ಬಹಳಷ್ಟು ಜನ ಬೊಜ್ಜು, ಕೊಬ್ಬು, ದಡೂತಿ ದೇಹದಿಂದ ಹೆಣಗಾಡುತ್ತಿರುತ್ತಾರೆ. ಅಶಿಸ್ತಿನ ಜೀವನಶೈಲಿ ಮತ್ತು ಹೆಚ್ಚು ಹೆಚ್ಚು ಕುಳಿತುಕೊಳ್ಳುವ ಅಭ್ಯಾಸಗಳಿಂದ ದೇಹ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡಿಕೊಳ್ಳಲಾಗುತ್ತಿದೆ. ದೇಹದಲ್ಲಿ ಬೊಜ್ಜು. ಕೊಬ್ಬು ಕಡಿಮೆ ಮಾಡಿಕೊಳ್ಳಲು ಬರೀ ವ್ಯಾಯಾಮ ಮಾಡಿದರೆ ಸಾಲುವುದಿಲ್ಲ.
ಯುಗಾದಿ ಸಂಭ್ರಮ: ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿಕೆ – KR ಮಾರ್ಕೆಟ್ ನಲ್ಲಿ ಜನವೋ ಜನ!
ಆರೋಗ್ಯಕರ ಆಹಾರ ದೇಹ ಸೇರುವುದು ಮುಖ್ಯವಾಗುತ್ತದೆ. ನೈಸರ್ಗಿಕ ಕೊಬ್ಬನ್ನು ಸುಡುವ ಗುಣಗಳನ್ನು ಹೊಂದಿರುವ ಕೆಲವು ಆಹಾರಗಳನ್ನು ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳಲು ಸಹಾಯವಾಗುತ್ತದೆ.
ಸಾಮಾನ್ಯವಾಗಿ ಎಲ್ಲರಿಗೂ ತಾವು ಸ್ಲಿಮ್ ಆಗಿ ಕಾಣಬೇಕೆಂಬ ಬಯಕೆ ಇರುತ್ತದೆ. ಆದರೆ ಈ ಆಸೆ ಕೊನೆಗೆ ನಿರಾಸೆಯಲ್ಲಿ ಕೊನೆಗೊಳ್ಳುತ್ತದೆ. ಇದಕ್ಕೆ ಕಾರಣ ನಮ್ಮ ದೇಹಕ್ಕೆ ಯಾವ ಆಹಾರ ಪದ್ಧತಿ ಸರಿಹೊಂದುತ್ತದೆ ಎಂದು ನಮಗೆ ತಿಳಿದಿಲ್ಲ. ಆದರೆ ತೂಕ ಇಳಿಕೆಗೆ ಸಹಾಯಕವಾಗಿರುವ ಕೆಲವು ಪಾನೀಯಗಳು ಇಲ್ಲಿವೆ. ಈ ಪಾನೀಯಗಳನ್ನು ನೀವು ಮನೆಯಲ್ಲಿಯೇ ತಯಾರಿಸಿ ಕುಡಿಯಬಹುದು. ಹಾಗಾದ್ರೆ ಅವು ಯಾವುವು ಅಂತೀರಾ ಈ ಸ್ಟೋರಿ ಓದಿ.
ಕಾಫಿ ಬದಲು ಈ ಪಾನೀಯ ಕುಡಿಯಿರಿ: ಜೀ ನ್ಯೂಸ್ ವರದಿ ಪ್ರಕಾರ, ನಮ್ಮಲ್ಲಿ ಅನೇಕ ಮಂದಿಗೆ ಕಾಫಿ ಕುಡಿಯುವ ಅಭ್ಯಾಸ ಹೆಚ್ಚಾಗಿರುತ್ತದೆ. ಈ ಅಭ್ಯಾಸವು ಹೆಚ್ಚು ಹಾನಿಕಾರಕವಲ್ಲದಿದ್ದರೂ, ಅನೇಕ ವೇಳೆ ತೂಕ ಇಳಿಸಿಕೊಳ್ಳಲು ಇದು ಸಹಾಯಕವಾಗದಿರಬಹುದು. ಆದ್ದರಿಂದ ಇದರ ಬದಲಿಗೆ ಕೆಲವು ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಉತ್ತಮ.
ಹಾಗಾಗಿ ಕೆಲವು ಫಿಟ್ನೆಸ್ ತಜ್ಞರು ಮತ್ತು ಕೆಲವು ವೈದ್ಯರು ನೀವು ಪ್ರತಿದಿನ ಕಾಫಿಯ ಬದಲಿಗೆ ಗ್ರೀನ್ ಟೀ ಕುಡಿಯುವಂತೆ ಶಿಫಾರಸ್ಸು ಮಾಡುತ್ತಾರೆ. ಇನ್ನೂ ಗ್ರೀನ್ ಟೀ ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು ಎಂಬುವುದರ ಬಗ್ಗೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ.
