ಬೆಂಗಳೂರು:- ಕಾಂಗ್ರೆಸ್‌ನವ್ರೇ ಇ.ಡಿಗೆ ಪರಂ ವಿರುದ್ಧ ದಾಖಲೆ ಕೊಟ್ಟಿದ್ರೆ ಹೆಸರು ಬಹಿರಂಗಪಡಿಸಿ ಎಂದು ಸಚಿವ ಪ್ರಹ್ಲಾದ್ ಜೋಶಿಗೆ ಸಚಿವ ಎಂಬಿ ಪಾಟೀಲ್ ಸವಾಲು ಹಾಕಿದ್ದಾರೆ.
ಜನೌಷಧ ಕೇಂದ್ರ ತೆರವು ವಿಚಾರ: ಇದರಲ್ಲಿ ರಾಜಕೀಯ ದುರುದ್ದೇಶವಿಲ್ಲ ಎಂದ ಶರಣ್ ಪ್ರಕಾಶ್ ಪಾಟೀಲ್!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಇ.ಡಿಗೆ ಪರಮೇಶ್ವರ್ ವಿರುದ್ಧ ಯಾರು ದಾಖಲೆ ಕೊಟ್ರು? ಪ್ರಹ್ಲಾದ್ ಜೋಶಿಯವರ ಬಳಿ ಮಾಹಿತಿ ಇದ್ರೆ ಹೇಳಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ. ಯಾಕೆ ಕಾಂಗ್ರೆಸ್‌ನವ್ರು ಯಾರು ಅಂತ ಬಹಿರಂಗಪಡಿಸಲು ಜೋಶಿಯವರಿಗೆ ಧೈರ್ಯ ಇಲ್ವಾ ಎಂದು ಟಾಂಗ್ ಕೊಟ್ಟರು.
ಯಾರು ದಾಖಲೆ ಕೊಟ್ಟವರು ಅಂತ ಅವರಿಗೆ ಗೊತ್ತಿರುತ್ತೆ. ಸಂಪೂರ್ಣ ಮಾಹಿತಿ ಇರುತ್ತೆ. ಅವರ ಅಡಿಯಲ್ಲೇ ಇ.ಡಿ, ಐಟಿ ಎಲ್ಲ ಬರೋದು. ಮೋದಿ, ಪ್ರಹ್ಲಾದ್ ಜೋಶಿಯವರೇ ಇದನ್ನೆಲ್ಲ ಮಾಡಿಸ್ತಿದ್ದಾರೆ. ಹಾಗಾದ್ರೆ ಇ.ಡಿಯವ್ರು ಎಲ್ಲವನ್ನೂ ಪ್ರಹ್ಲಾದ್ ಜೋಶಿಯವರಿಗೆ ರಿಪೋರ್ಟ್ ಮಾಡ್ತಾರೆ ಅಂತ ಆಯ್ತಲ್ಲ ಎಂದು ವಾಗ್ದಾಳಿ ನಡೆಸಿದರು.