ಚಾಮರಾಜನಗರ: ಚಾಮರಾಜನಗರದ ಪ್ರಗತಿ ನಗರದ ಇಮ್ಯಾನುವೆಲ್ ಸ್ಕೂಲ್ ಬಳಿ ಇರುವ ಮನೆಯೊಂದರಲ್ಲಿ ಭಾನುವಾರ ರಾತ್ರಿ ಕಳ್ಳತನವಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಮಸಮುದ್ರ ಗ್ರಾಮದ ಭಟ್ಟಮ್ಮ ಪ್ರಭುಸ್ಚಾಮಿರವರ ಪುತ್ರ ನಂಜುಂಡಸ್ವಾಮಿ ಉರುಫ್ ನಂದಿ ಅವರ ಮನೆಯಲ್ಲಿ ಕಳ್ಖತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಮನೆಯ ಬಾಗಿಲನ್ನು ಮೀಟಿ 30 ಗ್ರಾಂ ಚಿನ್ನ, 750 ಗ್ರಾಂ. ಬೆಳ್ಳಿ ಹಾಗೂ 1.20 ಲಕ್ಷ ನಗದು ಕಳ್ಳತನ ಮಾಡಿದ್ದಾರೆ ಎಂದು ಮನೆಯ ಮಾಲೀಕ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಹಿಟ್ ಅಂಡ್ ರನ್ ಕೇಸ್ – ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ನಂದಿಯವರ ತಂದೆ ಪ್ರಭುಸ್ವಾಮಿ ಹಾಗೂ ತಾಯಿ ಭಟ್ಟಮ್ಮರವರು ದೊಡ್ಡ ಮಗ ಮಂಜುನಾಥ್ ಕಾಚಕ್ಕಿರವರ ಮೈಸೂರು ಮನೆಗೆ ತೆರಳಿದ್ರು. ಕಿರಿಯ ಮಗ ನಂದಿ ಕೂಡ ಪತ್ನಿ ಸಮೇತ ಸಂಬಂಧಿಕರ ಊರಿಗೆ ತೆರಳಿದ್ರು. ಮನೆಯಲ್ಲಿ ಯಾರು ಇಲ್ಲದ ಸಮಯ ಗಮನಿಸಿದ ಖದೀಮರು ಮನೆಯ ಬಾಗಿಲು ಮೀಟಿ ಒಳನುಗ್ಗಿ ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಡಾಗ್ ಸ್ಕ್ವಾಡ್ ಸಮೇತ ಬಂದ ಡಿವೈಎಸಪಿ ಲಕ್ಷ್ಮಯ್ಯ ಹಾಗೂ ತಂಡವು ಮನೆಯನ್ನು ಪರಿಶೀಲನೆ ನಡೆಸಿದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರ ಪತ್ತೆಗಾಗಿ ತಂಡ ರಚಿಸಿದ್ದಾರೆ.