ತೂಕ ಇಳಿಕೆ: ಸಕ್ಕರೆ ಬೆರೆಸಿದ ಕಾಫಿ ಕುಡಿಯುವ ಬದಲು ಗ್ರೀನ್ ಟೀ ಕುಡಿಯುವುದರಿಂದ ತೂಕ ಇಳಿಕೆಗೆ ಸಹಾಯವಾಗಿದೆ. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಕ್ಯಾಲೋರಿಗಳನ್ನು ಬರ್ನ್ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಗಟ್ಟುತ್ತದೆ. ಅದೇ ರೀತಿ ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ
ವಿಶ್ರಾಂತಿ ಹಾಗೂ ನೆಮ್ಮದಿ: ಗ್ರೀನ್ ಟೀಯಲ್ಲಿರುವ ಅಮೈನೋ ಆಮ್ಲಗಳು ನಮ್ಮ ದೇಹವನ್ನು ವಿಶ್ರಾಂತಿಗೊಳಿಸುವ ಗುಣಗಳನ್ನು ಹೊಂದಿವೆ. ಇದು ನಮ್ಮ ಗಮನವನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ದೇಹವನ್ನು ಶಾಂತಗೊಳಿಸುತ್ತದೆ. ಇದು ಕೆಲಸ ಮಾಡುವಾಗ ನಿಮ್ಮ ಸಂಪೂರ್ಣ ಗಮನವನ್ನು ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ.
ಗ್ಯಾಸ್ಟ್ರಿಕ್ ಸಂಗ್ರಹವಾಗುವುದಿಲ್ಲ: ನಾವು ಪ್ರತಿದಿನ ವಿವಿಧ ರೀತಿಯ ಆಹಾರಗಳನ್ನು ಸೇವಿಸುತ್ತೇವೆ. ಇದು ನಮ್ಮ ಹೊಟ್ಟೆಯಲ್ಲಿ ಕೆಟ್ಟ ಗ್ಯಾಸ್ಟ್ರಿಕ್ ಸುಲಭವಾಗಿ ಸಂಗ್ರಹವಾಗಲು ಕಾರಣವಾಗಬಹುದು. ಇದು ಹೊಟ್ಟೆ ನೋವು, ಅಜೀರ್ಣ ಮತ್ತು ಹೊಟ್ಟೆ ಅಸ್ವಸ್ಥತೆಯಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದನ್ನು ಸರಿಪಡಿಸಲು ನೀವು ಗ್ರೀನ್ ಟೀ ಕುಡಿಯಬಹುದು. ಇದು ಹೊಟ್ಟೆಯಲ್ಲಿ ಕೆಟ್ಟ ಗ್ಯಾಸ್ಟ್ರಿಕ್ ಸಂಗ್ರಹವಾಗುವುದನ್ನು ತಡೆಗಟ್ಟುತ್ತದೆ ಎಂದು ಹೇಳಲಾಗುತ್ತದೆ.
ಹೃದಯಕ್ಕೆ ಒಳ್ಳೆಯದು: ಗ್ರೀನ್ ಟೀ ಕುಡಿಯುವವರು ಹಾಗೂ ಕಾಫಿ ಕುಡಿಯುವವರ ಮೇಲೆ ಕೆಲವು ಅಧ್ಯಯನಗಳನ್ನು ನಡೆಸಲಾಯಿತು. ಇದರಲ್ಲಿ ಗ್ರೀನ್ ಟೀ ಕುಡಿಯುವವರ ಹೃದಯವು ಕಾಫಿ ಕುಡಿಯುವವರಿಗಿಂತ ಉತ್ತಮವಾಗಿರುತ್ತವೆ ಎಂದು ತಿಳಿದು ಬಂದಿದೆ. ಇದಲ್ಲದೇ, ಗ್ರೀನ್ ಟೀ ಕುಡಿಯುವವರಲ್ಲಿ ಹೃದ್ರೋಗ ಕಾಯಿಲೆಯ ಅಪಾಯ ಕಡಿಮೆ. ಇದು ಉತ್ಕರ್ಷಣ ನಿರೋಧಕಗಳ ಮಟ್ಟವನ್ನು ಕಡಿಮೆ ಮಾಡುತ್ತಾರೆ ಮತ್ತು ಉರಿಯೂತದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಒತ್ತಡ ಕಡಿಮೆಯಾಗುತ್ತದೆ: ಹೆಚ್ಚಾಗಿ ಕಾಫಿ ಕುಡಿಯುವವರು ನಿದ್ರಾಹೀನತೆಯಿಂದ ಬಳಲುವ ಸಾಧ್ಯತೆಯಿದೆ. ಇದರ ಪರಿಣಾಮದೊಂದಿಗೆ ಆಗಾಗ ಕೈ ನಡುಕವನ್ನು ಅನುಭವಿಸಬಹುದು. ಹೃದಯ ಬಡಿತವೂ ಆಗಾಗ ಹೆಚ್ಚಾಗಬಹುದು. ಆದರೆ, ಗ್ರೀನ್ ಟೀಯಲ್ಲಿರುವ ಕೆಫೀನ್ ಅನ್ನು ದೇಹವು ನಿಧಾನವಾಗಿ ಹೀರಿಕೊಳ್ಳುವುದರಿಂದ ಇದರ ಅಡ್ಡಪರಿಣಾಮಗಳು ಬಹಳ ಕಡಿಮೆ ಎಂದು ಹೇಳಲಾಗುತ್ತದೆ. ಇದು ಆತಂಕ ಮತ್ತು ನಡುಕವನ್ನು ಕಡಿಮೆ ಮಾಡುತ್ತದೆ.