ಮಂಗಳೂರು: ದೇಶ ವಿರೋಧಿ ಪೋಸ್ಟ್ ಹಾಕಿದ್ದ ವೈದ್ಯೆಯನ್ನು ಕೊನೆಗೂ ಕೆಲಸದಿಂದ ವಜಮಾಡಲಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯ ಡಯೆಟಿಷಿಯನ್ ಆಗಿದ್ದ ಅಫೀಫ ಫಾರೀಮಾ, ಹಿಂದೂಗಳು ಹಾಗೂ ದೇಶ ವಿರೋಧಿ ಪೋಸ್ಟ್ ಹಾಕಿ ವಿವಾದಕ್ಕೆ ಗುರಿಯಾಗಿದ್ದಾರೆ. ಅವರ ಪೋಸ್ಟ್ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಆಕೆಯ ವಜಾಗೊಳಿಸಲಾಗಿದೆ.
ವೈದ್ಯೆ ಅಫೀಫ ಫಾರೀಮಾ ‘help stinky hindus are behind me’.. am i indian? yes. do i hate india? Yes ಎಂದು ಸಾಮಾಜಿಕ ಮಾಧ್ಯಮದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದರು. ಈ ಫೋಸ್ಟ್ ಬಳಿಕ ಆಕ್ರೋಶ ಭುಗಿಲೆದ್ದಿತ್ತು. ಜೊತೆಗೆ ಆಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಇದೀಗ ಆಸ್ಪತ್ರೆಯ ಆಡಳಿತ ಮಂಡಳಿ, ಅಫೀಫಳನ್ನು ಕೆಲಸದಿಂದ ವಜಾ ಮಾಡಿದೆ.
ನಾನು ಭಾರತೀಯಳೇ, ಆದ್ರೆ ಭಾರತವನ್ನು ಧ್ವೇಷಿಸುತ್ತೇನೆ: ಹಿಂದುಗಳನ್ನು ಕೆರಳಿಸಿದ ವೈದ್ಯೆ ಪೋಸ್ಟ್!
ಇನ್ನೂ ಈ ಸಂಬಂಧ ಆಸ್ಪತ್ರೆಯ ಹೆಚ್‌ಆರ್ ಅಧಿಕಾರಿ ಮಹಮ್ಮದ್ ಅಸ್ಲಾಂ ಅಫೀಫ ವಿರುದ್ಧ ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಅಫೀಫ ವಿರುದ್ಧ BNS ಕಲಂ 196 (1) (a), 353 (2) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.