ಹುಬ್ಬಳ್ಳಿ: ಪ್ರತಿಷ್ಠಿತ ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕರಾಗಿ ಡಾ. ಈಶ್ವರ ಹೊಸಮನಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ನಿರ್ಧೇಶಕರಾಗಿದ್ದ ಎಪ್.ಎಸ್.ಕಮ್ಮಾರ ಅವರ ಸ್ಥಾನಕ್ಕೆ ಡಾ. ಈಶ್ವರ ಹೊಸಮನಿ ಆಯ್ಕೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಮೂಲತಃ ಇವರು ಬದಾಮಿಯವರಾದ ಡಾ. ಈಶ್ವರ ಹೊಸಮನಿ ಹುಬ್ಬಳ್ಳಿಯ ಕಿಮ್ಸನಲ್ಲೇ ಎಂಬಿಬಿಎಸ್ ಹಾಗೂ ಎಂಎಸ್ ಮುಗಿಸಿದ್ದು, ಇಲ್ಲಿಯೇ ಜನರಲ್ ಸರ್ಜರಿಯ ಎಚ್ಓಡಿ ಆಗಿ ಹಾಗೂ ಕಿಮ್ಸ್ ನ ಪ್ರಿನ್ಸಿಪಲ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.
1983 ನೇ ಬ್ಯಾಚನಲ್ಲಿ ಓದಿದ ಸಂಸ್ಥೆಯಲ್ಲಿಯೇ ಡೈರೆಕ್ಟರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೇ ಬರುವ ಮೇ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ.