ಹೊಸದುರ್ಗ:- ಜಿಲ್ಲಾಧಿಕಾರಿಗಳೇ, ಹೊಸದುರ್ಗ ತಹಶಿಲ್ದಾರ್ ಅವರೆ ನಿಮ್ಮ ಹುದ್ದೆ ಶಾಶ್ವತವಲ್ಲ ಎಂದು ಮಾಜಿ ಸಚಿವ ಗೂಳಿಹಟ್ಟಿ ಡಿ ಶೇಕರ್ ಎಚ್ಚರಿಕೆಯ ಆಡಿಯೋ ವೈರಲ್ ಆಗಿದೆ.
Heart Attack Deaths: ಹೃದಯಾಘಾತಕ್ಕೆ ಹಾಸನದಲ್ಲಿ ಮತ್ತೊಬ್ಬ ಸಾವು; ಹೆಚ್ಚಾಯ್ತು ಜನರಲ್ಲಿ ಆತಂಕ!
ಬುದವಾರ ಬೆಳಗ್ಗೆ 11.30 ಕ್ಕೆ ಈ ಒಂದು ಆಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹೊಸದುರ್ಗದ ಹ್ಯಾಂಡ್ ಪೋಸ್ಟ್ ಬಳಿ ಸೋಲಾರ್ ಕಂಪನಿಯವರು ಅಳತೆ ಮಾಡಲು ಹೋಗಿದ್ದಾರೆ. ಈ ಜಮೀನಿನಲ್ಲಿ ಹಲವು ಸಮುದಾಯದ ಜನ ಉಳುಮೆ ಮಾಡುತ್ತಿದ್ದು
ಸೋಲಾರ್ ಕಂಪನಿಗೆ ಜಮೀನು ನೀಡಿ ರೈತರನ್ನ ವಕ್ಕಲೆಬ್ಬಿಸಬೇಡಿ. ಖಾಸಗಿ ಕಂಪನಿಗಳು ಒಳ್ಳೆಯ ಲಂಚ ಕೊಡುತ್ತಾರೆ ದುಡ್ಡಿಗಾಗಿ ಜಮೀನು ಕೊಡಬೇಡಿ ಎಂದು ಮಾಜಿ ಸಚಿವ ಗೂಳಿಹಟ್ಟಿ ಡಿ ಶೇಕರ್ ಜಿಲ್ಲಾಧಿಕಾರಿ ಹಾಗೂ ಹೊಸದುರ್ಗ ತಹಶಿಲ್ದಾರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಜಮೀನನ್ನ ಸೋಲಾರ್ ಕಂಪನಿಗೆ ಮಂಜೂರು ಮಾಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಈ ಜಾಗ ಸೋಲಾರ್ ಕಂಪನಿಗೆ ಕೊಟ್ಟರೆ ಮುಂದೇ ನಾನು ಏನು ಮಾಡುತ್ತೇನೆ ಎಂಬುದು ಹೇಳಲ್ಲ ರೈತರನ್ನ ಇಟ್ಟುಕೊಂಡು ಹೋರಾಟ ಮಾಡಿ ತೋರಿಸುತ್ತೇನೆ ಎಂದು ಎಚ್ಚರಿಕೆ ನೀಡಿದ ಗೂಳಿಹಟ್ಟಿ ಡಿ ಶೇಕರ್ ಅವರು ಅಧಿಕಾರ ರಾಜಕೀಯ ಶಾಶ್ವತ ಅಲ್ಲ. ನಿಮ್ಮ ಅಧಿಕಾರ ಕೂಡ ಜಿಲ್ಲಾಧಿಕಾರಿ ಹುದ್ದೆ ತಹಶಿಲ್ದಾರ್ ಹುದ್ದೆ ಕೂಡ ಶಾಶ್ವತ ಅಲ್ಲ ಮುಂದೆ ಆಗುವ ಅನಾಹುತಕ್ಕೆ ಅವಕಾಶ ಕೊಡಬೇಕು ಎಂದು ನೇರವಾಗಿಯೇ ಮಾಜಿ ಸಚಿವ ಗೂಳಿಹಟ್ಟಿ ಡಿ ಶೇಕರ್ ಅವರು ಜಿಲ್ಲಾಧಿಕಾರಿ ಟಿ ವೆಂಕಟೇಶ್ ಹಾಗೂ ಹೊಸದುರ್ಗ ತಹಶಿಲ್ದಾರ್ ಗೆ ಎಚ್ಚರಿಕೆಯನ್ನ ನೀಡಿದ್ದಾರೆ.