Close Menu
Ain Live News
    Facebook X (Twitter) Instagram YouTube
    Wednesday, June 11
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ವದಂತಿ ನಂಬದಿರಿ.. ಆರ್​​ಸಿಬಿ ಮಾರಾಟ ಮಾಡುವುದಿಲ್ಲ: ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟನೆ

    By AIN AuthorJune 10, 2025
    Share
    Facebook Twitter LinkedIn Pinterest Email
    Demo

    ಕಾಲ್ತುಳಿತ ಪ್ರಕರಣ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಆರ್​​ಸಿಬಿಯನ್ನು ಮಾರಾಟ ಮಾಡಲಾಗುತ್ತದೆ ಎನ್ನುವ ಸುದ್ದಿಯನ್ನು ಯುನೈಟೆಡ್ ಸ್ಪಿರಿಟ್ಸ್ ಅಲ್ಲಗಳೆದಿದೆ. ರಾಯಲ್ ಚಾಲೆಂಜರ್ಸ್ ತಂಡವನ್ನು ಮಾರಾಟ ಮಾಡುವ ಯಾವ ಆಲೋಚನೆಯೂ ಇಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟಪಡಿಸಿದೆ.

    ಸರ್ಕಾರಕ್ಕೆ ‘ಕಾಲ್ತುಳಿತ’ ಟೆನ್ಷನ್: ಜೂ.13ರಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರೊಟೆಸ್ಟ್!

    ಆರ್​​ಸಿಬಿ ತಂಡವನ್ನು ಪೂರ್ಣವಾಗಿಯಾಗಲೀ, ಭಾಗಶಃ ಆಗಿಯಾಗಲೀ ಮಾರಾಟ ಮಾಡುತ್ತಿಲ್ಲ ಎಂದು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ ಹೇಳಿಕೆ ನೀಡಿದೆ. ಕೇಂದ್ರ ಸರ್ಕಾರವು ಕ್ರೀಡಾಕೂಟಗಳಲ್ಲಿ ತಂಬಾಕು ಮತ್ತು ಮದ್ಯ ಉತ್ಪನ್ನಗಳ ಪ್ರಚಾರ ಮತ್ತು ಜಾಹೀರಾತು ನಡೆಯದಂತೆ ನಿರ್ಬಂಧಿಸಲು ಯೋಜಿಸಿದೆ. ಈ ಹಿನ್ನೆಲೆಯಲ್ಲಿ ಆರ್​​ಸಿಬಿಯನ್ನು ಮಾರುವ ಪರಿಶೀಲನೆಯಲ್ಲಿ ಡಿಯಾಜಿಯೋ ಇದೆ ಎನ್ನುವಂತಹ ಸುದ್ದಿಯನ್ನು ಬ್ಲೂಮ್​ಬರ್ಗ್ ಸುದ್ದಿ ಸಂಸ್ಥೆ ಪ್ರಕಟಿಸಿತ್ತು.

    ಆರ್​​​ಸಿಬಿಯ ಮಾಲೀಕನಾಗಿರುವ ಯುನೈಟೆಡ್ ಸ್ಪಿರಿಟ್ಸ್ ಸಂಸ್ಥೆಯು ಬ್ರಿಟನ್ ಮೂಲದ ಡಿಯಾಜಿಯೋದ ಅಂಗಸಂಸ್ಥೆಯಾಗಿದೆ. ಬ್ಲೂಮ್​​ಬರ್ಗ್ ವರದಿ ಪ್ರಕಾರ, ಡಿಯಾಜಿಯೋ ಸಂಸ್ಥೆಯು ಆರ್​​ಸಿಬಿಗೆ 2 ಬಿಲಿಯನ್ ಡಾಲರ್ (17,000 ಕೋಟಿ ರೂ) ಮೊತ್ತದ ವ್ಯಾಲ್ಯುಯೇಶನ್ ನಿರೀಕ್ಷಿಸುತ್ತಿದೆ ಎನ್ನಲಾಗಿತ್ತು. ಐಪಿಎಲ್​​ನ ಆರಂಭದಲ್ಲಿ ಇದ್ದ ಎಂಟು ತಂಡಗಳಲ್ಲಿ ಆರ್​ಸಿಬಿಯೂ ಒಂದು. ಮೊದಲಿಗೆ ವಿಜಯ್ ಮಲ್ಯ ಒಡೆತನದಲ್ಲಿ ಯುನೈಟೆಡ್ ಸ್ಪಿರಿಟ್ಸ್ ಇತ್ತು. ಯುನೈಟೆಡ್ ಸ್ಪಿರಿಟ್ಸ್ ಅನ್ನು ಬ್ರಿಟನ್ ಮೂಲದ ಡಿಯಾಜಿಯೋ ಖರೀದಿ ಮಾಡಿತು. ಆ ಬಳಿಕ ಆರ್​​ಸಿಬಿ ಮಾಲಕತ್ವವು ಡಿಯಾಜಿಯೋ ಕೈಗೆ ಹೋಗಿತ್ತು. 2008ರಿಂದ ಐಪಿಎಲ್ ಆಡುತ್ತಿರುವ ರಾಯಲ್ ಚಾಲೆಂಜ್ಸ್ ತಂಡ ಈ ವರ್ಷ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಪಡೆದಿದೆ.

    Demo
    Share. Facebook Twitter LinkedIn Email WhatsApp

    Related Posts

    Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆ!

    June 11, 2025

    Heart Attack: ಹೃದಯಾಘಾತದಿಂದ 19 ವರ್ಷದ ಯುವಕ ಸಾವು!

    June 11, 2025

    ಭೀಕರ ಅಪಘಾತ: ಸಿಮೆಂಟ್ ಮಿಕ್ಸರ್ ಲಾರಿ ಹರಿದು ಮಹಿಳೆ ಸ್ಥಳದಲ್ಲೇ..!

    June 11, 2025

    RCB ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? DCM ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ!

    June 11, 2025

    ತೂಕ ಇಳಿಸಿಕೊಳ್ಳಲು ನೀವು ಅನ್ನ ತ್ಯಜಿಸಲೇಬೇಕಾ? ಬೇಕಾಗಿಲ್ಲ.. ಈ ಅಕ್ಕಿ ಬಳಸಿ ಸಾಕು ವೇಟ್ ಲಾಸ್ ಪಕ್ಕಾ

    June 11, 2025

    ED ದಾಳಿ: ತಪ್ಪಾಗಿರೋದು ಕಂಡು ಬಂದ್ರೆ ಶಿಕ್ಷೆಯಾಗಲಿ, ಅದು ಬಿಟ್ಟು ಹೀಗೆ ತೇಜೋವಧೆ ಮಾಡೋದು ಸರಿಯಲ್ಲ – ಅಶೋಕ್ ಪಟ್ಟಣ

    June 11, 2025

    ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ದೊಡ್ಡ ಬದಲಾವಣೆಗಳು! ಅಜಂ ಸೇರಿದಂತೆ ಇಬ್ಬರು ಔಟ್

    June 11, 2025

    ಚಿನ್ನ, ಬೆಳ್ಳಿ ಬೆಲೆ ಏರಿಕೆ: ಹಳದಿ ಲೋಹದ ಇಂದಿನ ಮಾರುಕಟ್ಟೆ ದರ ಎಷ್ಟಿದೆ ಗೊತ್ತಾ? ವಿವರ ಇಲ್ಲಿದೆ

    June 11, 2025

    Corona Virus: ದೇಶದಲ್ಲಿ ಸಕ್ರಿಯ ಪ್ರಕರಣಗಳು 7,121 ಕ್ಕೆ ಏರಿಕೆ..! 24 ಗಂಟೆಗಳಲ್ಲಿ 6 ಸಾವುಗಳು

    June 11, 2025

    BREAKING.. ಗಾಲಿ ಜನಾರ್ಧನ ರೆಡ್ಡಿ’ಗೆ ಬಿಗ್ ರಿಲೀಫ್: ಜಾಮೀನು ಮಂಜೂರು

    June 11, 2025

    ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ವಿರೋಧ: ಹೈಕೋರ್ಟ್ ಗೆ PIL ಸಲ್ಲಿಕೆ!

    June 11, 2025

    ಮಚ್ಚಿನಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಕೊಲೆ: ಹತ್ಯೆಗೆ ಕಾರಣ?

    June 11, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.