ನಾವು ಯಾವುದಾದರೂ ವಿಶೇಷವಾದ ಅಡುಗೆ ಮಾಡುವ ಸಂದರ್ಭದಲ್ಲಿ ಒಂದು ವೇಳೆ ನಿಂಬೆ ಹಣ್ಣಿನ ಅವಶ್ಯಕತೆ ಇದ್ದರೆ, ಅದನ್ನು ಎರಡು ಹೋಳು ಮಾಡಿ ನಿಂಬೆ ಹಣ್ಣಿನ ರಸ ಹಿಂಡಿಕೊಂಡು ಸಿಪ್ಪೆಯನ್ನು ಹೊರಗಡೆ ಬಿಸಾಡುತ್ತೇವೆ. ಅಂದ್ರೆ ನಮ್ಮ ಪ್ರಕಾರದಲ್ಲಿ ನಿಂಬೆಹಣ್ಣಿನ ಸಿಪ್ಪೆ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು. ಆದರೆ ಇದು ತಪ್ಪು. ಚರ್ಮದ ಅನೇಕ ಸಮಸ್ಯೆಗಳನ್ನು ಇದು ಪರಿಹರಿಸುತ್ತದೆ.
https://ainkannada.com/do-you-eat-mangoes-at-night-so-see-this-news-miss-modde/
ಯಾವುದಾದರೂ ವಸ್ತುಗಳ ಮೇಲೆ ಬಿಡದೆ ಇರುವ ಕಲೆಗಳನ್ನು ಇದು ಹೋಗಲಾಡಿಸುತ್ತದೆ. ಪಾತ್ರೆಗಳನ್ನು ಬೆಳ್ಳಗಾಗಿಸುತ್ತದೆ. ಹೀಗೆ ಹೇಳುತ್ತ ಹೋದರೆ ನಿಂಬೆಹಣ್ಣಿನ ಸಿಪ್ಪೆ ಇಂದ ಸಿಗುವ ಲಾಭಗಳು ಒಂದೆರಡಲ್ಲ. ಅದೇ ಆರೋಗ್ಯಕ್ಕೆ ಏನು ಲಾಭ ಎಂದು ನೀವು ಇಲ್ಲಿ ತಿಳಿದು ಕೊಳ್ಳಬಹುದು
ತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ.
ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಪೆಕ್ಟಿನ್ ಎಂಬ ಅಂಶವಿರುವುದರಿಂದ ಇದು ತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ.
ಬಾಯಿಯ ಸಾಮಾನ್ಯ ಸಮಸ್ಯೆಗಳು
ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಸಿಟ್ರಿಕ್ ಆಮ್ಲ ಹೇರಳವಾಗಿದೆ, ಇದು ವಿಟಮಿನ್ ಸಿ ಕೊರತೆಯನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಮತ್ತು ಬಾಯಿಯ ಸಾಮಾನ್ಯ ಸಮಸ್ಯೆಗಳ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಬಾಯಿಯ ಕಾಯಿಲೆಗಳಿಗೆ ಕಾರಣವಾಗುವ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯುತ್ತದೆ.
ಹೃದಯ ಮತ್ತು ಸಂಬಂಧಿತ ರೋಗಗಳು
ನಿಂಬೆ ಹಣ್ಣಿನ ಸಿಪ್ಪೆಯು ಫ್ಲೇವನಾಯ್ಡ್ಗಳು, ವಿಟಮಿನ್ ಸಿ ಮತ್ತು ಪೆಕ್ಟಿನ್ ಅನ್ನು ಹೊಂದಿದೆ. ಇವು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಇತರ ಹೃದ್ರೋಗದ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಡಿ-ಲಿಮೋನೆನ್ ಮತ್ತು ವಿಟಮಿನ್ ಸಿ ನಂತಹ ಆಂಟಿ ಆಕ್ಸಿಡಂಟ್ ಗಳಿರುತ್ತವೆ, ಇದು ನಮ್ಮ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ ಮತ್ತು ರೋಗದ ಅಪಾಯವನ್ನು ಕಡಿಮೆ ಮಾಡುತ್ತವೆ. ನಿಂಬೆ ಹಣ್ಣಿನ ಸಿಪ್ಪೆ, ಇತರ ಸಿಟ್ರಸ್ ಹಣ್ಣುಗಳಂತೆ, ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.
