ಇತ್ತೀಚಿನ ದಿನಗಳಲ್ಲಿ ಚಿಕನ್ ಸೇವಿಸುವ ಮಂದಿ ಹೆಚ್ಚಾಗಿದ್ದಾರೆ ಏಕೆಂದರೆ ಅದರಲ್ಲಿ ಸಿಗುವ ಪ್ರೋಟಿನ್ ಸಿಕ್ಕಾಪಟ್ಟೆ. ವರ್ಕೌಟ್ ಮಾಡುವವರಿಗೆ ಈ ಪ್ರೋಟಿನ್ ಅಗತ್ಯ. ಮಾಂಸಾಹಾರಿಗಳು ಫೇವರೆಟ್ ಅಂದ್ರೆ ಚಿಕನ್. ಅಡುಗೆ ಮಾಡುವುದು ಸುಲಭ, ಬೆಲೆ ಕೂಡ ಹೆಚ್ಚಿರುವುದಿಲ್ಲ ಹಾಗೇ ಬೇಕಾದ ವೆರೈಟಿ ಮಾಡಿಕೊಂಡು ಸೇವಿಸಬಹುದು. ಕೆಲವರು ದಿನಕ್ಕೆ ಒಮ್ಮೆ ತಿನ್ನುತ್ತಾರೆ, ಕೆಲವರು ವಾರಕ್ಕೊಮ್ಮೆ ತಿನ್ನುತ್ತಾರೆ ಇನ್ನೂ ಕೆಲವರು ಅಪರೂಪದಲ್ಲಿ ಅಪರೂಪ.
ಆದರೆ, ಹೊಸದಾಗಿ ನಡೆದ ಸಂಶೋಧನೆಯಲ್ಲಿ ಸ್ವಾರಸ್ಯಕರ ವಿಷಯಗಳು ಹೊರಬಿದ್ದಿವೆ. ಜಾಸ್ತಿ ಕೋಳಿ ಮಾಂಸ ತಿನ್ನುವವರು ಹುಷಾರಾಗಿರಿ ಅಂತಾರೆ ತಜ್ಞರು. ಇಟಲಿಯ ರಾಷ್ಟ್ರೀಯ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆಯ ಸಂಶೋಧಕರ ಪ್ರಕಾರ, ಜಾಸ್ತಿ ಕೋಳಿ ಮಾಂಸ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ. ವಾರಕ್ಕೆ 300 ಗ್ರಾಂ ಗಿಂತ ಹೆಚ್ಚು ಕೋಳಿ ಮಾಂಸ ತಿನ್ನುವವರಿಗೆ ಹೊಟ್ಟೆ, ಕರುಳಿನ ಸಮಸ್ಯೆ ಜೊತೆಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.
ಡಯೆಟ್ ಗೆ ಹೇಳಿ ಗುಡ್ ಬಾಯ್: ಬೆಳಗ್ಗೆ ದೋಸೆ-ಇಡ್ಲಿ ತಿಂದೇ ಸ್ಲಿಮ್ ಆಗಬಹುದು! ಹೇಗೆ ಅಂತೀರಾ?
ಇಲ್ಲಿಯವರೆಗೆ ತಜ್ಞರು ರೆಡ್ ಮೀಟ್ ಕ್ಯಾನ್ಸರ್ಗೆ ಕಾರಣ ಅಂತ, ಕೋಳಿ ಮಾಂಸ ಒಳ್ಳೆಯದು ಅಂತ ಹೇಳುತ್ತಿದ್ದರು. ಆದರೆ, ಹೊಸ ಸಂಶೋಧನೆಯಲ್ಲಿ ಕೋಳಿ ಮಾಂಸ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಹೇಳುತ್ತಿದ್ದಾರೆ.
ಕೋಳಿ ಮಾಂಸ ಜಾಸ್ತಿ ತಿಂದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಅಂತಾರೆ ಸಂಶೋಧಕರು. ಸಂಶೋಧನೆಯ ಭಾಗವಾಗಿ 20 ವರ್ಷಗಳಲ್ಲಿ 4,869 ಜನರ ಮಾಹಿತಿಯನ್ನ ಅಧ್ಯಯನ ಮಾಡಿದ್ದಾರೆ.
ಇವರಲ್ಲಿ ಕೋಳಿ ಮಾಂಸ ಜಾಸ್ತಿ ತಿನ್ನುವವರು ಬೇಗ ಸಾವನ್ನಪ್ಪಿದ್ದಾರೆ ಅಂತ ಸಂಶೋಧನೆಯಲ್ಲಿ ತಿಳಿದುಬಂದಿದೆ. ಆದರೆ, ಕೋಳಿ ಮಾಂಸದ ಗುಣಮಟ್ಟದಲ್ಲೋ ಅಥವಾ ಅದನ್ನ ಡೀಪ್ ಫ್ರೈ, ಗ್ರಿಲ್ ಮಾಡೋ ರೀತಿಯಲ್ಲಿ ತಿಂದು ಸಾವು ಕಂಡಿದ್ದಾರೋ ಅನ್ನೂದು ಇನ್ನೂ ಸ್ಪಷ್ಟವಾಗಿಲ್ಲ.
ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಬೇಕು ಅಂತಾರೆ ಸಂಶೋಧಕರು. ನ್ಯೂಟ್ರಿಯಂಟ್ಸ್ ಜರ್ನಲ್ನಲ್ಲಿ ಪ್ರಕಟವಾದ ವರದಿಯಲ್ಲಿ, ಕೋಳಿ ಮಾಂಸ ತಿನ್ನುವ ಬಗ್ಗೆ ಹುಷಾರಾಗಿರಿ ಅಂತ ತಜ್ಞರು ಸಲಹೆ ನೀಡಿದ್ದಾರೆ. ಕೋಳಿ ಮಾಂಸನ ಮಿತವಾಗಿ ತಿನ್ನಬೇಕು. ನಿತ್ಯದ ಆಹಾರದಲ್ಲಿ ಹಣ್ಣು, ತರಕಾರಿಗಳಂತಹ ನಾರಿನಂಶ ಹೆಚ್ಚಿರುವ ಆಹಾರ ಸೇರಿಸಿಕೊಳ್ಳಬೇಕು. ಡೀಪ್ ಫ್ರೈಡ್ ಕೋಳಿ ಮಾಂಸ ತಿನ್ನಬಾರದು ಎಂದಿದ್ದಾರೆ.