಟೆಯು ಗ್ಯಾಸ್ ಅಥವಾ ಆಮ್ಲೀಯತೆಗೆ ಕಾರಣವಾಗಬಹುದು. ಒಂದೇ ಬಾರಿ ಹೊಟ್ಟೆ ತುಂಬುವಷ್ಟು ಭಾರೀ ಊಟವನ್ನು ತಿನ್ನುವ ಬದಲು, ದಿನಕ್ಕೆ 5 ಬಾರಿ ಸ್ವಲ್ಪ ಸ್ವಲ್ಪ ಆಹಾರ ಸೇವಿಸಿ. “ಬೆಳಗಿನ ಉಪಹಾರವನ್ನು ರಾಜನಂತೆ, ಮಧ್ಯಾಹ್ನದ ಊಟವನ್ನು ರಾಜಕುಮಾರನಂತೆ ಮತ್ತು ರಾತ್ರಿಯ ಊಟವನ್ನು ಬಡವನಂತೆ ಸೇವಿಸಿ” ಎಂದು ಹೇಳಲಾಗುತ್ತದೆ. ಮೊಸರು, ಆಯಾ ಸೀಸನ್ನಲ್ಲಿ ಸಿಗುವ ಹಣ್ಣುಗಳು, ತರಕಾರಿಗಳು, ಮೊಟ್ಟೆಗಳನ್ನು ತಿನ್ನಿರಿ. ಆದಷ್ಟೂ ಜಂಕ್ ಫುಡ್, ಕರಿದ, ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ಕಡಿಮೆ ಮಾಡಿ.
ಧೂಮಪಾನವು ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್ಗೆ ಕಾರಣವಾಗುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಉಂಟುಮಾಡುವ ಜೀರ್ಣಕಾರಿ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ. ಅತಿಯಾದ ಆಲ್ಕೋಹಾಲ್ ಸಹ ಜೀರ್ಣಾಂಗ ವ್ಯವಸ್ಥೆಯನ್ನು ಕೆರಳಿಸುತ್ತದೆ.
ನಿದ್ರೆಯ ಕೊರತೆಯು ಜೀರ್ಣಾಂಗ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಯನ್ನು ಅಡ್ಡಿಪಡಿಸುತ್ತದೆ. ಆದ್ದರಿಂದ, ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು 7-8 ಗಂಟೆಗಳ ನಿದ್ರೆ ಬಹಳ ಮುಖ್ಯ.
ಕೆಲವು ಇತರ ಆರೋಗ್ಯಕರ ಅಭ್ಯಾಸಗಳು ಹೀಗಿವೆ:
– ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸಬೇಡಿ. ಅದರ ಬದಲಿಗೆ ಎಳನೀರನ್ನು ಸೇವಿಸಿ.
– ದಿನವೂ ವ್ಯಾಯಾಮ ಮಾಡಿ.
– ಹೈಡ್ರೇಟೆಡ್ ಆಗಿರಿ.
– ಜೀರ್ಣಿಸಿಕೊಳ್ಳಲು ಕಷ್ಟಕರವಾದ ಆಹಾರವನ್ನು ಸೇವಿಸಬೇಡಿ.
– ಊಟವಾದ ತಕ್ಷಣ ಮಲಗಬೇಡಿ.
– ದಿನವೂ ಮಲವಿಸರ್ಜನೆ ಮಾಡುವುದು ಕೂಡ ಅತಿ ಮುಖ್ಯ. ಆ ಬಗ್ಗೆಯೂ ಗಮನವಿರಲಿ.
– ನಿಧಾನವಾಗಿ ತಿನ್ನಿರಿ ಮತ್ತು ನಿಮ್ಮ ಆಹಾರವನ್ನು ಸರಿಯಾಗಿ ಅಗಿದು ತಿನ್ನಿರಿ.