ಕ್ಯಾನ್ಸರ್ ನಿರೋಧಕ ಶಕ್ತಿ ನಿಂಬೆ ಹಣ್ಣಿನ ಸಿಪ್ಪೆಗಿದೆ
ಯುಎಸ್ ಅರಿಜೋನಾ ಯೂನಿವರ್ಸಿಟಿಯ ಒಂದು ಅಧ್ಯಯನದ ಪ್ರಕಾರ ಬ್ಲ್ಯಾಕ್ ಟೀಯಲ್ಲಿ ನಿಂಬೆ ಹಣ್ಣಿನ ಸಿಪ್ಪೆಯನ್ನು ಬೆರೆಸಿ ಸೇವುಸಿದರೆ ಅದು ಕ್ಯಾನ್ಸರ್ ಸಾಧ್ಯತೆಯನ್ನು ಶೇಕಡಾ 70ರಷ್ಟು ಕಡಿಮೆ ಮಾಡುತ್ತದೆ. ಸಿಪ್ಪೆಯಲ್ಲಿ ಸಾಲ್ವಸ್ಟ್ರಾಲ್ Q40 ಲಿಮೋನೀನ್ ಇದ್ದು ಅವು ಕ್ಯಾನ್ಸರ್ ಗೆ ಕಾರಣವಾಗುವ ಕಣಗಳ ವಿರುದ್ಧ ಹೋರಾಡುತ್ತವೆ.
ನಿಂಬೆ ಹಣ್ಣಿನ ಸಿಪ್ಪೆ ಸಾವಯವ ಆಗಿರುವುದರಿಂದ ಅದನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿಡಬೇಕು. ತಜ್ಞರು ಅದನ್ನು ಮನೆಯಲ್ಲಿ ಸುಲಭವಾಗಿ ಸಂರಕ್ಷಿಸಿಡುವ ವಿಧಾನ ತಿಳಿಸಿದ್ದಾರೆ.
ನಿಂಬೆ ಹಣ್ಣಿನ ಸಿಪ್ಪೆಯನ್ನು ಪುಡಿ ಇಲ್ಲವೇ ಚಟ್ನಿ ಮಾಡಿಕೊಳ್ಳಬೇಕು. ಪುಡಿಯನ್ನು ಮೇಲ್ಭಾಗದಲ್ಲಿ ಜಿಪ್ ಇರುವ ಪ್ಲಾಸ್ಟಿಕ್ ಚೀಲದಲ್ಲಿಟ್ಟು ಡೀಪ್ ಫ್ರೀಜ್ನಲ್ಲಿಡಬೇಕು, ಇಲ್ಲವೇ ಸಿಪ್ಪೆಯನ್ನು ಒಣಗಿಸಿ ಸ್ಟೋರ್ ಮಾಡಬಹುದು. ಸಿಪ್ಪೆಯನ್ನು ನೀವು ಓವನ್ ನಲ್ಲೂ ಒಣಗಿಸಬಹುದು.
ಪುಡಿ ಮಾಡಿದ ಸಿಪ್ಪೆಯನ್ನು ಹಲವಾರು ವಿಧಗಳಲ್ಲಿ ಉಪಯೋಗಿಸಬಹುದು: ಅದರಿಂದ ಲೆಮನ್ ಟೀ ತಯಾರಿಸಿ ಕುಡಿಯಬಹುದು ಅಥವಾ ಬೇರೆ ಪೇಯಗಳನ್ನು ಮಾಡಿಕೊಂಡು ಕುಡಿಯಬಹುದು.